ನ.3 – ಮಂಗಳೂರಿನ ವಿವಿಧೆಡೆ ವಿದ್ಯುತ್ ನಿಲುಗಡೆ…

ಮಂಗಳೂರು: ವಿವಿಧ ಉಪ ಕೇಂದ್ರಗಳಿಂದ ಹೊರಡುವ ಫೀಡರ್‌ಗಳಲ್ಲಿ ನಿರ್ವಹಣಾ ಕಾಮಗಾರಿ ನಡೆಯಲಿರುವುದರಿಂದ ನ. 3 ರಂದು ಮಂಗಳೂರಿನ ವಿದ್ಯುತ್ ಹಲವೆಡೆ ನಿಲುಗಡೆಯಾಗಲಿದೆ.

ನ.3ರಂದು ಬೆಳಗ್ಗೆ 10ರಿಂದ ಮಧ್ಯಾಹ್ನ 3ಗಂಟೆಯವರೆಗೆ ಬೈಕಂಪಾಡಿ, ಗೋಕುಲ್ ನಗರ, ದುರ್ಗಾನಗರ, ಹೊಸಬೆಟ್ಟು, ಕುಳಾಯಿ, ತಾವರೆಕೊಳ, ಹೊನ್ನಕಟ್ಟೆ, ಆಚಾರಿ ಕಾಲನಿ, ಪಣಂಬೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗುವುದು.

ಅಲ್ಲದೆ, ಬೆಳಗ್ಗೆ 10ರಿಂದ ಮಧ್ಯಾಹ್ನ 1:30ರ ವರೆಗೆ ಗುರುಪುರ ಪೇಟೆ, ಆಲೈಗುಡ್ಡೆ, ಕೊಟ್ಟಾರಿಗುಡ್ಡೆ, ಮಠದಗುಡ್ಡೆ, ಮುಂಡೇವು, ಬಡಗ ಎಡಪದವು, ತೆಂಕ ಎಡಪದವು, ಉರ್ಕಿ, ಪೂಪಾಡಿ ಕಲ್ಲು, ಕುಪ್ಪೆಪದವು, ಕಿಲೆಂಜಾರು, ಕುಳವೂರು, ಪೂಮಾರಪದವು, ಮುಂಡೇವು, ಗಾಂಧೀನಗರ, ಎಡಪದವು, ಮಿಜಾರು, ಗರಡಿ, ಸುರಲ್ಪಾಡಿ, ಗಂಜೀಮಠ, ಪೊಳಲಿ, ಬಡಕಬೈಲು, ತೆಂಕ ಬೆಳ್ಳೂರು, ಬಡಗ ಬೆಳ್ಳೂರು, ಅಮ್ಮುಂಜೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗುತ್ತದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.

Sponsors

Related Articles

Leave a Reply

Your email address will not be published. Required fields are marked *

Back to top button