ಸುದ್ದಿ

ಅಬುಸಾಲಿ ಗೂನಡ್ಕ ಮನೆಗೆ ಪೊನ್ನಣ್ಣ ಭೇಟಿ…

ಸುಳ್ಯ: ಮದೆನಾಡು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ, ಸಂಪಾಜೆ ಗ್ರಾಮ ಪಂಚಾಯತ್ ಸದಸ್ಯ, ಕಾಂಗ್ರೆಸ್ ಪಕ್ಷದ ನಾಯಕ ಅಬುಸಾಲಿ ಗೂನಡ್ಕ ರವರ ಮನೆಗೆ ಕೆಪಿಸಿಸಿ ಕಾನೂನು ಮತ್ತು ಮಾನವ ಹಕ್ಕು ಘಟಕದ ಅಧ್ಯಕ್ಷರಾದ ಕರ್ನಾಟಕ ಸರ್ಕಾರದ ಮಾಜಿ ಹೆಚ್ಚುವರಿ ಅಡ್ವೊಕೇಟ್ ಜನರಲ್ ಎ ಎಸ್ ಪೊನ್ನಣ್ಣ ಭೇಟಿ ನೀಡಿ ಭೂಕಂಪನದಿಂದ ಆದ ಹಾನಿಯನ್ನು ಪರಿಶೀಲಿಸಿ ಅಬುಸಾಲಿಯವರಿಗೆ ಧೈರ್ಯ ತುಂಬಿದರು.
ಈ ಸಂದರ್ಭದಲ್ಲಿ ಕೆಪಿಸಿಸಿಯ ಟಿ ಎಂ ಶಾಹೀದ್ ತೆಕ್ಕಿಲ್, ಅರೆಭಾಷೆ ಅಕಾಡಮಿಯ ಮಾಜಿ ಅಧ್ಯಕ್ಷರಾದ ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷರಾದ ಕೊಲ್ಯದ ಗಿರೀಶ್, ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಇಸ್ಮಾಯೀಲ್, ಶ್ರೀಧರನ್ ನಾಯರ್, ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಿ ಕೆ ಹಮೀದ್ ಗೂನಡ್ಕ, ಸೂರಜ್ ಹೊಸೂರು, ಮಡಿಕೇರಿ ನಗರ ಕಾಂಗ್ರೆಸ್ ಮುಖಂಡ ಚಂದ್ರಶೇಖರ್ , ಸಂಪಾಜೆ ಗ್ರಾಮ ಪಂಚಾಯತ್ ಸದಸ್ಯರಾದ ಎಸ್ ಕೆ ಹನೀಫ್ ಸಂಪಾಜೆ, ಗೂನಡ್ಕ ಮಸೀದಿಯ ಅಧ್ಯಕ್ಷರಾದ ಅಬ್ದುಲ್ಲ ಕೊಪ್ಪತಕಜೆ, ಕಾರ್ಯದರ್ಶಿ ಉಮ್ಮರ್ ದರ್ಕಾಸ್, ಸಿ ಎಂ ಅಬ್ದುಲ್ಲ ಚೇರೂರ್ ದರ್ಕಾಸ್, ರಹೀಂ ಬೀಜದಕಟ್ಟೆ , ಹಾರಿಸ್ ಗೂನಡ್ಕ, ಸಿದ್ದಿಕ್, ಡಿ ಆರ್ ಖಾದರ್, ಮುಜೀಬ್ ತೆಕ್ಕಿಲ್ ದರ್ಕಾಸ್, ಸಫೀರ್ ತೆಕ್ಕಿಲ್ ದರ್ಕಾಸ್, ಎನ್ ಎಸ್ ಯು ಐ ಮುಖಂಡ ಪಿ ಯು ಊಬೈಸ್ ಗೂನಡ್ಕ ಮೊದಲಾದವರು ಉಪಸ್ಥಿತರಿದ್ದರು.

Related Articles

Back to top button