ಸರಕಾರಿ ಪ್ರಾಥಮಿಕ ಶಾಲೆ ಮಜಿ – ವಾರ್ಷಿಕೋತ್ಸವ ಹಾಗೂ ಮಕ್ಕಳ ಪ್ರತಿಭಾ ಪುರಸ್ಕಾರ…

ಬಂಟ್ವಾಳ: ಕೊಡುವ ಕೈ ಎಲ್ಲಕ್ಕಿಂತ ಶ್ರೇಷ್ಠ ಕೊಡುವ ಮನಸ್ಸಿರಬೇಕು ಅಷ್ಟೇ. ಒಂದು ಸಂಸ್ಥೆಯ ಏಳಿಗೆಗೆ ಹಲವಾರು ಕೈಗಳು ಸೇರಿದಾಗ ಖಂಡಿತವಾಗಿಯೂ ಅಭಿವೃದ್ಧಿ ಸಾಧ್ಯ. ಜಾತಿ ಧರ್ಮ ಭೇದವಿಲ್ಲದೆ ಒಟ್ಟಾಗಿ ದುಡಿದಾಗ ನಮ್ಮ ನಾಡು ಸರ್ವ ಜನಾಂಗದ ಶಾಂತಿಯ ತೋಟ ಆಗುವುದರಲ್ಲಿ ಸಂದೇಹವಿಲ್ಲ ಎಂದು ಬಂಟ್ವಾಳ ತಾಲೂಕಿನ ವೀರಕಂಬ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆ ಮಜಿ ಇಲ್ಲಿನ ಶಾಲಾ ವಾರ್ಷಿಕೋತ್ಸವ ಹಾಗೂ ಮಕ್ಕಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಶಾಲಾ ದತ್ತು ಸಂಸ್ಥೆಯ ಮುಖ್ಯಸ್ಥ ಮಾತಾ ಡೆವಲಪರ್ಸ್ ಸುರತ್ಕಲ್ ಇದರ ಮ್ಯಾನೇಜಿಂಗ್ ಡೈರೆಕ್ಟರ್ ಎನ್ ಸಂತೋಷ್ ಕುಮಾರ್ ಶೆಟ್ಟಿ ಅರೆಬೆಟ್ಟು ಮಾತನಾಡಿದರು.
ವೀರಕಂಭ ಗ್ರಾಮ ಪಂಚಾಯತಿನ ಅಧ್ಯಕ್ಷರಾದ ಲಲಿತಾ ದ್ವೀಪ ಪ್ರಜ್ವಲಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಶಾಲೆಗೆ ಕಂಪ್ಯೂಟರ್ ಹಾಗೂ ಪ್ರಿಂಟರ್ ಒದಗಿಸಿದ ಸುಧೀರ್ ಸಾಗರ್ ಉಪಾಧ್ಯಕ್ಷರು ಆಡಳಿತ ವಿಭಾಗ ಟಾಟಾ ಕಂಪನಿ ಮುಂಬೈರವರು ಶಾಲವತಿಯಿಂದ ಗೌರವವನ್ನು ಸ್ವೀಕರಿಸಿ ಪುಸ್ತಕಕ್ಕಿಂತ ಜೀವನದ ಪಾಠ ದೊಡ್ಡದು ಪ್ರತಿಫಲದ ಅಪೇಕ್ಷೆ ಇಲ್ಲದೆ ಮಾಡಿದ ಸಹಾಯ ಎಲ್ಲಕ್ಕಿಂತ ದೊಡ್ಡದು. ಮಜಿ ಶಾಲಾ ಅಭಿವೃದ್ಧಿಯಲ್ಲಿ ಎಲ್ಲಾ ರೀತಿಯಲ್ಲೂ ತನ್ನ ಸಂಸ್ಥೆಯ ಮೂಲಕ ಸಹಕಾರ ನೀಡಲಾಗುವುದು ಎಂದರು.
ಕಳೆದ 8 ವರ್ಷಗಳಿಂದ ಅಧ್ಯಕ್ಷರಾಗಿದ್ದ ಶಾಲಾಭಿವೃದ್ಧಿಯ ಸಮಿತಿಯ ನಿಕಟ ಪೂರ್ವ ಅಧ್ಯಕ್ಷರಾದ ಸಂಜೀವ ಮೂಲ್ಯ ಇವರ ಕಾರ್ಯವೈಕರಿಯನ್ನು ಗುರುತಿಸಿ ಸನ್ಮಾನಿಸಲಾಯಿತು.ಪಂಚಾಯತ್ ಉಪಾಧ್ಯಕ್ಷ ಜನಾರ್ದನ ಪೂಜಾರಿ ಹಾಗೂ ಹಿರಿಯ ವಿದ್ಯಾರ್ಥಿ ಕೃಷ್ಣಪ್ಪ ಪೂಜಾರಿ ಕೇಪುಲಕೋಡಿ ನೇತೃತ್ವದಲ್ಲಿ ನಿರ್ಮಿಸಿದ ಕೈ ತೊಳೆಯುವ ಘಟಕ, ಗ್ರಾಮ ಪಂಚಾಯತಿನ ಉದ್ಯೋಗ ಖಾತರಿ ಯೋಜನೆ ಅಡಿಯಲ್ಲಿ ನಿರ್ಮಿಸಿದ ದ್ರವ ತ್ಯಾಜ್ಯ ಘಟಕ,ಕುಸುಮಾವತಿ ಶೆಟ್ಟಿ ಮಜಿ ಕೊಡುಗೆಯಾಗಿ ನೀಡಿದ ಬ್ಯಾಡ್ ಸೆಟ್, ರೋಟರಿ ಕ್ಲಬ್ ಬಂಟ್ವಾಳ ಸಿಟಿ ವತಿಯಿಂದ ಪೂರ್ವ ಪ್ರಾಥಮಿಕ ತರಗತಿಗಳಿಗೆ ನೀಡಿದ 10 ಟೇಬಲ್ ಹಾಗೂ 50 ಸ್ಟುಲ್, ಯತಿನ್ ಕೊಂಬಿಲ ಒದಗಿಸಿದ ಪ್ರಿಂಟರ್, ರಾಮಚಂದ್ರ ಪೂಜಾರಿ ಪಾದೆ ಒದಗಿಸಿದ 25 ಲೀಟರ್ ಕುಕ್ಕರ್, ಲೋಕಯ ನಾಯ್ಕ್ ಕಿನ್ನಿಮೂಲೆ ಒದಗಿಸಿದ ಮರದ ಟೀಪಾಯಿ,ಮೊದಲಾದವುಗಳನ್ನು ಅತಿಥಿಗಳ ಸಮ್ಮುಖದಲ್ಲಿ ಶಾಲೆಗೆ ಹಸ್ತಾತರ ಮಾಡಲಾಯಿತು .
ಸದ್ರಿ ವರ್ಷದಲ್ಲಿ ಶಾಲೆಗೆ ಹಲವಾರು ರೀತಿಯಲ್ಲಿ ಸಹಾಯ ಸಹಕಾರ ಮಾಡಿದ ಮಹನೀಯರನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಶಾಲೆಯ ಮಕ್ಕಳ ವಿವಿಧ ಚಟುವಟಿಕೆಗಳಿಗೆ ಹಾಗೂ ಕಲಿಕೆಗೆ ಸಂಬಂಧಿಸಿದಂತೆ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಶಾಲಾ ಮಕ್ಕಳ ಸಾಹಿತ್ಯ ಸಂಘದ ಮೂಲಕ ಹೊರ ತಂದ ಹಸ್ತ ಪತ್ರಿಕೆ “ಮನಸು” ಅನಾವರಣಗೊಳಿಸಲಾಯಿತು.
ಮಕ್ಕಳ ಕಲಿಕೆಯ ಮಟ್ಟವನ್ನು ಹೆಚ್ಚಿಸುವಲ್ಲಿ ಶಿಕ್ಷಕರು ಬಹಳಷ್ಟು ಶ್ರಮಿಸುತ್ತಿದ್ದಾರೆ ಅವರ ಜೊತೆ ಪೋಷಕರಾದ ನಾವು ಜವಾಬ್ದಾರಿಯುತ ಕೆಲಸವನ್ನು ಮಾಡಿದಾಗ ಉತ್ತಮ ಫಲಿತಾಂಶ ಸಿಗುತ್ತದೆ ಎಂದು ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ವಹಿಸಿದ್ದ ಶಾಲಾಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಕೊರಗಪ್ಪ ನಾಯ್ಕ ಇವರು ಅಧ್ಯಕ್ಷೀಯ ಮಾತುಗಳನ್ನು ಆಡಿದರು.
ಕಾರ್ಯಕ್ರಮದಲ್ಲಿ ವೀರಕಂಭ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಜನಾರ್ಧನ ಪೂಜಾರಿ, ಸದಸ್ಯರುಗಳಾದ ಜಯಂತಿ, ಗೀತಾ ಜೆ ಗಾಂಭೀರ್, ಮೀನಾಕ್ಷಿ, ಲಕ್ಷ್ಮಿ,, ದಿನೇಶ್, ನಿಶಾಂತ್ ರೈ ,ಕಲ್ಲಡ್ಕ ಕ್ಲಸ್ಟರ್ ಸಮೂಹ ಸಂಪನ್ಮೂಲ ವ್ಯಕ್ತಿ ಜ್ಯೋತಿ, ರೋಟರಿ ಕ್ಲಬ್ ಬಂಟ್ವಾಳ ಸಿಟಿ ಪ್ರತಿನಿಧಿ ಸಂದೀಪ್ ಶೆಟ್ಟಿ ಅರೆಬೆಟ್ಟು, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಮೇಶ್ ಗೌಡ ಮೈರಾ, ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮದ ಬಳಿಕ ಅಂಗನವಾಡಿ ಪುಟಾಣಿಗಳಿಂದ, ಶಾಲಾ ವಿದ್ಯಾರ್ಥಿಗಳಿಂದ, ಹಿರಿಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. ಹಿರಿಯ ವಿದ್ಯಾರ್ಥಿ ಸಂಘದ ನೇತೃತ್ವದಲ್ಲಿ ಅನ್ನದಾನದ ವ್ಯವಸ್ಥೆ ಮಾಡಲಾಗಿತ್ತು. ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿ,ಮುಖ್ಯ ಶಿಕ್ಷಕಿ ಬೆನಡಿಕ್ಟ ಆಗ್ನೇಸ್ ಮಂಡೋನ್ಸ ಸ್ವಾಗತಿಸಿ, 2023 24 ನೇ ಸಾಲಿನಲ್ಲಿ ಶಾಲೆಯಲ್ಲಿ ನಡೆದ ಶೈಕ್ಷಣಿಕ ಹಾಗೂ ಪಠ್ಯೇತರ ಚಟುವಟಿಕೆಗಳ ವರದಿಯನ್ನು ಶಿಕ್ಷಕಿ ಮುಷಿ೯ದ ಬಾನು ವಾಚಿಸಿ, ಸನ್ಮಾನಿತರ ಸನ್ಮಾನ ಪತ್ರವನ್ನು ಶಿಕ್ಷಕಿಯರಾದ ಅನುಷಾ ಹಾಗೂ ಸಂಪ್ರಿಯ ವಾಚಿಸಿ, ಬಹುಮಾನಗಳ ಪಟ್ಟಿಯನ್ನು ಶಿಕ್ಷಕಿ ಮಮತಾ ವಾಚಿಸಿ, ಶಿಕ್ಷಕಿ ಶಕುಂತಲಾ ಎಂ ಬಿ ವಂದಿಸಿ, ಶಿಕ್ಷಕಿ ಸಂಗೀತ ಶರ್ಮಾ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದ ಅಚ್ಚುಕಟ್ಟಿನ ನಿರ್ವಹಣೆಗೆ ಶಾಲಾ ಅಭಿವೃದ್ಧಿಯ ಸಮಿತಿಯ ಸದಸ್ಯರುಗಳು, ಶಿಕ್ಷಕಿರಾದ ಜಯಲಕ್ಷ್ಮಿ, ಹರಿಣಾಕ್ಷಿ, ಜಯಚಿತ್ರ, ಮಮತಾ, ಪಲ್ಲವಿ, ಹೇಮಲತಾ, ಮೀನಾಕ್ಷಿ ಸಹಕರಿಸಿದರು.

whatsapp image 2023 12 18 at 9.59.30 am

whatsapp image 2023 12 18 at 9.59.30 am (1)

whatsapp image 2023 12 18 at 9.59.30 am (2)

whatsapp image 2023 12 18 at 9.59.31 am

Sponsors

Related Articles

Back to top button