ಸುದ್ದಿ

ಎಸ್. ಕೆ. ಎಸ್. ಎಸ್. ಎಫ್. ವಿಖಾಯ -ತರಬೇತಿ ಕಾರ್ಯಾಗಾರಕ್ಕೆ ತಹಶೀಲ್ದಾರ್ ಅನಿತಾಲಕ್ಷ್ಮಿ ಭೇಟಿ…

ಸುಳ್ಯ: ಪೇರಡ್ಕ ತೆಕ್ಕಿಲ್ ಮಹಮ್ಮದ್ ಹಾಜಿ ಮೆಮೋರಿಯಲ್ ತಕ್ಷ್ವಿಯತುಲ್ ಇಸ್ಲಾಂ ಮದ್ರಸದಲ್ಲಿ ನಡೆಯುವ ತುರ್ತು ಸಂದರ್ಭದಲ್ಲಿ ಸ್ಪಂದನೆ ನೀಡುವ ಎಸ್. ಕೆ. ಎಸ್. ಎಸ್. ಎಫ್. ವಿಖಾಯ ಇದರ ತಾಲೂಕು ಮಟ್ಟದ ತರಬೇತಿ ಕಾರ್ಯಾಗಾರಕ್ಕೆ ತಹಶೀಲ್ದಾರ್ ಅನಿತಾಲಕ್ಷ್ಮಿ ಭೇಟಿ ನೀಡಿದರು.
ಜೋಡುಪಾಲ ದುರಂತ ಹಾಗೂ ಕೋವಿಡ್ ಸಂದರ್ಭದಲ್ಲಿ ವಿಖಾಯ ಸಂಘಟಣೆಯ ಕಾರ್ಯ ಹಾಗೂ ತುರ್ತು ಸಂದರ್ಭದಲ್ಲಿ ಸಂಘಟನೆಯ ಸ್ಪಂದನೆ ಬಗ್ಗೆ ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಿ. ಕೆ. ಹಮೀದ್ ಗೂನಡ್ಕ ಮಾತನಾಡಿ, ತಹಶೀಲ್ದಾರ್ ಅನಿತಾಲಕ್ಸ್ಮಿ ಯವರು ಭೂಕಂಪ ಸೂಚನೆ ಬಗ್ಗೆ ಮಾಹಿತಿಯನ್ನು ತಿಳಿದುಕೊಂಡ ಕೂಡಲೇ ನಮ್ಮ ಗ್ರಾಮದ ತೊಂದರೆಗೊಳಗಾದ ಮನೆಗಳಿಗೆ ತಾಲೂಕು ಆಡಳಿತದೊಂದಿಗೆ ಭೇಟಿ ಕೊಟ್ಟು ಜನರಲ್ಲಿ ಭಯವನ್ನು ಹೋಗಲಾಡಿಸುವ ಕೆಲಸ ಮಾಡಿದ್ದಾರೆ. ನಾವೆಲ್ಲರೂ ಆಡಳಿತದೊಂದಿಗೆ ಸಹಕರಿಸೋಣ ಎಂದರು ವೇದಿಕೆಯಲ್ಲಿ ಪಂಚಾಯತ್ ಸದಸ್ಯರಾದ ಎಸ್. ಕೆ. ಹನೀಫ್, ಸಜ್ಜನ ಪ್ರತಿಷ್ಠಾನದ ರಹೀಮ್ ಬೀಜದಕಟ್ಟೆ, ಸೋಮನಾಥ್, ಉಪಸ್ಥಿತರಿದ್ದರು. ಕಲಂದರ್ ಎಲಿಮಲೆ ಸ್ವಾಗತಿಸಿ, ಖಾದರ್ ಮೊಟ್ಟಂಗಾರ್ ವಂದಿಸಿದರು.

Related Articles

Back to top button