ಗುರುವಾರ – ದ.ಕ 177 , ಉಡುಪಿ 349 ಕೊರೊನ ಪಾಸಿಟಿವ್ ಪತ್ತೆ…

ಮಂಗಳೂರು: ಇಂದು (ಗುರುವಾರ) ದ.ಕ ಜಿಲ್ಲೆಯಲ್ಲಿ 177 , ಉಡುಪಿ 349 ಕೊರೊನ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದೆ.

ದ.ಕ ಜಿಲ್ಲೆಯಲ್ಲಿ ಇಂದು 177 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 9712 ಕ್ಕೆ ಏರಿಕೆಯಾಗಿದೆ.ಇಂದು 6 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ಈ ಮೂಲಕ ಸಾವಿನ ಸಂಖ್ಯೆ 296 ಕ್ಕೆ ಏರಿಕೆಯಾಗಿದೆ. ಇಂದು 187 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. 2287 ಸಕ್ರಿಯ ಪ್ರಕರಣಗಳಿವೆ. 177 ಪ್ರಕರಣಗಳ ಪೈಕಿ 107 ಪ್ರಕರಣಗಳು ಮಂಗಳೂರಿನಿಂದ, 14 ಪ್ರಕರಣಗಳು ಬಂಟ್ವಾಳದಿಂದ, 16 ಪ್ರಕರಣಗಳು ಪುತ್ತೂರಿನಿಂದ, 12 ಪ್ರಕರಣಗಳು ಸುಳ್ಯದಿಂದ , 12 ಪ್ರಕರಣಗಳು ಬೆಳ್ತಂಗಡಿಯಿಂದ ಹಾಗೂ 16 ಪ್ರಕರಣಗಳು ಬೇರೆ ಜಿಲ್ಲೆಯವರದ್ದಾಗಿದೆ.
ಉಡುಪಿ ಜಿಲ್ಲೆಯಲ್ಲಿ ಇಂದು 349 ಕೊರೋನಾ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿವೆ. ಒಟ್ಟು ಪ್ರಕರಣಗಳ‌ ಸಂಖ್ಯೆ 9390 ಕ್ಕೆ ಏರಿಕೆಯಾಗಿದೆ. ಕಾರ್ಕಳ ತಾಲೂಕಿನ 56 ವರ್ಷದ ಮಹಿಳೆ, ಉಡುಪಿ ತಾಲೂಕಿನ 69 ವರ್ಷದ ವೃದ್ಧೆ ಕೋವಿಡ್ ನಿಂದ ಸಾವನ್ನಪ್ಪಿದ್ದು, ಜಿಲ್ಲೆಯಲ್ಲಿ ಇಬ್ಬರು ಕೊರೊನಾದಿಂದ ಸಾವನ್ನಪ್ಪಿದ್ದು ಜಿಲ್ಲೆಯಲ್ಲಿ ‌ಈವರೆಗೆ ಕೋವಿಡ್ -19 ಗೆ 80 ಮಂದಿ ಅಸುನೀಗಿದ್ದಾರೆ. ಇಂದು ಆಸ್ಪತ್ರೆ ಯಿಂದ 360 ಮಂದಿ ಬಿಡುಗಡೆಯಾಗಿದ್ದಾರೆ. ಈವರೆಗೆ ಒಟ್ಟು ‌6492 ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಸದ್ಯ ಜಿಲ್ಲೆಯಲ್ಲಿ 2818 ಸಕ್ರಿಯ ಪ್ರಕರಣಗಳಿವೆ.

Sponsors

Related Articles

Leave a Reply

Your email address will not be published. Required fields are marked *

Back to top button