ಸುದ್ದಿ

ಶ್ರೀ ಪುತ್ತಿಗೆ ಮಠದ ಪಂಚಾoಗ ಬಿಡುಗಡೆ…

ಉಡುಪಿ:ಶ್ರೀ ಪುತ್ತಿಗೆ ಮಠದ 33 ನೇ ವರ್ಷದ ಪ್ರಕಟಣೆ ಶೋಭಕೃತ ಸಂವತ್ಸರದ ದೃಗ್ಗಣಿತ ಆಧಾರಿತ ಶ್ರೀ ಕೃಷ್ಣ ಮುಖ್ಯಪ್ರಾಣ ಪಂಚಾoಗಂ ನ್ನು ಶ್ರೀ ಪುತ್ತಿಗೆ ಮಠಾಧೀಶರಾದ ಶ್ರೀ ಶ್ರೀ ಸುಗುಣೇoದ್ರ ತೀರ್ಥ ಸ್ವಾಮೀಜಿ ಬಿಡುಗಡೆಗೊಳಿಸಿದರು.
ರಥಬೀದಿಯಲ್ಲಿರುವ ಶ್ರೀ ಚಂದ್ರೆಶ್ವರ ದೇಗುಲದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಶ್ರೀಪಾದರು ಹೊಸ ವರ್ಷದ ಪಂಚಾoಗದ ಸದುಪಯೋಗ ಆಸ್ತಿಕ ಭಕ್ತರಿಗೆ ದೊರಕಲಿ ಎಂದು ಹಾರೈಸಿದರು.
ಶ್ರೀ ಮಠದ ಬೆಂಗಳೂರಿನ ಶಾಖೆ ಶ್ರೀ ಗೋವರ್ಧನ ಕ್ಷೇತ್ರ ಸಹಿತ ವಿವಿಧ ಕೇಂದ್ರಗಳಲ್ಲಿ ಪಂಚಾoಗ ಲಭ್ಯವಿವೆ ಎಂದು ಶ್ರೀ ಮಠದ ಪ್ರಕಟಣೆಯಲ್ಲಿ ತಿಳಿಸಲಾಗಿದೆ .ಹೆಚ್ಚಿನ ಮಾಹಿತಿಗಾಗಿ 8792158946 ನ್ನು ಸಂಪರ್ಕಿಸಬಹುದು.

Advertisement

Related Articles

Back to top button