ಸುದ್ದಿ

ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಮುಗುಳಿ – ಶರನ್ನವರಾತ್ರಿ…

ಬಂಟ್ವಾಳ: ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಮುಗುಳಿಯ ಸಜೀಪ ಮುನ್ನೂರು ಶರನ್ನವರಾತ್ರಿಯ ಅಂಗವಾಗಿ ಸೋಮವಾರದಂದು ಶ್ರೀ ಕ್ಷೇತ್ರದಲ್ಲಿ ದುರ್ಗಾ ನಮಸ್ಕಾರ ಪೂಜೆ, ಲಲಿತಾ ಸಹಸ್ರನಾಮರ್ಚನೆ, ಶ್ರೀದೇವಿ ಮಹಾತ್ಮೆ ಪಾರಾಯಣ, ಪುಷ್ಪಾಂಜಲಿ ಕಲ್ಪೋಕ್ತ ಪೂಜೆ, ಶ್ರೀ ದೇವರಿಗೆ ವಿಶೇಷ ಸೇವಾ ಪೂಜೆ, ಭಜನೆ, ಅನ್ನದಾನದೊಂದಿಗೆ ಶ್ರದ್ಧಾ ಭಕ್ತಿಯಿಂದ ಸಜೀಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್ ನೇತೃತ್ವದಲ್ಲಿ ನೆರವೇರಿತು.
ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಜಯಶಂಕರ ಬಾಸ್ರಿತ್ತಾಯ, ಸದಸ್ಯರಾದ ಎನ್ ಕೆ ಶಿವ, ಕೃಷ್ಣ ಭಟ್, ಹರಿಪ್ರಸಾದ್ ಭಂಡಾರಿ, ರಾಜು ಪೂಜಾರಿ, ಶ್ರೀನಿವಾಸ ನಾಯಕ್, ಚಿತ್ರ ಎಸ್ ರೈ, ಚಿತ್ರ ವರಕಾಯಿ, ಪ್ರಮುಖರಾದ ಧನೇಶ್ವರ ರಾವ್, ಉಮೇಶ ರಾವ್, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ರವೀಂದ್ರ ಕಂಬಳಿ, ನ್ಯಾಯವಾದಿ ದಿನೇಶ ಭಂಡಾರಿ, ನಂದಾವರ ಕ್ಷೇತ್ರದ ಜೀಣೋದ್ಧಾರ ಸಮಿತಿ ಅಧ್ಯಕ್ಷ ಎನ್ ಶಶಿರಾಜ್ ರಾವ್, ಈಶ್ವರಮಂಗಲ ಸದಾಶಿವ ದೇವಸ್ಥಾನ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ದೇವಿ ಪ್ರಸಾದ್ ಪೂಂಜ, ರಾಮಕೃಷ್ಣ ಭಟ್, ವಿಶ್ವನಾಥ ಆಳ್ವ, ಧನಂಜಯ ಶೆಟ್ಟಿ, ಪ್ರವೀಣ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

Related Articles

Back to top button