ಸುದ್ದಿ

ಎಸ್ಸೆಸ್ಸೆಫ್ ಗಾಂಧಿನಗರ – ಪ್ರಾರ್ಥನಾ ಸಂಗಮ…

ಸುಳ್ಯ: ಕರ್ನಾಟಕ ರಾಜ್ಯ ಸುನ್ನಿ ಸ್ಟುಡೆಂಟ್ಸ್ ಫೆಡರೇಶನ್ (ರಿ) ಎಸ್ಸೆಸ್ಸೆಫ್ ಗಾಂಧಿನಗರ ಶಾಖೆಯ ಲಾಕ್ ಡೌನ್ ಹಾಗೂ ರಂಝಾನ್ ತಿಂಗಳಲ್ಲಿ ನಡೆಸಿದ ಸಾಂತ್ವನ ಕಾರ್ಯಾಚರಣೆಗಳ ವರದಿ ಮಂಡನೆ ಹಾಗೂ ಸಹಾಯ ಸಹಕಾರ ನೆರವುಗಳನ್ನು ನೀಡಿದ ದಾನಿಗಳಿಗೆ ಹಾಗೂ ಅಗಲಿದ ನಾಯಕರು, ಕಾರ್ಯಕರ್ತರಿಗೆ ಪ್ರಾರ್ಥನಾ ಸಂಗಮ ಜರಗಿತು.
ವಿವಿಧ ಕಾರ್ಯಾಚರಣೆಗಳಿಗಾಗಿ ಸಿದ್ದೀಖ್ ಕಟ್ಟೆಕಾರ್ ಅವರು ದಾನಿಗಳಿಂದ ರೂ.60 ಸಾವಿರ ಸಂಗ್ರಹಿಸಿ, ಎಸ್ಸೆಸ್ಸೆಫ್ ವತಿಯಿಂದ ವೈದ್ಯಕೀಯ ಹಾಗೂ ವಿವಿಧ ಸಾಂತ್ವನ ಪ್ರವರ್ತನಗಳನ್ನು ಹಾಗೂ ಕಿಟ್ ಗಳನ್ನು ಅರ್ಹ ಕುಟುಂಬಗಳಿಗೆ ತಲುಪಿಸುವಲ್ಲಿ ಯಶಸ್ವಿಯಾಗಿದೆ.
ಎಸ್.ವೈ.ಎಸ್ ದ.ಕ ಈಸ್ಟ್ ಜಿಲ್ಲಾ ಉಪಾಧ್ಯಕ್ಷರು ಅಬ್ದುಲ್ ಹಮೀದ್ ಬೀಜಕೊಚ್ಚಿ ಪ್ರಾರ್ಥನಾ ಸಂಗಮಕ್ಕೆ ನೇತೃತ್ವ ನೀಡಿದರು.
ಎಸ್ಸೆಸ್ಸೆಫ್ ಗಾಂಧಿನಗರ ಶಾಖಾಧ್ಯಕ್ಷ ಸಿದ್ದೀಖ್ ಬಿ.ಎ ಅಧ್ಯಕ್ಷತೆಯಲ್ಲಿ ಎಸ್ಸೆಸ್ಸೆಫ್ ಸುಳ್ಯ ಸೆಕ್ಟರ್ ಅಧ್ಯಕ್ಷ ಸ್ವಬಾಹ್ ಹಿಮಮಿ ಉದ್ಘಾಟಿಸಿದರು. ಎಸ್.ವೈ.ಎಸ್ ದ.ಕ ಈಸ್ಟ್ಜಿ ಜಿಲ್ಲಾ ಸದಸ್ಯರಾದ ಸಿದ್ದೀಖ್ ಕಟ್ಟೆಕಾರ್, ಸುಳ್ಯ SYS ಸೆಂಟರ್ ನಾಯಕರಾದ ಹಸೈನಾರ್ ಜಯನಗರ,ಮಹಮ್ಮದ್ C.A ಕೋಶಾಧಿಕಾರಿ SYS ಗಾಂಧಿನಗರ ಬ್ರಾಂಚ್, ಸ್ವಾದಿಖ್ ಪಿ.ಜಿ, ಆರಿಫ್ ಬುಶ್ರಾ ಮುಂತಾದವರು ಉಪಸ್ಥಿತರಿದ್ದರು. ಸುಳ್ಯ ಡಿವಿಸನ್ ಸದಸ್ಯರಾದ ನೌಶಾದ್ ಕೆರೆಮೂಲೆ ಸ್ವಾಗತಿಸಿ, ಪ್ರ.ಕಾರ್ಯದರ್ಶಿ ಬಶೀರ್ ಕಲ್ಲುಮುಟ್ಲು ವಂದಿಸಿದರು.

Related Articles

Back to top button