ಅಶ್ಲೀಲ ಚಲನಚಿತ್ರ ಶೂಟಿಂಗ್ – ರಾಜ್ ಕುಂದ್ರಾ ಬಂಧನ…

ಮುಂಬೈ: ಅಶ್ಲೀಲ ಆಲ್ಬಂ, ಚಲನ ಚಿತ್ರ ಶೂಟಿಂಗ್ ಹಾಗೂ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿ ಉದ್ಯಮಿ ರಾಜ್ ಕುಂದ್ರಾರನ್ನು ಮುಂಬೈ ಪೊಲೀಸರು ಜು. 19 ರಂದು ಬಂಧಿಸಿದ್ದಾರೆ.
ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಪತಿ, ಉದ್ಯಮಿ ರಾಜ್ ಕುಂದ್ರಾಗೆ ಈ ಮೂಲಕ ಮತ್ತೊಂದು ಸಂಕಷ್ಟ ಎದುರಾಗಿದೆ. ಪ್ರಕರಣ ದಾಖಲಿಸಿಕೊಂಡ ಮುಂಬೈ ಅಪರಾಧ ದಳ ಪೊಲೀಸರು ತನಿಖೆ ನಡೆಸಿದ್ದಾರೆ. ಈ ವೇಳೆ ಕುಂದ್ರಾ ವಿರುದ್ಧ ಸಾಕಷ್ಟು ಪುರಾವೆಗಳು ಲಭ್ಯವಾಗಿದೆ.
ವರದಿಯ ಪ್ರಕಾರ, ಅಶ್ಲೀಲ ಚಿತ್ರಕ್ಕಾಗಿ ರಾಜ್ ಕುಂದ್ರಾ ನಟಿಯನ್ನು ಒತ್ತಾಯಪೂರ್ವಕವಾಗಿ ಬಳಸಿಕೊಳ್ಳುತ್ತಿದ್ದರು. ಬಳಿಕ ಈ ಚಿತ್ರಗಳನ್ನು ಮೊಬೈಲ್ ಆ್ಯಪ್ಲೀಕೇಶನ್ ಮೂಲಕ ಹಂಚಿಕೆ ಮಾಡಲಾಗುತ್ತಿತ್ತು. ಕೆಲ ಪೋರ್ನ್ ಚಿತ್ರಗಳನ್ನು ಲೈವ್ ಸ್ಟ್ರೀಮ್ ಕೂಡ ಮಾಡಲಾಗಿದೆ ಎಂಬ ಆರೋಪ ರಾಜ್ ಕುಂದ್ರಾ ಮೇಲಿದೆ. ಈ ಪ್ರಕರಣ ಸಂಬಂಧ ರಾಜ್ ಕುಂದ್ರಾ ಹಾಗೂ ಇತರ 9 ಮಂದಿಯನ್ನು ಬಂಧಿಸಲಾಗಿದೆ.

Sponsors

Related Articles

Back to top button