ಸುದ್ದಿ

ದೀಪಿಕಾ ಪ್ರೌಢ ಶಾಲೆಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ …

ಬಂಟ್ವಾಳ: 2020-21 ನೇ ಸಾಲಿನ SSLC ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಪಾಸಾದ ದೀಪಿಕಾ ಪ್ರೌಢಶಾಲೆ ಮೊಡಂಕಾಪು ಇಲ್ಲಿನ ಏಳು ಮಂದಿ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಅಭಿನಂದಿಸುವ ಕಾರ್ಯಕ್ರಮ ನೆರವೇರಿತು.
ಕಾರ್ಯಕ್ರಮವು ಶಾಲಾ ಶಿಕ್ಷಕಿ ಶ್ರೀಮತಿ ಶಾಲಿನಿ ಇವರ ಪ್ರಾರ್ಥನೆಯೊಂದಿಗೆ ಆರಂಭವಾಯಿತು . ಶಾಲಾ ಮುಖ್ಯಶಿಕ್ಷಕರಾದ ಸಾಧುರವರು ನೆರೆದಿದ್ದ ಎಲ್ಲರನ್ನೂ ಸ್ವಾಗತಿಸಿದರು . ಶ್ರೀಮತಿ ಪ್ರಫುಲ್ಲಾ ಸಲ್ಡಾನ್ಹಾ ಇವರು ಅಭಿನಂದನಾ ಮಾತುಗಳನ್ನಾಡಿದರು . ಕಾರ್ಯಕ್ರಮ ದ ಮುಖ್ಯ ಅತಿಥಿಯಾಗಿದ್ದ ಬಂಟ್ವಾಳ ಪುರಸಭಾ ಸದಸ್ಯರಾದ ಲೋಲಾಕ್ಷ ಶೆಟ್ಟಿ ವಿದ್ಯಾರ್ಥಿಗಳಿಗೆ ಶುಭವನ್ನು ಹಾರೈಸಿದರು .
ಶಾಲಾ ಆಡಳಿತ ಮಂಡಳಿಯ ಸದಸ್ಯ ಅಶ್ವಿನ್ ಕುಮಾರ್ ರೈ ಮಾತನಾಡಿ ಶಾಲೆಯ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು . ಸಭಾಧ್ಯಕ್ಷತೆಯನ್ನು ವಹಿಸಿದ ಶಾಲಾ ಸಂಚಾಲಕರಾದ ವಂ|ಫಾ| ವಲೇರಿಯನ್ ಡಿ ಸೋಜ ಮಕ್ಕಳಿಗೆ ಮೆಚ್ಚುಗೆಯ ಮಾತುಗಳಿಂದ ಹರಸಿದರು .
ಕಾರ್ಯಕ್ರಮದಲ್ಲಿ ಶಾಲಾ ಆಡಳಿತ ಮಂಡಳಿಯ ಕಾರ್ಯದರ್ಶಿಗಳಾದ ರಿಚರ್ಡ್ ಮೊಂತೆರೋ, ಸದಸ್ಯರಾದ ಹೆರಾಲ್ಡ್ ಡಿ ಸೋಜ, ನಿವೃತ್ತ ಮುಖ್ಯಶಿಕ್ಷಕಿ ಫ್ಲಾವೀಯ ಕ್ರಾಸ್ತ , ಇನ್ಪೆಂಟ್ ಚರ್ಚ್ ನ ಸಹಾಯಕ ಧರ್ಮಗುರುಗಳಾದ ಫಾ|ತ್ರಿಶಾನ್ ಡಿ ಸೋಜ , ಇನ್ಪೆಂಟ್ ಆಂಗ್ಲ ಮಾಧ್ಯಮ ಶಾಲಾ ಮುಖ್ಯಶಿಕ್ಷಕರಾದ ಮೆಲ್ವಿನ್ ಲೋಬೋ ಹಾಗೂ ಮಕ್ಕಳ ಹೆತ್ತವರು ,ಶಾಲಾ ಶಿಕ್ಷಕರು ಶಿಕ್ಷಕೇತರ ಸಿಬ್ಬಂದಿವರ್ಗ ಉಪಸ್ಥಿತರಿದ್ದರು. ಹಿರಿಯ ಶಿಕ್ಷಕರಾದ ಶ್ರೀಯುತ ತಿಪ್ಪೇಸ್ವಾಮಿ . ಆರ್ ಕಾರ್ಯಕ್ರಮ ನಿರ್ವಹಿಸಿದರು.

Related Articles

Back to top button