ಶನಿವಾರ – ದ.ಕ 186 , ಉಡುಪಿ 90 ಹಾಗೂ ರಾಜ್ಯದಲ್ಲಿ 2798 ಕೊರೊನ ಸೋಂಕು ಪತ್ತೆ…

ಮಂಗಳೂರು: ಇಂದು(ಶನಿವಾರ) ದ.ಕ ಜಿಲ್ಲೆಯಲ್ಲಿ 186 ,ಉಡುಪಿ ಜಿಲ್ಲೆಯಲ್ಲಿ 90 ಹಾಗೂ ರಾಜ್ಯದಲ್ಲಿ 2798 ಕೊರೊನ ಸೋಂಕು ಪತ್ತೆಯಾಗಿದೆ.
ದ.ಕ ಜಿಲ್ಲೆಯಲ್ಲಿ ಪತ್ತೆಯಾದ 186 ಪ್ರಕರಣದಲ್ಲಿ 37 ಮಂದಿಗೆ ಪ್ರಾಥಮಿಕ ಸಂಪರ್ಕದಿಂದ , 64 ಮಂದಿಗೆ ILI ,17 ಮಂದಿಗೆ SARI , ಅಂತರ್ ರಾಜ್ಯ ಪ್ರಯಾಣದಿಂದ 2, ಅಂತರಾಷ್ಟ್ರೀಯ ಪ್ರಯಾಣದಿಂದ 10, ಪ್ರೀ ಸರ್ಜರಿ ಸ್ಯಾಂಪಲ್ ಟೆಸ್ಟ್ ವೇಲೆ 7, ರಾಂಡಮ್ ಚೆಕ್ಕಿಂಗ್ ವೇಳೆ 13 ಮಂದಿಯಲ್ಲಿ ಹಾಗೂ ಪ್ರೀ ಡೆಲಿವರಿ ಸ್ಯಾಂಪಲ್ ಪರೀಕ್ಷೆಯಲ್ಲಿ 4 ಮಂದಿಗೆ ಪಾಸಿಟಿವ್ ದೃಢಗೊಂಡಿದೆ. ಅಲ್ಲದೆ 32 ಮಂದಿಯ ಟ್ರಾವೆಲ್ ಹಿಸ್ಟರಿಯನ್ನು ಪತ್ತೆಹಚ್ಚಲಾಗುತ್ತಿದೆ.
ಉಡುಪಿ ಜಿಲ್ಲೆಯಲ್ಲಿ ಇಂದು 573 ಜನರಿಗೆ ನೆಗೆಟಿವ್‌ ಮತ್ತು 90 ಜನರಿಗೆ ಪಾಸಿಟಿವ್‌ ಪ್ರಕರಣ ವರದಿಯಾಗಿದೆ.
ಇನ್ನು ರಾಜ್ಯದಲ್ಲಿ ಒಟ್ಟು 2798 ಮಂದಿಗೆ ಪಾಸಿಟಿವ್ ದೃಢಪಟ್ಟಿದೆ. ಇದರಿಂದ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 36,216 ಕ್ಕೆ ಏರಿಕೆಯಾಗಿದೆ. ಕೊರೋನಾ ವೈರಸ್ ನಿಂದಾಗಿ ಕಳೆದ 24 ಗಂಟೆಯಲ್ಲಿ ಬೆಂಗಳೂರಿನಲ್ಲಿ 23 ಸೋಂಕಿತರು ಸೇರಿದಂತೆ ರಾಜ್ಯದಲ್ಲಿ ಒಟ್ಟು 70 ಮಂದಿ ಸಾವನ್ನಪ್ಪಿದ್ದಾರೆ.

Sponsors

Related Articles

Leave a Reply

Your email address will not be published. Required fields are marked *

Back to top button