ಸುಳ್ಯ – ಕೋವಿಡ್‌ ಸಂದರ್ಭದಲ್ಲಿ ತುರ್ತು ಸ್ಪಂದನೆಗೆ ನಗರ ಪಂಚಾಯತ್‌ ಸದಸ್ಯರ ನೇತೃತ್ವದಲ್ಲಿ ವಿಶೇಷ ತಂಡ…

ಸುಳ್ಯ: ಕೋವಿಡ್‌ ಸಂದರ್ಭದಲ್ಲಿ ಜನರು ಅನುಭವಿಸುವ ಸಂಕಷ್ಟ ಅಷ್ಟಿಷ್ಟಲ್ಲ. ಅಶಕ್ತರು, ಅಸಹಾಯಕರು ಸಹಾಯದ ಒಂದು ಹಸ್ತಕ್ಕಾಗಿ, ಸಾಂತ್ವನದ ಸ್ಪರ್ಶಕ್ಕಾಗಿ ಹಾತೊರೆಯುತ್ತಿರುತ್ತಾರೆ.ಇಂದಿನ ಸಂಕಷ್ಟದ ದಿನಗಳಲ್ಲಿ ಎಲ್ಲೆಲ್ಲೂ ಕೇಳುವುದು ನೋವಿನ, ಅಸಾಯಕತೆಯ ಅಳಲು. ಈ ಸಂದಿಗ್ದ ಪರಿಸ್ಥಿತಿಯಲ್ಲಿ ಜನರಿಗೆ ತಮ್ಮ ಕೈಲಾಗುವ ಸಹಾಯ ನೀಡಲು, ಕಷ್ಟಕ್ಕೆ ಸ್ಪಂದಿಸಲು ಸುಳ್ಯ ನಗರ ಪಂಚಾಯತ್‌ ಸದಸ್ವರ ನೇತೃತ್ವದಲ್ಲಿ ವಿಶೇಷ ತಂಡವೊಂದು ರಚನೆಯಾಗಿದ್ದು, ಕೆಲವು ದಿನಗಳಿಂದ ಕಾರ್ಯಪ್ರವೃತ್ತರಾಗಿದ್ದಾರೆ.
ನಗರ ಪಂಚಾಯತ್‌ ಸದಸ್ಯರಾದ ಕೆ.ಎಸ್‌. ಉಮ್ಮರ್‌, ಶರೀಫ್‌ ಕಂಠಿ, ರಿಯಾಜ್ ಕಟ್ಟೆಕ್ಕಾರ್ ನೇತತ್ವದಲ್ಲಿ 12 ಮಂದಿ
ಯುವಕರ ತಂಡ ಯಾವುದೇ ಸೇವೆ ನೀಡಲು ಸಹಾಯಹಸ್ತ ನೀಡಲು, ಕಷ್ಟಕ್ಕೆ ಸ್ಪಂದಿಸಲು ಸಿದ್ದರಾಗಿದ್ದಾರೆ. ಆಂಬುಲೆನ್ಸ್‌
ಸೇವೆ ಒದಗಿಸುವುದು, ಕೋವಿಡ್‌ ಸೋಂಕಿನಿಂದ ಮೃತಪಟ್ಟರೆ ಅವರ ಅಂತ್ಯ ಸಂಸ್ಕಾರ ನಡೆಸುವುದು ಸೇರಿದಂತೆ ಯಾವುದೇ ತುರ್ತು ಸಂದರ್ಭದಲ್ಲಿ ಜನಸಾಮಾನ್ಯರ ಸಹಾಯಕ್ಕೆ ಬರುವುದು ತಂಡದ ಉದ್ದೇಶ. ದಿನದ ಯಾವುದೇ ಸಮಯದಲ್ಲೂ
ತಂಡವನ್ನು ಸಂಪರ್ಕಿಸಬಹುದು ಎಂದು ಕೆ.ಎಸ್‌.ಉಮ್ಮರ್‌ ಮತ್ತು ಶರೀಫ್‌ ಕಂಠಿ ತಿಳಿಸಿದ್ದಾರೆ. ಕೋವಿಡ್‌ ಲಸಿಕೆ ಪಡೆಯುವುದಕ್ಕೆ ಯಾವುದಾದರು ಸಹಾಯ ಅಗತ್ಯ ಇದ್ದರೆ, ಕರ್ಫ್ಯೂ ಕಾರಣ ಯಾರಾದರೂ ಎಲ್ಲಿಯಾದರು ಸಿಲುಕಿಕೊಂಡಿದ್ದರೆ, ಯಾವುದಾದರು ರೀತಿಯ ಸಂಕಷ್ಟಕ್ಕೆ ಈಡಾಗಿದ್ದರೆ ಅಂತವರಿಗೆ ಸಹಾಯನೀಡಲು ಸಿದ್ಧರಿದ್ದೇವೆ. ಕೋವಿಡ್‌ ಆತಂಕ ಮತ್ತು ಕರ್ಫ್ಯೂ ಸಂದರ್ಭದಲ್ಲಿ ಯಾರಿಗಾದರೂ, ಯಾವುದಾದರೂ ಸಹಾಯಗಳು ಅಗತ್ಯವಿದ್ದರೆ, ಕೊವಿಡ್‌ ಪಾಲನಾ ಕೇಂದ್ರಗಳ ಬಗ್ಗೆ ಕಂಟೈೆನ್‌ ಮೆಂಟ್‌ ವಲಯಗಳ ಬಗ್ಗೆ ಮಾಹಿತಿ ಸೇರಿ ಯಾವುದೇ ಅಗತ್ಯ ಇದ್ದಲ್ಲಿ ತಂಡವನ್ನು ಸಂಪರ್ಕಿಸಬಹುದು. ಮನೆ ಮಂದಿಯೆಲ್ಲ ಕೋವಿಡ್‌ ಬಾಧಿತರಾಗಿ ಮನೆಯಲ್ಲಿ ಉಳಿಯಬೇಕಾಗಿ ಬಂದ ಸಂದರ್ಭದಲ್ಲಿ ಅಂತವರು ಏನಾದರು ಚಿಕಿತ್ಸೆ, ಪರೀಕ್ಷೆ ಮತ್ತಿತರ ಅಗತ್ಯತೆಗಳು ಇದ್ದರೆ ತಂಡದ ಸದಸ್ಯರಿಗೆ ಕರೆ ಮಾಡಬಹುದು ಎಂದು ಅವರು ತಿಳಿಸಿದ್ದಾರೆ.
ಸಂಪರ್ಕಿಸಬಹುದಾದ ಮೊಬೈಲ್‌ ಸಂಖ್ಯೆ: ಕೆ.ಎಸ್‌. ಉಮ್ಮರ್‌(9845754285), ಶರೀಫ್‌ ಕಂಠಿ (9980196455).

Sponsors

Related Articles

Back to top button