ಬಂಟ್ಸ್ ವೆಲ್ಫೇರ್ ಟ್ರಸ್ಟ್ ನಿಂದ ‘ವಿಶ್ವ ಬಂಟರ ಸಮ್ಮೇಳನ’ ಬ್ರೋಶರ್ ಬಿಡುಗಡೆ…

ಐಕಳ ಹರೀಶ್ ಶೆಟ್ಟಿ ಅಪ್ರತಿಮ ನಾಯಕ: ಡಾ. ಎ. ಸದಾನಂದ ಶೆಟ್ಟಿ...

ಮಂಗಳೂರು: ‘ಜಾಗತಿಕ ಬಂಟರ ಸಂಘಗಳ ಒಕ್ಕೂಟವನ್ನು ಸಮಾಜ ಕಲ್ಯಾಣ ವ್ಯವಸ್ಥೆಯ ಉತ್ತುಂಗಕ್ಕೆ ಏರಿಸಿದ ಐಕಳ ಹರೀಶ್ ಶೆಟ್ಟಿ ಓರ್ವ ಅಪ್ರತಿಮ ನಾಯಕ. ಬಂಟ ಸಮಾಜವಲ್ಲದೆ ಇತರರ ಕಷ್ಟಕಾರ್ಪಣ್ಯಗಳಿಗೆ ಸ್ಪಂದಿಸಿ ನೆರವು ನೀಡುವ ಅವರ ಗುಣ ಎಲ್ಲಾ ಸಂಘಟನೆಗಳಿಗೆ ಮಾದರಿಯಾಗಿದೆ. ಒಕ್ಕೂಟದ ಮಹತ್ವಾಕಾಂಕ್ಷೆಯ ವಿಶ್ವ ಸಮ್ಮೇಳನ ಹೊಸ ಚರಿತ್ರೆಯನ್ನು ಬರೆಯುವಂತಾಗಲಿ’ ಎಂದು ಇಂಟರ್ನ್ಯಾಷನಲ್ ಬಂಟ್ಸ್ ವೆಲ್ಫೇರ್ ಟ್ರಸ್ಟ್ ಸ್ಥಾಪಕಾಧ್ಯಕ್ಷ ಡಾ. ಎ. ಸದಾನಂದ ಶೆಟ್ಟಿ ಹೇಳಿದ್ದಾರೆ.

ಅಕ್ಟೋಬರ 28 ಮತ್ತು 29ರಂದು ಉಡುಪಿಯ ಅಜ್ಜರಕಾಡು ಮೈದಾನದಲ್ಲಿ ಜಾಗತಿಕ ಬಂಟರ ಸಂಘಗಳ ಒಕ್ಕೂಟ ಆಯೋಜಿಸಿರುವ ‘ವಿಶ್ವ ಬಂಟರ ಸಮ್ಮೇಳನ – 2023’ ಕಾರ್ಯಕ್ರಮದ ಮಾಹಿತಿ ಪತ್ರ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಸರ್ವರ ಸಹಕಾರ ಅಗತ್ಯ:

ಸಮ್ಮೇಳನಕ್ಕೆ ಕರೆ ನೀಡಿ ಮಾತನಾಡಿದ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ‘ಎ. ಸದಾನಂದ ಶೆಟ್ಟರು ಬಂಟರ ಮಾತೃ ಸಂಘದ ಅಧ್ಯಕ್ಷರಾಗಿದ್ದಾಗ 2002 ರಲ್ಲಿ ಮಂಗಳೂರಿನ ಕೂಳೂರು ಮೈದಾನದಲ್ಲಿ ಜರಗಿದ ವಿಶ್ವ ಬಂಟರ ಸಮ್ಮೇಳನ ದೊಡ್ಡ ಇತಿಹಾಸ ನಿರ್ಮಿಸಿದೆ. ಆದರೆ ಪ್ರಸ್ತುತ ಒಕ್ಕೂಟ ಹಮ್ಮಿಕೊಂಡಿರುವ ವಿಶ್ವ ಮಟ್ಟದ ಸಮ್ಮೇಳನ ಹಲವು ಸವಾಲುಗಳನ್ನು ಎದುರಿಸಿ ಯಶಸ್ಸು ಪಡೆಯಬೇಕಿದೆ. ಇದಕ್ಕೆ ನಾಡು ಹೊರನಾಡುಗಳ ಸರ್ವ ಸಮಾಜ ಬಾಂಧವರು ಶಕ್ತಿ ಮೀರಿ ಸಹಕಾರ ನೀಡಬೇಕಾದ ಅಗತ್ಯವಿದೆ’ ಎಂದು ನುಡಿದರು.

ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ, ಜೊತೆ ಕಾರ್ಯದರ್ಶಿ ಚಂದ್ರಹಾಸ ಡಿ. ಶೆಟ್ಟಿ, ಕಾರ್ಮಿಕ ನಾಯಕ ಸುರೇಶ್ ಚಂದ್ರ ಶೆಟ್ಟಿ, ಇಂಟರ್ನ್ಯಾಷನಲ್ ಬಂಟ್ಸ್ ವೆಲ್ಫೇರ್ ಟ್ರಸ್ಟ್ ಕಾರ್ಯಾಧ್ಯಕ್ಷ ದೇವಿ ಚರಣ್ ಶೆಟ್ಟಿ, ಮಹಿಳಾ ವಿಭಾಗದ ಸಂಚಾಲಕಿ ವಿಜಯಲಕ್ಷ್ಮಿ ಬಿ. ಶೆಟ್ಟಿ ಉಪಸ್ಥಿತರಿದ್ದರು.

ಇಂಟರ್ನ್ಯಾಷನಲ್ ಬಂಟ್ಸ್ ವೆಲ್ಫೇರ್ ಟ್ರಸ್ಟ್ ನ ಸಂಘಟನಾ ಕಾರ್ಯದರ್ಶಿ ರಾಜಗೋಪಾಲ ರೈ ಸ್ವಾಗತಿಸಿದರು. ‘ಸದಾಶಯ’ ಸಂಚಾಲಕ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಕಾರ್ಯಕ್ರಮ ಸಂಯೋಜಿಸಿದರು. ಸಾಹಿಲ್ ರೈ ಪ್ರಾರ್ಥಿಸಿ, ವಂದಿಸಿದರು.

whatsapp image 2023 09 23 at 11.59.23 am
whatsapp image 2023 09 23 at 12.02.47 pm
whatsapp image 2023 09 23 at 11.59.53 am
whatsapp image 2023 09 23 at 12.03.13 pm
Sponsors

Related Articles

Back to top button