ಸುಳ್ಯ ನ. ಪಂ. ಆವರಣದಲ್ಲಿ ಗಿಡನೆಟ್ಟು ಉನ್ನತ ವ್ಯಾಸಂಗಕ್ಕೆ ತೆರಳಿ ಮಾದರಿಯಾದ ಅಧಿಕಾರಿ…

ಸುಳ್ಯ: ಸುಳ್ಯ ನಗರ ಪಂಚಾಯತ್ ನಲ್ಲಿ 6 ವರ್ಷಗಳಿಂದ ಸುಳ್ಯ ನಗರಾಭಿವೃದ್ಧಿ ಪ್ರಾಧಿಕಾರದ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿ ಉನ್ನತ ವ್ಯಾಸಂಗಕ್ಕೆ ತೆರಳುತ್ತಿರುವ ಉಬೈದುಲ್ಲಾ ರವರನ್ನು ಶುಭ ಹಾರೈಸಿ ಬೀಳ್ಕೊಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಅಧ್ಯಕ್ಷ ವಿನಯಕುಮಾರ್ ಕಂಡಡ್ಕ ಅವರು ಭವಿಷ್ಯತ್ ನ ಸ್ಪಷ್ಟ ಕಲ್ಪನೆ ಇರುವ ಅಧಿಕಾರಿಗಳಿಂದ ಉತ್ತಮ ಸೇವೆ ಸಾಧ್ಯ. ಸುಳ್ಯದಲ್ಲಿ ಉಬೈದುಲ್ಲಾ 6 ವರ್ಷಗಳ ಸೇವೆ ಸಲ್ಲಿಸಿ ಉನ್ನತ ವ್ಯಾಸಂಗಕ್ಕೆ ತೆರಳುತ್ತಿರುವುದರಿಂದ, ಆಧುನಿಕ ಜಗತ್ತಿನ ಪರಿಕಲ್ಪನೆ ನನಸಾಗಲಿದೆ ಎಂದರು.
ನಗರ ಮಾಜಿ ಅಧ್ಯಕ್ಷರುಗಳಾದ ಎಂ. ವೆಂಕಪ್ಪಗೌಡ, ಎನ್. ಎ. ರಾಮಚಂದ್ರ, ಮಾಜಿ ಸದಸ್ಯ ಕೆ. ಎಂ. ಮುಸ್ತಾಫ, ಲಯನ್ಸ್ ಮಾಜಿ ರಾಜ್ಯಪಾಲ ಎಂ. ಬಿ. ಸದಾಶಿವ, ಸದಸ್ಯರುಗಳಾದ ಬುದ್ಧನಾಯ್ಕ್, ಶಶಿಕಲಾ ನೀರಬಿದಿರೆ ಮೊದಲಾದ ವರು ಉಪಸ್ಥಿತರಿದ್ದರು, ನಗರ ಸಿಬ್ಬಂದಿ ವರ್ಗದವರು ಉನ್ನತ ವ್ಯಾಸಂಗಕ್ಕೆ ಶುಭ ಹಾರೈಸಿದರು.
ಮುಖ್ಯಾಧಿಕಾರಿ ಸುಧಾಕರ್ ಸ್ವಾಗತಿಸಿ, ವಂದಿಸಿದರು.

Sponsors

Related Articles

Back to top button