ಮಾಣಿಲ ಕ್ಷೇತ್ರ – ನವರಾತ್ರಿ ಉತ್ಸವ ಪೂರ್ವಭಾವಿ ಸಭೆ…

ಬಂಟ್ವಾಳ: ನಿಸ್ವಾರ್ಥ ವಾಗಿ ಎಲ್ಲರೂ ಒಗ್ಗೂಡಿ ಕೆಲಸ ಮಾಡಿದಾಗ ಕ್ಷೇತ್ರ ಅಭಿವೃದ್ಧಿ ಹೊಂದುತ್ತದೆ. ಶ್ರದ್ಧೆ ಭಕ್ತಿಯಿಂದ ಕೈಜೋಡಿಸಬೇಕು. ಸತ್ಕಾರ್ಯಗಳಲ್ಲಿ ಸಕಲರೂ ಕೈಜೋಡಿಸುವ ಮೂಲಕ ಮಾಣಿಲದಲ್ಲಿ ನಡೆಯುವ ಬೆಳ್ಳಿಹಬ್ಬದ ನವರಾತ್ರಿ ಉತ್ಸವವನ್ನು ಯಶಸ್ವಿಗೊಳಿಸಬೇಕೆಂದು ಮಾಣಿಲ ಶ್ರೀಗಳಾದ ಮೋಹನದಾಸ ಸ್ವಾಮೀಜಿ ಹೇಳಿದರು.

ದುರ್ಗಾಮಹಾಲಕ್ಷ್ಮೀ ಕ್ಷೇತ್ರ ಶ್ರೀಧಾಮ ಮಾಣಿಲದಲ್ಲಿ ನಡೆಯಲಿರುವ ಬೆಳ್ಳಿ ಹಬ್ಬ ಮಹೋತ್ಸವದ ಶರನ್ನವರಾತ್ರಿ ಉತ್ಸವದ ಪೂರ್ವಭಾವಿ ಸಭೆಯಲ್ಲಿ ಶ್ರೀ ರಕ್ತೇಶ್ವರಿ ದೇವಸ್ಥಾನ ಬಿ.ಸಿ.ರೋಡಿನಲ್ಲಿ ಅವರು ಮಾತನಾಡಿದರು. ಮಾಣಿಲ ನಂಬುಗೆಯ ಆಧಾರದಲ್ಲಿ ನಿಂತ ನೆಲ. ನಿತ್ಯಾನಂದರು ಸಂತನಾಗಿ ಎಲ್ಲರೊಂದಿಗೆ ಆನಂದ ನೀಡಿದ ದಿವ್ಯ ಪುರುಷ. ಮಹಾಲಕ್ಷ್ಮಿ ದೇವಿಯ ಸೇವೆಯಿಂದ ನಂಬಿದ ಭಕ್ತರಿಗೆ ಪ್ರಾಪ್ತಿ ಫಲ. ಮಾಣಿಲ ಸರ್ವ ಜಾತಿ ಜನಾಂಗವನ್ನು ಎಂದಿಗೂ ಸ್ವಾಗತಿಸುವ ಕರುಣಾಳು ಸ್ಥಳ. ನಾನು ಸಂತ ಮಾತ್ರ ನೀವು ಕ್ಷೇತ್ರ ಅಭಿವೃದ್ದಿಯ ಸೂತ್ರದಾರರು ಎಂದು ಮಾಣಿಲ ಕ್ಷೇತ್ರದ ವಿವರ ನೀಡಿದರು.

ಪೂಜ್ಯರನ್ನು ಶ್ರೀ ರಕ್ತೇಶ್ವರಿ ದೇವಸ್ಥಾನದ ಅಧ್ಯಕ್ಷ ಶ್ರೀ ಬಿ.ವಿಶ್ವನಾಥ್ ಬರಮಾಡಿಕೊಂಡರು. ಪ್ರಮುಖರಾದ ಬೇಬಿ ಕುಂದರ್, ಟಿ. ಸೇಷಪ್ಪ ಮಾಸ್ಟರ್, ನಾರಾಯಣ್, ಮಾಜಿ ಬೂಡಾ ಅಧ್ಕಕ್ಷ ಸದಾಶಿವ ಕುಲಾಲ್, ಟ್ರಸ್ಟಿ ಸುಧಾಕರ್ ಸಾಲಿಯಾನ್. ಮಚ್ಚೇಂದ್ರ ಸಾಲಿಯಾನ್, ನ್ಯಾಯವಾದಿ ಸುರೇಶ್ ಕುಲಾಲ್ ನಾವೂರು, ನಾರಾಯಣ ಸಿ.ಪೆರ್ನೆ, ಮನೋಹರ ನೇರಂಬೋಲು. ಶ್ರೀ ರಕ್ತೇಶ್ವರಿ ದೇಗುಲ ಟ್ರಷ್ಟಿ ಶಿವಶಂಕರ್, ಸುಕುಮಾರ್ ಬಂಟ್ವಾಳ, ನಿತೇಶ್ ಕುಲಾಲ್ ಪಲ್ಲಿಕಂಡ, ಜಯಂತ್ ವಗ್ಗ, ರಮೇಶ್ ಪಣೋಲಿಬೈಲ್, ಜಯಾನಂದ ಪೆರಾಜೆ, ಕರುಣೇಂದ್ರ ಪೂಜಾರಿ, ಕೇಶವ ಅಸಲ್ದೋಡಿ, ವಿಠಲ್ ಕುಲಾಲ್ ಪಲ್ಲಿಕಂಡ, ತಿಮ್ಮಪ್ಪ ಕುಲಾಲ್, ಸುರೇಶ್ ಕುಲಾಲ್, ಬೆಂಗಳೂರಿನ ಭಾಸ್ಕರ್ ಕುಲಾಲ್, ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ದೇವಪ್ಪ ಕುಲಾಲ್ ಸ್ವಾಗತಿಸಿ, ನ್ಯಾಯವಾದಿ ಸುರೇಶ್ ಕುಲಾಲ್ ಮಾಹಿತಿ ನೀಡಿ, ಟ್ರಸ್ಟಿ ಮಚ್ಚೇಂದ್ರ ಸಾಲಿಯಾನ್ ವಂದಿಸಿದರು.

Sponsors

Related Articles

Back to top button