ಸುದ್ದಿ

ರಾಯಲ್ ಫ್ರೆಂಡ್ಸ್ ಗೂನಡ್ಕ ವತಿಯಿಂದ ನರೇಶ್ ಬೈಲೆ ಮೂರ್ನಾಡು ರವರಿಗೆ ಸನ್ಮಾನ…

ಸುಳ್ಯ: ರಾಯಲ್ ಫ್ರೆಂಡ್ಸ್ ಗೂನಡ್ಕ ಸ್ಪೋರ್ಟ್ಸ್ & ಕಲ್ಚರಲ್ ಸೆಂಟರ್ ವತಿಯಿಂದ *ವನ್ಯ ಜೀವಿಗಳನ್ನು ಸಂರಕ್ಷೀಸೋಣ ಎಂಬ ಏಕ ವ್ಯಕ್ತಿ ಆಂದೋಲನದ ರೂವಾರಿ ಮೂರ್ನಡಿನಿಂದ ಧರ್ಮಸ್ಥಳಕ್ಕೆ ಕಾಲ್ನಡಿಗೆ ಯಾತ್ರೆ ಕೈಗೊಂಡ ನರೇಶ್ ಬೈಲೇ ರವರನ್ನು ರಾಯಲ್ ಫ್ರೆಂಡ್ಸ್ ಗೂನಡ್ಕ ವತಿಯಿಂದ ಕನ್ನಡದ ಶಾಲು, ಗಂಧದ ಮಾಲೆ, ಹಾಗೂ ಉಡುಗೊರೆ ನೀಡಿ ಸನ್ಮಾನಿಸಲಾಯಿತು.
ಈ ಸಂಧರ್ಭದಲ್ಲಿ ರಾಯಲ್ ಫ್ರೆಂಡ್ಸ್ ಗೂನಡ್ಕ ಅಧ್ಯಕ್ಷರಾದ ಸಾಜೀದ್ ಐ ಜಿ,ಗೌರವದ್ಯಕ್ಷರಾದ ಅಶ್ರಫ್ ಟರ್ಲಿ, ಸಾಮಾಜಿಕ ಮುಖಂಡ ಸಲೀಂ ದರ್ಕಾಸ್ ಗೂನಡ್ಕ, ಮನೀಶ್ ಗೂನಡ್ಕ, ಫಾರೂಕ್ ಕಾನಕ್ಕೋಡ್, ಸಿರಾಜುದ್ದಿನ್ (ಇಚ್ಚು) ಗೂನಡ್ಕ, ಅಝರ್ ಗೂನಡ್ಕ, ಅಹಮದ್ ಚೆಮ್ನಾಡ್, ಉಬೈಸ್ ಟಿ ಕೆ ಗೂನಡ್ಕ, ಶೇರೀಫ್ ಸೆಟ್ಯಡ್ಕ ರವರು ಉಪಸ್ಥಿತರಿದ್ದರು.

Related Articles

Back to top button