ಸುದ್ದಿ

ಜವನೆರ್ ಬೆದ್ರ ವತಿಯಿಂದ ಶ್ರಮದಾನ…

ಮೂಡುಬಿದಿರೆ: ಜವನೆರ್ ಬೆದ್ರ ವತಿಯಿಂದ ಮೂಡುಬಿದಿರೆ ಪುರಾತನ ಕ್ಷೇತ್ರವಾದ ಕೋಟೆಬಾಗಿಲು ಮಹಾಮಾಯಿ ದೇವಸ್ಥಾನದಲ್ಲಿ ಇಂದು ಶ್ರಮದಾನ ನಡೆಯಿತು.
ಜವನೆರ್ ಬೆದ್ರ ತಂಡ 111 ವಾರಗಳ ಕ್ಲೀನ್ ಅಪ್ ಮೂಡಬಿದಿರೆ ಸ್ವಚ್ಚತಾ ಅಭಿಯಾನದ ನಂತರ ಇದೀಗ *ಶ್ರಮದಾನ* ಹೆಸರಿನಲ್ಲಿ ಎರಡನೇ ಅಧ್ಯಾಯ ಪ್ರಾರಂಭಿಸಿದೆ. ಈ ಮೂಲಕ ದೇವಾಲಯ ,ಐತಿಹಾಸಿಕ ಕ್ಷೇತ್ರ ಹಾಗೂ ಸ್ಮಾರಕಗಳ , ಪುಷ್ಕರಣಿ ರಕ್ಷಣೆ ಹಾಗೂ ಸ್ವಚ್ಛತೆ ಕಾಯಕಕ್ಕೆ ಜವನೆರ್ ಬೆದ್ರ ಮುಂದಾಗಿದೆ.
ಇಂದು ನಡೆದ ಕೋಟೆಬಾಗಿಲು ಮಹಾಮಾಯಿ ದೇವಸ್ಥಾನದ ಶ್ರಮದಾನದಲ್ಲಿ ಜವನೆರ್ ಬೆದ್ರ ಸಂಘಟನೆ ಸರ್ವ ಸದಸ್ಯರು ಹಾಗೂ ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರು ಭಾಗವಹಿಸಿದ್ದರು.

Related Articles

Back to top button