ವಲಿಯುಲ್ಲಾಹಿ ದರ್ಗಾ ಶರೀಫ್ ಪೇರಡ್ಕ ಉರೂಸ್ ಸಮಾರಂಭ ಮತ್ತು ಸರ್ವಧರ್ಮ ಸಮ್ಮೆಳನ…

ಸುಳ್ಯ :ಮುಹಿಯದ್ದೀನ್ ಜುಮ್ಮಾ ಮಸೀದಿ ಪೇರಡ್ಕದಲ್ಲಿ ಜಾತಿಮತ ಭೇದವಿಲ್ಲದೆ ಸರ್ವರಿಂದಲೂ ಗೌರವಿಸುತ್ತಿರುವ ಆಶಾಕೇಂದ್ರವಾದ ಪೇರಡ್ಕ ವಲಿಯುಲ್ಲಾಹಿ ದರ್ಗಾ ಶರೀಫ್ ಉರೂಸ್ ಕಾರ್ಯಕ್ರಮ ಹಾಗೂ ಸರ್ವಧರ್ಮ ಸಮ್ಮೇಳನ ಮಾರ್ಚ್‌ 7 ರಂದು ಪೇರಡ್ಕ ತೆಕ್ಕಿಲ್ ಮಹಮ್ಮದ್ ಹಾಜಿ ವೇದಿಕೆಯಲ್ಲಿ ನಡೆಯಿತು.
ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೆಪಿಸಿಸಿ ಮಾಜಿ ಕಾರ್ಯದರ್ಶಿ ಟಿ.ಎಮ್.ಶಹೀದ್ ತೆಕ್ಕಿಲ್ ಪೇರಡ್ಕ ಪ್ರದೇಶದಲ್ಲಿ ತೆಕ್ಕಿಲ್ ಮಹಮ್ಮದ್ ಹಾಜಿಯವರ ಕಾಲದಿಂದಲೇ ಈ ಪ್ರದೇಶದ ಹಿಂದು ಸಹೋದರರು ದರ್ಗಾಕ್ಕೆ ಭೇಟಿಕೊಡುತ್ತಿದ್ದರು.ನಾವು ದೇವಸ್ಥಾನ ಮತ್ತು ಚರ್ಚ್ ಗಳಿಗೆ ಗೌರವವನ್ನು ನೀಡುತ್ತಾ ಬಂದಿದ್ದು, ಈ ಭಾಗದ ಜನರ ಸಮಸ್ಯೆಗಳಿಗೆ ಪಿ.ಪಿ.ಕೊಯಿಲೊ, ಸಣ್ಣಕ್ಕ ಸಹಕರಿಸುವುದನ್ನು ಸ್ಮರಿಸಬಹುದು ಎಂದು ಹೇಳಿದರು.
ಪೇರಡ್ಕ ಜುಮ್ಮಾ ಮಸೀದಿ ಖತೀಬರಾದ ಬಹು ಸುಹೇಲ್ ದಾರಿಮಿ ದುವಾ ನೆರವೇರಿಸಿದರು. ಕೆ.ವಿ.ಜಿ ಆಯುರ್ವೇದಿಕ್ ಕಾಲೇಜು ಅಡಳಿತಾಧಿಕಾರಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಸಂಪಾಜೆ ಗ್ರಾಮವು ಸೌಹಾರ್ದತೆಗೆ ಹೆಸರುವಾಸಿಯಾಗಿದ್ದು ಪ್ರತಿವರ್ಷ ಪೇರಡ್ಕ ಮಹಾನ್ ವ್ಯಕ್ತಿಗಳ ಸನ್ನಿಧಿಗೆ ಆಗಮಿಸುವ ಸರ್ವ ಜನಾಂಗದವರನ್ನು ಗೌರವಿಸಿ ಬರಮಾಡಿಕೊಳ್ಳುತ್ತಿರುವುದು ಸಂತೋಷವಾಗಿದೆ. ನನ್ನ ಮಗಳ ನೆನಪಿಗಾಗಿ ಸಂಪಾಜೆ ಗ್ರಾಮ ಪಂಚಾಯತ್ ಗೆ ರಕ್ಷಾ ಕವಚವನ್ನು ಕೊಡುಗೆಯಾಗಿ ನೀಡುತ್ತೇನೆ ಎಂದು ಘೋಷಿಸಿದರು. ಮುಂದಿನ ವರ್ಷ ಆದಿಚುಂಚನಗಿರಿ ಮಠದ ಸ್ವಾಮೀಜಿಯವರನ್ನು ಕರೆಸಿ ಸರ್ವಧರ್ಮ ಸಮ್ಮೇಳನ ಮಾಡಬೇಕು ಎಂದು ಹೇಳಿದರು.
ಸಿಐಟಿಯು ಸುಳ್ಯ ತಾಲ್ಲೂಕು ಅಧ್ಯಕ್ಷ ಕೆ.ಪಿ.ಜಾನಿ ಮಾತನಾಡಿ ನಾವೆಲ್ಲರೂ ಒಂದೇ ತಂದೆ ತಾಯಿಯ ಮಕ್ಕಳು. ಭಾರತ ದೇಶ ವಿವಿಧ ಜಾತಿ ಭಾಷೆಗಳನ್ನು ಒಳಗೊಂಡ ನಾಡು. ಇತಿಹಾಸವನ್ನು ತಿಳಿದು ಬದುಕಿದರೇ ನಮ್ಮಲ್ಲಿ ಸೌಹಾರ್ದತೆಯನ್ನು ನೆಲೆಸಲು ಸಾಧ್ಯ ಎಂದರು. ಸಭೆಯನ್ನು ಉದ್ದೇಶಿಸಿ ಕರ್ನಾಟಕ ರಾಜ್ಯ ಎಸ್ ಕೆಎಸ್ ಎಸ್ಎಫ್ ರಾಜ್ಯ ಅಧ್ಯಕ್ಷ ಬಹು ಅನೀಸ್ ಕೌಸರಿ ಮಾತನಾಡಿದರು .
ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ಆಯ್ಕೆಯಾದ ಜಿ.ಕೆ ಹಮೀದ್ ಮತ್ತು ಪೊಲೀಸ್ ಉಪನಿರೀಕ್ಷಕ ಅಜ್ಮಲ್ ಇಬ್ರಾಹಿಂ ರವರನ್ನು ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಆತಿಥಿಗಳಾಗಿ ಜ।ಅಬ್ದುಲ್ಲಾ ಕುಂಞ ಸಂಕೇಶ್,ಝಾಕರಿಯಾ ದಾರಿಮಿ, ಪೇರಡ್ಕ ಮಸೀದಿ ಅಧ್ಯಕ್ಷ ಅಲಿ ಹಾಜಿ,ಅಬ್ದುಲ್ ಖಾದರ್ ಹಾಜಿ ಅಮ್ಚಿನಡ್ಕ, ದ.ಕ.ಜಿಲ್ಲಾ ಎಸ್ ಡಿಪಿಐ ಕಾರ್ಯದರ್ಶಿ ಇಕ್ಬಾಲ್ ಬೆಳ್ಳಾರೆ,ಸಂಪಾಜೆ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಸೋಮಶೇಖರ ಕೈೂಂಗಾಜೆ, ಸುಳ್ಯ ವರ್ತಕರ ಸಂಘದ ಅಧ್ಯಕ್ಷ ಸುಧಾಕರ ರೈ ನೆಟ್ ಕಾಂ,ಟಿ.ಎಮ್.ಬಾಬ ಹಾಜಿ ತೆಕ್ಕಿಲ್,ಪೋಲಿಸ್ ಉಪನಿರೀಕ್ಷಕ ಅಜ್ಮಲ್ ಇಬ್ರಾಹಿಂ ಸಂಪಾಜೆ,ಅಲ್ಪಸಂಖ್ಯಾತ ಘಟಕದ ರಾಜ್ಯ ಸಂಯೋಜಕ ತಾಜ್ ಮಹಮ್ಮದ್ ಸಂಪಾಜೆ, ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಜಿ.ಕೆ.ಹಮೀದ್,ಸಂಪಾಜೆ ವರ್ತಕರ ಸಂಘದ ಅಧ್ಯಕ್ಷ ಯು.ಬಿ.ಚಕ್ರಪಾಣಿ,ಕೊಡಗು ಸಾಮಾಜಿಕ ಜಾಲತಾಣ ಮುಖ್ಯಸ್ಥ ಸೂರಜ್ ಹೊಸೂರು,ಸುಳ್ಯ ಪತ್ರಕರ್ತರ ಸಂಘದ ಅಧ್ಯಕ್ಷ ಕೃಷ್ಣ ಬೆಟ್ಟ, ಅಬ್ದುಲ್ ಕಲಾಂ ಸುಳ್ಯ ,ಇಬ್ರಾಹಿಂ ಹಾಜಿ ಮೈಲ್ ಕಲ್ಲು, ಲತೀಫ್ ಹರ್ಲಡ್ಕ,ಹನೀಫ್ ಎಸ್.ಕೆ,ಇಸ್ಮಾಯಿಲ್ ಐ.ಜಿ,ಮುನೀರ್ ದಾರಿಮಿ ಜಗದೀಶ್ ಪೆರಂಗೋಡಿ,ರಝಾಕ್ ಹಾಜಿ ಮೊಟ್ಟಂಗಾರ್,ಬದ್ರುದ್ದೀನ್ ಪಠೇಲ್,ಎಮ್.ಆರ್.ಡಿ.ಎ.ಅಧ್ಯಕ್ಷ ಜಾಕೀರ್ ಹುಸೈನ್ ,ತಾಜುದ್ದೀನ್ ಟರ್ಲಿ,ಹಕೀಂ ಪೇರಡ್ಕ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು .ಕಾದರ್ ಮೊಟ್ಟಂಗಾರ್ ಸ್ವಾಗತಿಸಿ ಅಶ್ರಫ್ ಟರ್ಲಿ ಕಾರ್ಯಕ್ರಮ ನಿರೂಪಿಸಿದರು.

Sponsors

Related Articles

Leave a Reply

Your email address will not be published. Required fields are marked *

Back to top button