ಸುದ್ದಿ

ಶ್ರೀ ಶಂಕರ ಪತ್ತಿನ ಸಹಕಾರ ಸಂಘ ನಿ. ಮೆಲ್ಕಾರ್ – ಪ್ರಥಮ ವಾರ್ಷಿಕ ಮಹಾಸಭೆ…

ಬಂಟ್ವಾಳ: ಶ್ರೀ ಶಂಕರ ಪತ್ತಿನ ಸಹಕಾರ ಸಂಘ ನಿ. ಮೆಲ್ಕಾರ್ ಇದರ ಪ್ರಥಮ ವಾರ್ಷಿಕ ಮಹಾಸಭೆಯು ಸಂಘದ ಜಿಲ್ಲಾ ಕೇಂದ್ರ ಕಛೇರಿಯಲ್ಲಿ ಅ.30 ರಂದು ಅಧ್ಯಕ್ಷ ಕೈಯೂರು ನಾರಾಯಣ ಭಟ್ ಅಧ್ಯಕ್ಷತೆಯಲ್ಲಿ ಜರಗಿತು.
ಸಂಘದ ಪ್ರಗತಿಯ ಬಗ್ಗೆ ಮಾತನಾಡಿದ ಅವರು ಸಹಕಾರಿ ಸಂಘದ ಮೂಲಕ ಸ್ವಾಬಿಮಾನಿಗಳಾಗಿ ಬದುಕಲು ವಿವಿಧ ರೀತಿಯ ಸಹಾಯ ಮಾಡುವ ಮತ್ತು ಹಿರಿಯ ನಾಗರಿಕರಿಗೆ ವಿಶೇಷ ಸೌಲಭ್ಯಗಳನ್ನು ಮನೆ ಬಾಗಿಲಿಗೆ ತಲುಪಿಸುವ ಉದ್ದೇಶವನ್ನು ಸಂಘವು ಇಟ್ಟುಕೊಂಡಿದೆ. ಜಿಲ್ಲೆಯಲ್ಲಿ ಹೊಸ ಶಾಖೆಗಳನ್ನು ತೆರೆಯುವ ಬಗ್ಗೆ ಗಮನಹರಿಸಲಾಗಿದೆ ಎಂದರು.

ಕರ್ನಾಟಕ ಹಿರಿಯ ನಾಗರಿಕರ ಸೇವಾ ಪ್ರತಿಷ್ಠಾನದ ಸಂಚಾಲಕ ನಾರ್ಯ ಶ್ರೀನಿವಾಸ ಶೆಟ್ಟಿ, ಕೋಶಾಧಿಕಾರಿ ವಾಸುದೇವರಾವ್ ಮಂಗಳೂರು ಅತಿಥಿಗಳಾಗಿದ್ದರು. ಈ ಸಂದರ್ಭದಲ್ಲಿ ವಿಶೇಷ ಸಾಧನೆ ಮಾಡಿದ ಪಾಣೆಮಂಗಳೂರು ಎಸ್.ಎಲ್.ಎನ್.ಪಿ. ಶಿಕ್ಷಣ ಸಂಸ್ಥೆಯ ನಿವೃತ್ತ ಪ್ರಾಂಶುಪಾಲೆ ರಮಾ ಎಸ್. ಭಂಡಾರಿ ಮತ್ತು ಕ್ರಿಯಾಶೀಲ ಶಿಕ್ಷಕಿ ಕಸ್ತೂರಿ ಪಿ. ಕಲ್ಲಡ್ಕ ಇವರನ್ನು ಸನ್ಮಾನಿಸಿ ಪುರಸ್ಕರಿಸಲಾಯಿತು.

ಸಂಘದ ಉಪಾಧ್ಯಕ್ಷ ಜಯಾನಂದ ಪೆರಾಜೆ ಪ್ರಾಸ್ತವಿಕವಾಗಿ ಮಾತನಾಡಿ ಸಂಘದ ಧ್ಯೇಯೋದ್ದೇಶ, ಕಾರ್ಯಚಟುವಟಿಕೆಗಳ ಬಗ್ಗೆ ತಿಳಿಸಿದರು. ಸದಸ್ಯರು ಹೆಚ್ಚಿನ ಪಾಲುಬಂಡವಾಳವನ್ನು ಪಡೆದುಕೊಂಡು ಸಂಸ್ಥೆಯ ಅಭಿವೃದ್ಧಿಗೆ ಸಹಕರಿಸಬೇಕೆಂದರು. ನಿರ್ದೇಶಕರಾದ ಮುರಳೀಧರ ರಾವ್,ಸುದರ್ಶನ ಮಯ್ಯ, ಪ್ರವೀಣಚಂದ್ರ ಟಿ, ಪಿ. ಜಯರಾಮ ಶೇಖ, ಎಮ್. ಅನಂತ ಪ್ರಭು, ಅನಿಲ್ ಕುಮಾರ್ ಬರಿಮಾರು , ವೇದವ್ಯಾಸ ರಾಮಕುಂಜ, ಅನಂತ ಪ್ರಭು ನೇರಳಕಟ್ಟೆ , ಶಾಂತಾ ಪುತ್ತೂರು ಉಪಸ್ಥಿತರಿದ್ದರು.

ಮಾದಕಟ್ಟೆ ಈಶ್ವರ ಭಟ್ ಸ್ವಾಗತಿಸಿದರು. ವಿನಿತ್‍ರಾಜ್ ಪ್ರಾರ್ಥಿಸಿದರು. ಪ್ರಭಾರ ಮುಖ್ಯಕಾರ್ಯನಿರ್ವಹಣಾಧಿಕಾರಿ ಉಷಾ ವರದಿ ವಾಚಿಸಿದರು. ನಿರ್ದೇಶಕ ಜಯರಾಮ ಪೂಜಾರಿ ವಂದಿಸಿದರು.

Related Articles

Back to top button