ಸುದ್ದಿ

ಹಿರಿಯ ಸಾಹಿತಿ ಎನ್.ಎಸ್. ದೇವಿ ಪ್ರಸಾದ್ ಅವರ ನಿಧನಕ್ಕೆ ಟಿ. ಎಂ. ಶಹೀದ್ ತೆಕ್ಕಿಲ್ ಸಂತಾಪ…

ಸುಳ್ಯ: ಹಿರಿಯ ಸಾಹಿತಿ, ಸಿನಿಮಾ ನಿರ್ಮಾಪಕ, ಅರೆಭಾಷೆ ಅಕಾಡಮಿಯ ಮಾಜಿ ಅಧ್ಯಕ್ಷ ಎನ್.ಎಸ್. ದೇವಿ ಪ್ರಸಾದ ಸಂಪಾಜೆ ಯವರ ನಿಧನಕ್ಕೆ ಕೆಪಿಸಿಸಿ ಯ ಮಾಜಿ ಕಾರ್ಯದರ್ಶಿ ಟಿ. ಎಂ. ಶಹೀದ್ ತೆಕ್ಕಿಲ್ ಸಂತಾಪ ವ್ಯಕ್ತ ಪಡಿಸಿರುತ್ತಾರೆ.
ಮೂರು-ನಾಲ್ಕು ತಲೆಮಾರಿಂದ ನಮ್ಮ ಕುಟುಂಬದೊoದಿಗೆ ಉತ್ತಮ ಬಾಂಧವ್ಯ ಹೊಂದಿದ ಅವರು ಹಿರಿಯ ಸಾಹಿತಿಯಾಗಿ, ಅನೇಕ ಸಾಮಾಜಿಕ, ಸಾಹಿತ್ಯ, ಶೈಕ್ಷಣಿಕ, ಧಾರ್ಮಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದರು. ಅವರ ಅಗಲುವಿಕೆಯು ಅತ್ಯಂತ ದುಃಖ ತಂದಿದೆ. ಭಗವಂತನು ಅವರ ಆತ್ಮಕ್ಕೆ ಚಿರಶಾಂತಿಯನ್ನು ನೀಡಲಿ ಮತ್ತು ಕುಟುಂಬ ಸದಸ್ಯರಿಗೆ ದುಃಖವನ್ನು ಸಹಿಸುವ ಶಕ್ತಿಯನ್ನು ನೀಡಲಿ ಎಂದು ತಮ್ಮ ಸಂತಾಪ ಸೂಚಕದಲ್ಲಿ ತಿಳಿಸಿರುತ್ತಾರೆ.

Related Articles

Back to top button