ಸುದ್ದಿ

ಪತಂಜಲಿ ಆಯುರ್ವೇದಿಕ್​ ಸಂಸ್ಥೆಯಿಂದ ಕೊರೊನ ಸೋಂಕಿಗೆ ಔಷಧಿ ‘ಕೊರೊನಿಲ್’ ಬಿಡುಗಡೆ…

ಹರಿದ್ವಾರ್: ಇಡೀ ದೇಶವನ್ನೇ ಕಂಗೆಡಿಸುತ್ತಿರುವ ಮಹಾಮಾರಿ ಕೊರೊನ ಸೋಂಕಿಗೆ ಪತಂಜಲಿ ಆಯುರ್ವೇದಿಕ್​ ಸಂಸ್ಥೆಯು ಔಷಧಿಯನ್ನು ಕಂಡುಹಿಡಿದಿದ್ದು, ಇಂದು ಬಿಡುಗಡೆಗೊಳಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಬಾಬಾ ರಾಮ್ ದೇವ್ ಈ ​ ಔಷಧವು ರೋಗಿಗಳನ್ನು 5 ರಿಂದ 10 ದಿನಗಳಲ್ಲಿ ಗುಣಪಡಿಸಲಿದ್ದು, ಶೇ. 100 ರಷ್ಟು ಚೇತರಿಕೆ ದರವಿದೆ.ಅಶ್ವಗಂಧ, ಗಿಲೊಯ್​ ಮತ್ತು ತುಳಸಿ ಮಿಶ್ರಣದಿಂದ ಔಷಧವನ್ನು ತಯಾರಿಸಲಾಗಿದೆ ಎಂದರು.

ಪತಂಜಲಿ ಆಯುರ್ವೇದಿಕ್​ ಸಂಸ್ಥೆಯ ವಿಜ್ಞಾನಿಗಳು ತಯಾರಿಸಿದ ಔಷಧವನ್ನು ಸೇವಿಸಿದ 5 ರಿಂದ 14 ದಿನಗಳಲ್ಲಿ ರೋಗಿಗಳ ಪರೀಕ್ಷೆಯಲ್ಲಿ ಕೊರೊನಾ ನೆಗೆಟಿವ್ ಬಂದಿದೆ. ಮೊದಲಿಗೆ 100 ಕರೊನಾ ರೋಗಿಗಳಲ್ಲಿ ಔಷಧ ಪ್ರಯೋಗಿಸಿ ಶೇ. 100 ರಷ್ಟು ಧನಾತ್ಮಕ ಫಲಿತಾಂಶ ಪಡೆಯಲಾಯಿತು. ಮುಂದಿನ ನಾಲ್ಕೈದು ದಿನಗಳಲ್ಲಿ ಸಾಕ್ಷಿ ಮತ್ತು ಡಾಟಾಗಳನ್ನು ಬಿಡುಗಡೆ ಮಾಡಲಿದ್ದೇವೆ ಎಂದು ಪತಂಜಲಿ ಸಿಇಒ ಆಚಾರ್ಯ ಬಾಲಕೃಷ್ಣ ಹೇಳಿದ್ದಾರೆ.

Related Articles

Leave a Reply

Your email address will not be published.

Back to top button