ಸುದ್ದಿ

ಪ್ರೊ. ವಿ.ಬಿ.ಅರ್ತಿಕಜೆಯವರಿಗೆ ಕನ್ನಡದ ಕಲ್ಹಣ ನೀರ್ಪಾಜೆ ಪ್ರಶಸ್ತಿ…

ಬಂಟ್ವಾಳ:ವಿಶ್ರಾಂತ ಪ್ರಾಧ್ಯಾಪಕರು ,ಹಿರಿಯ ಪತ್ರಕರ್ತರು , ಅಂಕಣಕಾರ, ಕವಿ, ಸಾಹಿತಿಯಾಗಿರುವ ಪ್ರೋ. ವಿ.ಬಿ. ಅರ್ತಿಕಜೆಯವರು 2022 ರ ಕನ್ನಡದ ಕಲ್ಹಣ ನೀರ್ಪಾಜೆ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಕನ್ನಡ ಮತ್ತು ಸಂಸ್ಕೃತ ಭಾಷೆಗಳಲ್ಲಿ ವಿದ್ವಾಂಸರಾಗಿದ್ದ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಮತ್ತು ಪತ್ರಕರ್ತರೂ ಆಗಿದ್ದ ದಿ. ನೀರ್ಪಾಜೆ ಭೀಮ ಭಟ್ಟರ ಹೆಸರಿನಲ್ಲಿ ಪ್ರತಿ ವರ್ಷ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ.
ಬಿ.ಸಿ.ರೋಡಿನ ಕನ್ನಡ ಭವನದಲ್ಲಿ ದ. 11 ರಂದು ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಲಿದೆ. ರಾಜ್ಯ ಕನ್ನಡ ಸಾಹಿತ್ಯ ಪರಿಷತ್ತಿನ ಪೂರ್ವಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ಪ್ರಶಸ್ತಿ ಪ್ರಧಾನ ಮಾಡಲಿರುವರು. ಹಿರಿಯ ವಿದ್ವಾಂಸ ಹಿರಣ್ಯ ವೆಂಕಟೇಶ್ವರ ಭಟ್ ಅಭಿನಂದನಾ ಭಾಷಣ ಮಾಡುವರು. ಸುದರ್ಶನ್ ಪಡಿಯಾರ್ ವಿಟ್ಲ ಸಂಸ್ಮರಣೆ ನಡೆಸಿಕೊಡಲಿರುವರು.
ಮಾಜಿ ಸಚಿವ ಬಿ.ರಮಾನಾಥ ರೈಯವರ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರಂಭದಲ್ಲಿ , ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೆ.ಸೇಸಪ್ಪ ಕೊಟ್ಯಾನ್ , ಕಲ್ಕೂರ ಪ್ರತಿಷ್ಠಾನ ಮಂಗಳೂರು ಇದರ ಅಧ್ಯಕ್ಷ ಪ್ರದೀಪ್ ಕುಮಾರ, ತಾಲೂಕು ಪಂಚಾಯತ್ ಮಾಜಿ ಉಪಾಧ್ಯಕ್ಷ ಬಿ.ಎಮ್ ಅಬ್ಬಾಸ್ ಅಲಿ ಉಪಸ್ಥಿತರಿರುವರು.
ಬಿ.ಸಿ.ರೋಡಿನ ಅನ್ನಪೂರ್ಣೇಶ್ವರಿ ದೇವಸ್ಥಾನದ ವಠಾರದಲ್ಲಿ ನೀರ್ಪಾಜೆ ಭೀಮ ಭಟ್ಟರ ಅಭಿಮಾನಿ ಬಳಗ ಪಾಣೆಮಂಗಳೂರು ಇವರ ವತಿಯಿಂದ ಆಮಂತ್ರಣ ಪ್ರತಿಕೆಯನ್ನು ಹಿರಿಯರಾದ ಎ.ಸಿ.ಭಂಡಾರಿಯವರು ಬಿಡುಗಡೆಗೊಳಿಸಿ ಶುಭ ಹಾರೈಸಿದರು. ನೀರ್ಪಾಜೆ ಭೀಮ ಭಟ್ಟರ ಅಭಿಮಾನಿ ಬಳಗ ಪಾಣೆಮಂಗಳೂರು ಇದರ ಅಧ್ಯಕ್ಷ ಸುದರ್ಶನ್ ಜೈನ್ , ಉಪಾಧ್ಯಕ್ಷ ಶಿವಶಂಕರ್ ನಂದಾವರ , ಸಂಚಾಲಕ ಕೊಯಿಲ ಮೋಹನ್ ರಾವ್ , ಕೈಯೂರು ನಾರಾಯಣ ಭಟ್ , ಜಯಾನಂದ ಪೆರಾಜೆ, ಶುಭಾಶ್ಚಂದ್ರ ಜೈನ್ ,ಮಂಜು ವಿಟ್ಲ ಉಪಸ್ಥಿತರಿದ್ದರು.

Advertisement

Related Articles

Back to top button