ಪುತ್ತೂರು- ಇಂದು ಇಬ್ಬರಿಗೆ ಕೊರೋನಾ ದೃಢ???…

ಮಂಗಳೂರು: ಪುತ್ತೂರು ತಾಲೂಕಿನಲ್ಲಿ ಇಂದು(ಮಂಗಳವಾರ) ಮತ್ತೆ ಇಬ್ಬರಲ್ಲಿ ಕೊರೋನಾ ದೃಢಪಟ್ಟಿದೆ ಎಂದು ತಿಳಿದುಬಂದಿದೆ.
ಪುತ್ತೂರು ತಾಲೂಕಿನ ಉಪ್ಪಿನಂಗಡಿ ನಟ್ಟಿಬೈಲು ನಿವಾಸಿ 70 ವರ್ಷದ ವ್ಯಕ್ತಿಯೊಬ್ಬರಲ್ಲಿ ಸೋಂಕು ಕಾಣಿಸಿಕೊಂಡಿದೆ. ಇತ್ತೀಚೆಗೆ ಜ್ವರ ಕಾಣಿಸಿಕೊಂಡ ಕಾರಣ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಇವರಲ್ಲಿ ಕೊರೋನಾ ಕೋಂಕು ಇರುವುದು ದೃಢಪಟ್ಟಿದೆ. ನಗರಸಭಾ ವ್ಯಾಪ್ತಿಯ ಮೊಟೆತ್ತಡ್ಕ ನಿವಾಸಿ 62 ವರ್ಷದ ವ್ಯಕ್ತಿಯಲ್ಲಿ ಕೊರೋನಾ ದೃಢಪಟ್ಟಿದೆ. ಇವರು ಈಗಾಗಲೇ ಜ್ವರದ ಕಾರಣದಿಂದಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Sponsors

Related Articles

Leave a Reply

Your email address will not be published. Required fields are marked *

Back to top button