ರಾಜ್ಯ ಅಲ್ಪಸಂಖ್ಯಾತ ಕಾಂಗ್ರೇಸ್ ಘಟಕದ ಕಾರ್ಯದರ್ಶಿಯಾಗಿ ಆಯ್ಕೆಯಾದ ಅಬೂಶಾಲಿ ಗೂನಡ್ಕರವರಿಗೆ ಸಾರ್ವಜನಿಕ ಅಭಿನಂದನಾ ಕಾರ್ಯಕ್ರಮ…
ಸುಳ್ಯ: ರಾಜ್ಯ ಅಲ್ಪಸಂಖ್ಯಾತರ ಕಾಂಗ್ರೇಸ್ ಘಟಕದ ನೂತನ ಕಾರ್ಯದರ್ಶಿಯಾಗಿ ಆಯ್ಕೆಯಾದ ಸಂಪಾಜೆ ಗ್ರಾಮ ಪಂಚಾಯತ್ ನ ಸದಸ್ಯರಾದ ಅಬೂಶಾಲಿ ಗೂನಡ್ಕರವರಿಗೆ ಅಭಿನಂದನಾ ಕಾರ್ಯಕ್ರಮವು ಆ. 25ರಂದು ಗೂನಡ್ಕ ಸಜ್ಜನ ಸಭಾಂಗಣದಲ್ಲಿ ನಡೆಯಿತು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ತೆಕ್ಕಿಲ್ ಪ್ರತಿಷ್ಟಾನದ ಸ್ಥಾಪಕಾಧ್ಯಕ್ಷರಾದ ಟಿ.ಎಂ. ಶಾಹೀದ್ ತೆಕ್ಕಿಲ್ ಮಾತನಾಡಿ ಸಂಪಾಜೆ ಗ್ರಾಮವು ಯಾವತ್ತು ಜಾತ್ಯತೀತ ತತ್ವ ಹಾಗೂ ಕಾಂಗ್ರೇಸ್ ಪಕ್ಷವನ್ನು ಬೆಂಬಲಿಸುತ್ತ ಬಂದಿರುವ ಗ್ರಾಮ, ಇಲ್ಲಿನ ಹಿರಿಯರಾಗಿದ್ದ ದಿವಂಗತರುಗಳಾದ ತೆಕ್ಕಿಲ್ ಮೊಹಮ್ಮದ್ ಹಾಜಿ , ಕೀಲಾರು ಗೋಪಾಲಕೃಷ್ಣಯ್ಯ, ಕೀಲಾರು ಶಿವರಾಮಯ್ಯ, ಸಣ್ಣಯ್ಯ ಪಟೇಲರು, ಗಣಪಯ್ಯ ಗೌಡ,ಗುಡ್ಡಪ್ಪ ಗೌಡ ಗೂನಡ್ಕರಂತಹ ಮಹನೀಯರು ಕೊಟ್ಟಿರತಕ್ಕಂತಹ ಕೋಮು ಸೌಹಾರ್ದತೆ ಮತ್ತು ಜಾತ್ಯಾತೀತ ಸಿದ್ಧಾಂತ ಸಹಕಾರ ಮನೋಭಾವನೆ ಇಂದಿಗೂ ಉಳಿದಿದೆ. ನಮ್ಮ ಯುವಕರು ಇದನ್ನು ಅರಿತುಕೊಳ್ಳಬೇಕು ಹಾಗೂ ಯುವಕರು ಸೂಕ್ಷ್ಮ ವಿಷಯಗಳಿಗೆ ಉಧ್ರೇಕಗೊಳ್ಳದೆ ಧರ್ಮ ಧರ್ಮದ ಬಗ್ಗೆ, ಜಾತಿ ಜಾತಿಗಳ ಬಗ್ಗೆ ಕಂದಕ ಏರ್ಪಡುವಂತಹ ಯಾವುದೇ ಕೆಲಸ ಮಾಡಬಾರದು ನಾವು ಜಾತ್ಯಾತೀತ ತತ್ವದಡಿಯಲ್ಲಿ ನಾವೆಲ್ಲರು ಒಂದೆ ಎಂಬ ಭಾವನೆಯಿದ ಬದುಕ ಬೇಕು. ಇಲ್ಲಿ ನಾನು ಚುನಾವಣೆಯಲ್ಲಿ ಸ್ಪರ್ಧಿಸಿಲ್ಲ, ಆದರೂ ನಮ್ಮೂರಿನ ಬಗ್ಗೆ ಇರುವ ಪ್ರೀತಿಯಿಂದ ಮತ್ತು ಹಿರಿಯರು ಕುಟುಂಬಸ್ಥರು ಹಾಕಿಕೊಟ್ಟ ಪರಂಪರೆಯಿಂದ ನನ್ನ ಊರಿಗೆ ಒಬ್ಬ ಜನ ಪ್ರತಿನಿದಿ ಅಲ್ಲದಿದ್ದರು ಕೋಟಿಗಟ್ಟಲೆ ಅನುದಾನವನ್ನು ತಂದುಕೊಟ್ಟ ಬಗ್ಗೆ ಹೆಮ್ಮೆಯಿದೆ ಎಂದರು. ಈ ಹಿಂದೆ ಸಿದ್ದರಾಮಯ್ಯ ಸರಕಾರ ಇರುವಾಗ ರೂಪಾಯಿ 5 ಕೋಟಿಯ ವಿಶೇಷ ಪ್ಯಾಕೇಜನ್ನು ಅಲ್ಲದೆ ಹಲವು ರೀತಿಯ ಅನುದಾನವನ್ನು ಗ್ರಾಮದ ವಿವಿಧ ಭಾಗಕ್ಕೆ ತಂದಿರುತ್ತೇನೆ. ಮುಂದೆ ರಾಜ್ಯದಲ್ಲಿ ಕಾಂಗ್ರೇಸ್ ಸರಕಾರ ಬಂದಾಗ ರೂಪಾಯಿ 10 ಕೋಟಿಯ ವಿಶೇಷ ಪ್ಯಾಕೇಜನ್ನು ತರುತ್ತೇನೆ ಎಂದರು. ಸಂಪಾಜೆ ಗ್ರಾಮದಲ್ಲಿ ಯುವಕರ ತಂಡ ಜಾತ್ಯಾತೀತವಾಗಿ ಪಕ್ಷಾತೀತವಾಗಿ ಒಳ್ಳೆಯ ರೀತಿಯಲ್ಲಿ ಕೆಲಸ ಮಾಡುತ್ತಿರುವುದು ಹೆಮ್ಮೆ ಎಂದು ಸಂತಸ ವ್ಯಕ್ತಪಡಿಸಿ ಅಬುಶಾಲಿ ಗೂನಡ್ಕ ರವರನ್ನು ಅಭಿನಂದಿಸಿದರು.
ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಜಿ.ಕೆ ಹಮೀದ್ ಗೂನಡ್ಕ ಅವರು ಅಭಿನಂದನಾ ಭಾಷಣ ಮಾಡಿ ಅಬುಶಾಲಿಯವರ ಜನ ಸೇವೆ, ನಿಷ್ಠೆಯನ್ನು ಸ್ಮರಿಸುತ್ತ ಈ ಹಿಂದೆ ಕೊಡಗಿನ ಮದೆನಾಡು ಗ್ರಾಮ ಪಂಚಾಯತ್ ನ ಸದಸ್ಯನಾಗಿ, ಅಧ್ಯಕ್ಷರಾಗಿ ಆ ಭಾಗದಲ್ಲಿ ಮಾಡಿದ ಅನೇಕ ಅಭಿವೃದ್ಧಿ ಕೆಲಸದ ಬಗ್ಗೆ ನೆನಪಿಸಿದರು ಮತ್ತು ಜನಸಾಮಾನ್ಯರ ಕಷ್ಟ ಕಾರ್ಪಣ್ಯಗಳಿಗೆ ಸ್ಪಂದಿಸುವವರಾಗಿದ್ದರೆಂದರು ಮುಂದೆಯು ಅವರು ಉನ್ನತ ಹುದ್ದೆಗೆ ಏರಲಿ ಎಂದು ಆಶಯ ವ್ಯಕ್ತ ಪಡಿಸಿದರು.
ಮುಖ್ಯ ಅಥಿತಿಯಾಗಿ ಭಾಗವಹಿಸಿದ ಪ್ರಗತಿಪರ ಕೃಷಿಕ ದಿನಕರ ಸಣ್ಣ ಮನೆ ಮಾತನಾಡಿ ಅಬುಶಾಲಿಯವರ ಪಕ್ಷ ನಿಷ್ಠೆ ಮೆಚ್ಚಲೆ ಬೇಕು. ಅವರು ಪಕ್ಷಕ್ಕಾಗಿ ತಮ್ಮ ಆರ್ಥಿಕತೆಯನ್ನೇ ಕಳೆದುಕೊಂಡಿರುತ್ತಾರೆ ಮತ್ತು ಉತ್ತಮ ಸಂಘಟಕ ಎಂದರು. ಕೊಡಗಿನ ಮದೆನಾಡು ಗ್ರಾಮದ ಅಧ್ಯಕ್ಷ ಆದ ದಿನದಿಂದ ಅವರ ಪರಿಚಯ ಅಲ್ಲಿನ ಮೂರು ಸಚಿವರೊಂದಿಗೆ ಒಳ್ಳೆಯ ಸಂಪರ್ಕ ಇರುವ ಜಾತ್ಯತೀತ ವ್ಯಕ್ತಿ ಅವರಿಗೆ ಇನ್ನೂ ಒಳ್ಳೆಯ ಅಧಿಕಾರ ಸಿಗಲಿ ಎಂದು ಹಾರೈಸಿದರು.
ಇನ್ನೋರ್ವ ಮುಖ್ಯ ಅಥಿತಿ ಪ್ರಗತಿಪರ ಕೃಷಿಕ ಸತ್ಯನಾರಾಯಣ ಭಟ್ ಮಾತನಾಡಿ ಅಬೂಶಾಲಿಯವರು ನಮ್ಮ ಗ್ರಾಮದ ಕ್ಷೇತ್ರಕ್ಕೆ ಅನೇಕ ಅಭಿವೃದ್ಧಿ ಕೆಲಸಗಳನ್ನು ಮಾಡಿರುತ್ತಾರೆ. ಅವರು ಎಲ್ಲ ಜನ ವರ್ಗದವರೊಂದಿಗೆ ಸಾಮರಸ್ಯದಿಂದ ಇರುತ್ತಾರೆಂದರು. ಅವರಿಗೆ ನನ್ನ ಎಲ್ಲಾ ರೀತಿಯ ನೈತಿಕ ಬೆಂಬಲ ಇದೆ ಎಂದು ಅವರ ಕೆಲಸವನ್ನು ಕೊಂಡಾಡಿದರು.
ಸಂಪಾಜೆ ಗ್ರಾಮ ಪಂಚಾಯತ್ ಸದಸ್ಯ ಸಂಪಾಜೆ ಶ್ರಿ ವಿಷ್ಣು ಮೂರ್ತಿ ದೇವಸ್ಥಾನದ ಅಧ್ಯಕ್ಷರಾದ ಜಗದೀಶ್ ರೈ ಕಲ್ಲುಗುಂಡಿ ಮಾತನಾಡಿ ಕಾಂಗ್ರೆಸ್ ಪಕ್ಷವು ವಿಶಾಲವಾದ ರಾಷ್ಟೀಯ ಪಕ್ಷವಾಗಿದ್ದು ನಮ್ಮಲ್ಲಿರುವ ಅಭಿಪ್ರಾಯ ವ್ಯತ್ಯಾಸಗಳನ್ನು ಮರೆತು ಪಕ್ಷ ಸಂಘಟನೆಯನ್ನು ಮಾಡಬೇಕು ಮತ್ತು ನಮ್ಮಲ್ಲಿರುವ ಜಾತಿ ಧರ್ಮದ ಅಸಮಾನತೆಯನ್ನು ದೂರ ಮಾಡಿ ಪರಸ್ಪರ ವಿಶ್ವಾಸದಿಂದ ಬಾಳಬೇಕೆಂದರು.
ತಾಜುದ್ದೀನ್ ಅರಂತೊಡು ಮಾತನಾಡಿ ಅಬುಶಾಲಿ ಗೂನಡ್ಕ ಉಬೈಸ್ ಗೂನಡ್ಕ ರಂತಹ ನಾಯಕರು ಪಕ್ಷಕ್ಕೆ ಇಂದು ಅಗತ್ಯ ಇದೆ ಅವರಲ್ಲಿ ನಾಯಕತ್ವ ಗುಣ ಇದೆ ಎಂದರು ತಾಜುದ್ದೀನ್ ತೆಕ್ಕಿಲ್ ದರ್ಕಾಸ್ ಗೂನಡ್ಕ ಮಾತನಾಡಿ ಅಬುಶಾಲಿ ಗೂನಡ್ಕ ನಿಷ್ಕಳಂಕ ವ್ಯಕ್ತಿ ಶುದ್ಧ ಹಸ್ತ ಮುಂದೆ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ಬರಲಿ ಎಂದು ಹಾರೈಸಿದರು.
ಅಭಿನಂದನೆಯನ್ನು ಸ್ವೀಕರಿಸಿ ಮಾತನಾಡಿದ ಅಬೂಸಾಲಿ ಗೂನಡ್ಕ ರವರು ಕಾಂಗ್ರೆಸ್ ಪಕ್ಷದಲ್ಲಿ ಪ್ರಾಮಾಣಿಕವಾಗಿ ದುಡಿದಿರುತ್ತೇನೆ ಅದಕ್ಕಾಗಿ ಪಕ್ಷವು ನನ್ನಂತವರನ್ನು ಗುರುತಿಸಿ ಉನ್ನತ ಹುದ್ದೆಯನ್ನು ನೀಡಿರುತ್ತದೆ. ಮೀಸಲಾತಿಯಲ್ಲಿ ನನಗೆ ಬಂದಂತಹ ಗ್ರಾಮ ಪಂಚಾಯತ್ ಅಧ್ಯಕ್ಷ ಸ್ಥಾನವನ್ನು ವ್ಯವಸ್ಥಿತವಾಗಿ ತಪ್ಪಿಸಿದಕ್ಕೆ ನನ್ನ ಮನಸಿಗೆ ಘಾಸಿಯಾಗಿತ್ತು. ಆದರೂ ಪಕ್ಷಕ್ಕೆ ದ್ರೋಹ ಮಾಡಿಲ್ಲ, ಬೇರೆ ಪಕ್ಷಕ್ಕೆ ಮತ ನೀಡಿಲ್ಲ ಎಂದರು. ನನ್ನ ನೇಮಕಕ್ಕೆ ಸಹಕರಿಸಿದ ಎಲ್ಲಾ ನಾಯಕರಿಗೆ ಕೃತಜ್ಞತೆಯನ್ನು ಸಲ್ಲಿಸಿಸುತ್ತೇನೆ. ಮುಂದೆಯೂ ತಮ್ಮೆಲ್ಲರ ಸಹಕಾರವನ್ನು ಯಾಚಿಸುವೆ ಎಂದರು.
ವೇದಿಕೆಯಲ್ಲಿ ಜಿ ಜಿ ಚಂದ್ರವಿಲಾಸ ಗೂನಡ್ಕ , ಗ್ರಾಮ ಪಂಚಾಯತ್ ನ ಸದಸ್ಯರಾದ ವಿಜಯಕುಮಾರ್ 3ನೇ ವಾರ್ಡ್ ನ ಬೂತ್ ಸಮಿತಿಯ ಅಧ್ಯಕ್ಷರಾದ ಸಿ.ಎಂ ಅಬ್ದುಲ್ಲ ಚೇರೂರ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಗೂನಡ್ಕ ಮಸೀದಿಯ ಮಾಜಿ ಅಧ್ಯಕ್ಷರಾದ ಹಾಜಿ ಪಿ.ಎ ಉಮ್ಮರ್ ಗೂನಡ್ಕ , ಪೇರಡ್ಕ ಗೂನಡ್ಕ ಮೋಹಿಯದ್ದಿನ್ ಜುಮಾ ಮಸ್ಜಿದ್ ಕಾರ್ಯದರ್ಶಿ ಟಿ.ಎಂ.ಅಬ್ದುಲ್ ರಜಾಕ್ ತೆಕ್ಕಿಲ್, ಚಿದಾನಂದ ಮೂಡನಕಜೆ , ಆನಂದ ಪೆಲ್ತಡ್ಕ, ವಸಂತ ಪೆಲ್ತಡ್ಕ, ವೆಂಕಪ್ಪ ಕೊರಂಬಡ್ಕ, ಜಯಕುಮಾರ್ ಗೋಪಾಲ, ಕುಂಞಕಣ್ಣ, ನಾರಾಯಣ ಪೆರಂಗೋಡಿ, ಜುಬೈರ್ ತೆಕ್ಕಿಲ್ ಪೇರಡ್ಕ, ಹಾರೀಸ್ ದರ್ಖಾಸ್, ಸೂಫಿ ದರ್ಖಾಸ್, ಆರಿಫ್ ತೆಕ್ಕಿಲ್ ದರ್ಖಾಸ್ ಗೂನಡ್ಕ,ಜುರೈದ್ ತೆಕ್ಕಿಲ್ ಪೇರಡ್ಕ, ಸಾದುಮನ್ ತೆಕ್ಕಿಲ್ ಪೇರಡ್ಕ ಮೊದಲಾದ ಅಬೂಸಾಲಿ ಅಭಿಮಾನಿಗಳು ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಎಲ್ಲರಿಗೂ ಭೋಜನದ ವ್ಯವಸ್ಥೆ ಕಲ್ಪಿಸಲಾಗಿತ್ತು. ಅರಂತೋಡು ವಲಯ ಕಾಂಗ್ರೇಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾದ ರಹೀಂ ಬೀಜದಕಟ್ಟೆ ಸ್ವಾಗತಿಸಿ ಎನ್ ಎಸ್ ಯು ಐ ನ ಜಿಲ್ಲಾ ಕಾರ್ಯದರ್ಶಿ ಉಬೈಸ್ ಗೂನಡ್ಕ ವಂಧಿಸಿದರು. ಸಂಪಾಜೆ ಗ್ರಾಮ ಪಂಚಾಯತ್ ನ ಸದಸ್ಯ ಎಸ್.ಕೆ. ಹನೀಫ್ ಸಂಪಾಜೆ ಕಾರ್ಯಕ್ರಮ ನಿರೂಪಿಸಿದರು.