ಕಟೀಲು ಕ್ಷೇತ್ರ ಮಹಾತ್ಮೆ ಯಕ್ಷಗಾನ ಬಯಲಾಟ – ಸನ್ಮಾನ…

ಬಂಟ್ವಾಳ: ಶ್ರೀ ಅಯ್ಯಪ್ಪಸ್ವಾಮಿ ಬಯಲಾಟ ಸಮಿತಿ ಪಣೋಲಿ ಬೈಲು ಸಜೀಪ ಮೂಡ ಇದರ ಆಶ್ರಯದಲ್ಲಿ 26 ನೇ ವರ್ಷದ ಯಕ್ಷಗಾನ ಬಯಲಾಟದ ಅಂಗವಾಗಿ ಕಟೀಲು ಶ್ರೀ ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿ ಇವರಿಂದ ಕಟೀಲು ಕ್ಷೇತ್ರ ಮಹಾತ್ಮೆ ಯಕ್ಷಗಾನ ಬಯಲಾಟವನ್ನು ಜ. 4 ರಂದು ಪ್ರದರ್ಶಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಜಿಪಮಾಗಣೆ ತಂತ್ರಿ ಎಂ. ಸುಬ್ರಮಣ್ಯ ಭಟ್ ಪಾಣೆಮಂಗಳೂರು ರೈತರ ಸೇವಾ ಸಹಕಾರ ಸಂಘ ಅಧ್ಯಕ್ಷ ಜಯಶಂಕರ ಬಾಸ್ರಿತಾಯ, ಕಂಬಳ ಉಸ್ತುವಾರಿ ಸದಸ್ಯ ಸಂಕಪ್ಪ ಶೆಟ್ಟಿ ಪಾಲೆ ಮಂಟಪ, ದೈಹಿಕ ಶಿಕ್ಷಕ ಶಿವಪ್ರಸಾದ್ ಶೆಟ್ಟಿ, ಸಜೀಪ ಕೋಚು ಪೂಜಾರಿ, ತಾರಾನಾಥ ಪಂಬದ, ನಿವೃತ್ತ ಶಿಕ್ಷಕ ಚಂದು ನಾಯಕ ಹಾಗೂ ಏಳು ಮಂದಿ ಆಶಾ ಕಾರ್ಯಕರ್ತರನ್ನು ಫಲತಾಂಬೂಲ ಗಳನ್ನು ಸ್ಮರಣಿಕೆಯನ್ನು ನೀಡಿ ಹಾರ ಶಾಲು ಪುಷ್ಪ ನೀಡಿ ಸನ್ಮಾನಿಸಲಾಯಿತು.
ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅನುವಂಶಿಕ ಮೊಕ್ತೇಸರರು ಹಾಗೂ ಅರ್ಚಕರಾದ ಲಕ್ಷ್ಮೀನಾರಾಯಣ ಆಸ್ರಣ್ಣ ಶ್ರೀ ಸದಾಶಿವ ದೇವಸ್ಥಾನ ಈಶ್ವರಮಂಗಲ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ದೇವಿ ಪ್ರಸಾದ್ ಪೂಂಜಾ,ಉದ್ಯಮಿ ಜಯರಾಮ್ ಹೆಗಡೆ ಕುಡ್ವ ಪಾಲು, ವೇದಮೂರ್ತಿ ಸುದರ್ಶನ ಮಯ್ಯ, ಸತೀಶ್ ಟೈಲರ್ ಗಾಣದ ಮನೆ, ರಾಜು ಕುಲಾಲ್ ಮೊದಲಾದವರು ಉಪಸ್ಥಿತರಿದ್ದರು.

Sponsors

Related Articles

Leave a Reply

Your email address will not be published. Required fields are marked *

Back to top button