`ಪೆನ್ಸಿಲ್ ಬಾಕ್ಸ್’ ಚಲನ ಚಿತ್ರ ಟ್ರೈಲರ್ ಬಿಡುಗಡೆ….

ಪುತ್ತೂರು: ದೃಶ್ಯ ಮೂವೀಸ್‍ನ ದಯಾನಂದ ಎಸ್.ರೈ ನಿರ್ಮಾಣದ ಕನ್ನಡ ಚಲನಚಿತ್ರ `ಪೆನ್ಸಿಲ್ ಬಾಕ್ಸ್’ ಇದರ ಟ್ರೈಲರ್ ಬಿಡುಗಡೆ ಗುರುವಾರ ಪುತ್ತೂರಿನ ಮಂಜಲ್ಪಡ್ಡು ಸುದಾನ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ನಡೆಸಲಾಯಿತು.
ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಟ್ರೈಲರ್ ಬಿಡುಗಡೆ ಮಾಡಿ ಮಕ್ಕಳ ಪ್ರತಿಭೆ ಅನಾವರಣಕ್ಕೆ ಚಲನಚಿತ್ರ ರಂಗ ಉತ್ತಮವಾದ ಮಾರ್ಗವಾಗಿದೆ. ಪುತ್ತೂರಿನ ಕಲಾವಿದರು ನಟಿಸಿದ ಪೆನ್ಸಿಲ್ ಬಾಕ್ಸ್ ಚಿತ್ರ ಶತದಿನೋತ್ಸವ ಆಚರಿಸುವ ಮೂಲಕ ಅಭೂತಪೂರ್ವ ಯಶಸ್ಸು ಕಾಣಲಿ ಎಂದು ಹಾರೈಸಿದರು.
ಕಾರ್ಯಕ್ರಮದಲ್ಲಿ ಪೆನ್ಸಿಲ್ ಬಾಕ್ಸ್ ನಿರ್ಮಾಪಕ ದಯಾನಂದ ಎಸ್ ರೈ, ನಗರಸಭಾ ಮಾಜಿ ಅಧ್ಯಕ್ಷ ಜಗದೀಶ್ ಶೆಟ್ಟಿ ನೆಲ್ಲಿಕಟ್ಟೆ, ವಿದ್ಯಾಮಾತಾ ಪೌಂಡೇಶನ್ ಪ್ರವರ್ತಕ ಭಾಗ್ಯೇಶ್ ರೈ, ಉದ್ಯಮಿ ಜಯಂತ ನಡುಬೈಲು, ತಾಲೂಕು ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಎಂ.ಮಾಮಚ್ಚನ್, ರಂಗಕರ್ಮಿ ಐ.ಕೆ.ಬೊಳುವಾರು, ವಕೀಲ ದುರ್ಗಾಪ್ರಸಾದ್ ರೈ ಕುಂಬ್ರ, ಸುದಾನ ವಿದ್ಯಾಸಂಸ್ಥೆಯ ಮುಖ್ಯಗುರು ಶೋಭಾ ನಾಗರಾಜ್, ಯುವಜನ ಒಕ್ಕೂಟದ ಜಿಲ್ಲಾಧ್ಯಕ್ಷ ಸುರೇಶ್ ರೈ ಸೂಡಿಮುಳ್ಳು, ಸಿನಿಮಾ ನಿರ್ದೇಶಕ ಜಯಪ್ರಕಾಶ್, ಪೆನ್ಸಿಲ್ ಬಾಕ್ಸ್ ಚಿತ್ರದ ನಾಯಕಿ ದೀಕ್ಷಾ ರೈ, ಚಲನಚಿತ್ರ ಹಾಡುಗಾರ್ತಿಯರಾದ ಕ್ಷಿತಿ ರೈ ಧರ್ಮಸ್ಥಳ, ಅಪೇಕ್ಷಾ, ಶ್ರೇಷ್ಠ ಮತ್ತಿತರರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಪೆನ್ಸಿಲ್ ಬಾಕ್ಸ್ ಚಿತ್ರದ ಪ್ರಚಾರಾರ್ಥವಾಗಿ `ಪೆನ್ಸಿಲ್ ಬಾಕ್ಸ್’ ರಥಕ್ಕೆ ಈ ಸಂದರ್ಭದಲ್ಲಿ ಚಾಲನೆ ನೀಡಲಾಯಿತು. ಪೆನ್ಸಿಲ್ ಬಾಕ್ಸ್ ನ ‘ವಂದೇ ಮಾತರಂ’ ಹಾಗೂ ‘ಸಂಡೇ ನಮ್ದೇ’ ಯಶಸ್ವೀ ಹಾಡುಗಳು ಮತ್ತು ನೃತ್ಯ ಕಾರ್ಯಕ್ರಮ ನಡೆಯಿತು. ಮಕ್ಕಳ ದಿನಾಚರಣೆ ಅಂಗವಾಗಿ ಸುದಾನ ವಿದ್ಯಾಸಂಸ್ಥೆಯಲ್ಲಿ ಪೆನ್ಸಿಲ್ ಬಾಕ್ಸ್ ಟ್ರೈಲರ್ ಬಿಡುಗಡೆ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಶಿಕ್ಷಕರಾದ ದಯಾನಂದ ರೈ ಕೋರ್ಮಂಡ ಸ್ವಾಗತಿಸಿದರು. ಬಾಲಕೃಷ್ಣ ಪೊರ್ದಾಳ್ ನಿರೂಪಿಸಿದರು.
ನವೆಂಬರ್ 29ಕ್ಕೆ ಪೆನ್ಸಿಲ್ ಬಾಕ್ಸ್ ಕನ್ನಡ ಚಲನಚಿತ್ರ ರಾಜ್ಯದಾದ್ಯಂತ ಬಿಡುಗಡೆಯಾಗಲಿದೆ.

Sponsors

Related Articles

Leave a Reply

Your email address will not be published. Required fields are marked *

Back to top button