ಸುದ್ದಿ

ಸೋನಿಯಾ ಗಾಂಧಿ ವಿರುದ್ಧ ದ್ವೇಷದ ರಾಜಕೀಯ: ಐವನ್ ಡಿಸೋಜಾ…

ಮಂಗಳೂರು: ಪಿಎಂ ಕೇರ್‌ ನಿಧಿಯ ಬಗ್ಗೆ ದೇಶದ ಜನರಿಗೆ ಮಾಹಿತಿ ಕೊಡಿ ಎಂದು ಕೇಳಿದ ಕಾರಣಕ್ಕೆ ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ಅವರ ಮೇಲೆ ಎಫ್‌ಐಆರ್‌ ದಾಖಲಿಸಿರುವುದು ಖಂಡನೀಯ. ಇದು ಪ್ರಶ್ನಿಸುವವರ ಹಕ್ಕನ್ನು ಕಸಿಯುವ ಘಟನೆಯಾಗಿದೆ ಹಾಗೂ ದ್ವೇಷದ ರಾಜಕಾರಣಕ್ಕೆ ಸಾಕ್ಷಿಯಾಗಿದೆ ಎಂದು ವಿಧಾನ ಪರಿಷತ್‌ ಸದಸ್ಯ ಐವನ್‌ ಡಿ’ಸೋಜಾ ಹೇಳಿದ್ದಾರೆ.
ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಮಾತು ಆಡದಂತೆ ಮಾಡುವ ದಮನಕಾರಿ ನೀತಿಗೆ ಕಾಂಗ್ರೆಸ್‌ ಅವಕಾಶ ನೀಡಲಾರದು. ಈ ಬಗ್ಗೆ ನಿರಂತರ ಹೋರಾಟ ನಡೆಸಲು ನಾವು ಸಿದ್ಧ. ಈ ಕೂಡಲೇ ಕೇಸ್‌ ವಾಪಾಸ್‌ ಪಡೆಯಬೇಕು ಹಾಗೂ ದೂರು ದಾಖಲು ಮಾಡಿದ ಪೊಲೀಸ್‌ ಅಧಿಕಾರಿಯ ಬಗ್ಗೆ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.
ದ.ಕ. ಜಿಲ್ಲೆಯಲ್ಲಿ ಖಾಸಗಿ ಬಸ್‌ ಆರಂಭವಾಗಿಲ್ಲ. ಬಸ್‌ ಮಾಲಕರ ಬೇಡಿಕೆಯನ್ನು ಪೂರೈಸುವಲ್ಲಿ ರಾಜ್ಯ ಸರಕಾರ ಸಂಪೂರ್ಣ ವಿಫಲವಾ ಗಿದೆ. ರಿಕ್ಷಾ ಚಾಲಕರ ಪ್ಯಾಕೇಜ್‌ ಘೋಷಿಸಿದ್ದರೂ ಸರಕಾರ ಸ್ಪಷ್ಟತೆ ನೀಡಿಲ್ಲ. ಬೀಡಿ ಕಾರ್ಮಿಕರಿಗೂ ಸರಕಾರ
ಯಾವುದೇ ಪರಿಹಾರ ನೀಡಿಲ್ಲ ಎಂದೂ ಅವರು ಹೇಳಿದ್ದಾರೆ.

Related Articles

Leave a Reply

Your email address will not be published.

Back to top button