ಆಶ್ರಯ ಯೋಜನೆಯ ಅನುದಾನದ ಬಾಕಿ ಕಂತುಗಳ ಬಿಡುಗಡೆಗೆ ಕ್ರಮಕೈಗೊಳ್ಳುವಂತೆ ಶಾಸಕರಿಗೆ ರಿಯಾಜ್ ಕಟ್ಟೆಕ್ಕಾರ್ ಮನವಿ….
ಸುಳ್ಯ: ನಗರ ಪಂಚಾಯತ್ ವ್ಯಾಪ್ತಿಯಲ್ಲಿ ಹಲವು ಫಲಾನುಭವಿಗಳಿಗೆ ಆಶ್ರಯ ಯೋಜನೆಯಲ್ಲಿ ವಸತಿ ನಿರ್ಮಿಸಲು ಆದೇಶ ದೊರೆತಿದ್ದು, ಅನುದಾನದ ಕಂತು ಬಿಡುಗಡೆಗೊಳ್ಳದೆ ಇರುವುದರಿಂದ ಮನೆ ನಿರ್ಮಿಸಲು ಆಗುತ್ತಿಲ್ಲ. ಹಾಗಾಗಿ ಕೂಡಲೇ ಬಾಕಿ ಉಳಿದಿರುವ ಅನುದಾನದ ಕಂತುಗಳನ್ನು ಬಿಡುಗಡೆಗೊಳಿಸುವಲ್ಲಿ ಕ್ರಮಕೈಗೊಳ್ಳುವಂತೆ ಸುಳ್ಯ ಶಾಸಕ ಎಸ್.ಅಂಗಾರ ಅವರಿಗೆ ನಗರ ಪಂಚಾಯತ್ ಸದಸ್ಯ ರಿಯಾಜ್ ಕಟ್ಟೆಕ್ಕಾರ್ ಮನವಿ ಸಲ್ಲಿಸಿದ್ದಾರೆ.
ಫಲಾನುಭವಿಗಳು ತಾವು ಇದ್ದ ಗುಡಿಸಲುಗಳನ್ನು ಕೆಡವಿ, ಬಾಡಿಗೆ ಕೋಣೆಗಳಲ್ಲಿ ವಾಸಿಸುತ್ತಿದ್ದಾರೆ. ಈಗಿನ ಪರಿಸ್ಥಿಯಲ್ಲಿ ಒಂದು ಹೊತ್ತಿನ ಊಟಕ್ಕೂ ಕಷ್ಟ ಪಡುತ್ತಿರುವ ಜನರು ಇದೀಗ ಬಾಡಿಗೆ ಕಟ್ಟಲಾಗದೆ ಬೀದಿಪಾಲಾಗುವ ಭೀತಿಯಲ್ಲಿದ್ದಾರೆ. ಹೊಸಮನೆಯ ಕನಸಿನಲ್ಲಿರುವ ಈ ಬಡಜನರ ಕಷ್ಟವನ್ನು ಅರ್ಥೈಸಿಕೊಂಡು ಸೂರು ಕಳೆದುಕೊಂಡು ಬೀದಿ ಪಾಲಾಗುತ್ತಿರುವ ಆಶ್ರಯ ಯೋಜನೆಯ ಫಲಾನುಭವಿಗಳಿಗೆ ಅತಿ ಶೀಘ್ರದಲ್ಲಿ ಬಾಕಿ ಉಳಿದಿರುವ ಕಂತುಗಳನ್ನು ಬಿಡುಗಡೆಗೊಳಿಸಲು ಕ್ರಮಕೈಗೊಳ್ಳಬೇಕೆಂದು ಶಾಸಕರಿಗೆ ರಿಯಾಜ್ ಮನವಿ ಮಾಡಿದ್ದಾರೆ.