ಸುದ್ದಿ

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಹೊಸ ವಾಹನ ನೀಡುವ ಕುರಿತು ರಿಯಾಝ್ ಕಟ್ಟೆಕ್ಕಾರ್ ರಿಂದ ಮನವಿ…

ಸುಳ್ಯ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಹೊಸ ವಾಹನ ನೀಡುವ ಕುರಿತು ರಿಯಾಝ್ ಕಟ್ಟೆಕ್ಕಾರ್ ರಿಂದ ದ.ಕ. ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಸುಳ್ಯ ತಾಲೂಕಿನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಇರುವ ವಾಹನವು 1990 ರ ಮೋಡೆಲ್ ನ ಜೀಪು ಆಗಿದ್ದು, ಈ ವಾಹನವು ಬಂಟ್ವಾಳ ತಾಲೂಕಿನ ಇಲಾಖೆಗೆ ಸೇರಿದ ವಾಹನವಾಗಿದೆ.ಇದು ಸುಳ್ಯ ತಾಲ್ಲೂಕಿನಾದ್ಯಂತ ಸಂಚರಿಸಿ ರಿಪೇರಿಗೆ ಬಂದು ಅಲ್ಲಲ್ಲಿ ಬಾಕಿಯಾಗುವ ಸಾಧ್ಯತೆ ಇದ್ದು, ಸುಳ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು ಕಳೆದ 1 ವರ್ಷದ ಹಿಂದೆಯೇ ರದ್ದು ಪಡಿಸಿದೆ. ಆದ್ದರಿಂದ ಅತೀ ಶೀಘ್ರವಾಗಿ ನೂತನ ವಾಹನವನ್ನು ಸುಳ್ಯ ತಾಲೂಕಿನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ನೀಡಬೇಕೆಂದು ರಿಯಾಝ್ ಕಟ್ಟೆಕ್ಕಾರ್ ದ.ಕ. ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.

 

 

ರಿಯಾಝ್ ಕಟ್ಟೆಕ್ಕಾರ್

Related Articles

Leave a Reply

Your email address will not be published.

Back to top button