SSF ಸುಳ್ಯ ಸೆಕ್ಟರ್ Review ಕಾರ್ಯಕ್ರಮ…

ಸುಳ್ಯ: ಕರ್ನಾಟಕ ರಾಜ್ಯ ಸುನ್ನಿ ಸ್ಟೂಡೆಂಟ್ ಫೆಡರೇಶನ್ SSF ಸುಳ್ಯ ಸೆಕ್ಟರ್ ಇದರ ಅರ್ಧವಾರ್ಷಿಕ ಅವಧಿಯ ಕೌನ್ಸಿಲ್ ಕಾರ್ಯಕ್ರಮವು ಸೆಕ್ಟರ್ ಅಧ್ಯಕ್ಷರಾದ ಸಿದ್ದೀಕ್ ಬಿ. ಎ ರವರ ಅದ್ಯಕ್ಷತೆಯಲ್ಲಿ ಸುನ್ನೀ ಸೆಂಟರ್ ನಡೆಯಿತು.

ಸೆಕ್ಟರ್ ರೈನ್ಬೋ ಕಾರ್ಯದರ್ಶಿಯಾದ ಅಬ್ದುಲ್ ರಶೀದ್ ಝೈನಿ ಉಸ್ತಾದರು ದುಆ ದ ಮೂಲಕ ಕಾರ್ಯಕ್ರಮಕ್ಕೆ ಅಧಿಕೃತ ಚಾಲನೆ ನೀಡಿದರು. ಸೆಕ್ಟರ್ ಕ್ಯಾಂಪಸ್ ಕಾರ್ಯದರ್ಶಿ ಶಾಕಿರ್ ಮೊಗರ್ಪಣೆ ಕಾರ್ಯಕ್ರಮದ ಅತಿಥಿ ಗಳನ್ನು ಹಾಗೂ ಕಾರ್ಯಕರ್ತರನ್ನು ಸ್ವಾಗತಿಸಿದರು. ಸೆಕ್ಟರ್ ಉಸ್ತುವಾರಿಯಾದ ಸಿರಾಜ್ ಹಿಮಮಿ ಉಸ್ತಾದರು ಕಾರ್ಯಕ್ರಮದ ಉದ್ಘಾಟನೆಯನ್ನು ಮಾಡಿದರು. 6 ತಿಂಗಳ ಅವಧಿಯ ವರದಿಯನ್ನು ಸೆಕ್ಟರ್ ಪ್ರ.ಕಾರ್ಯದರ್ಶಿ ಅಝೀಝ್ ಮಾಸ್ಟರ್ ಏಣಾವರ ವಾಚಿಸಿದರು ಹಾಗೂ ಲೆಕ್ಕ ಪತ್ರವನ್ನು ಕೋಶಾಧಿಕಾರಿ ಶರೀಫ್ ಜಯನಗರ ಸಭೆಯಲ್ಲಿ ಮಂಡಿಸಲಾಯಿತು. ನಂತರ ಸೆಕ್ಟರ್ ನ ಮುಂದಿನ ಕಾರ್ಯ ವೈಖರಿಗಳ ಬಗ್ಗೆ ಡಿವಿಷನ್ ನಾಯಕರು ಅವಲೋಕನ ನಡೆಸಿದರು. ಮುಂದೆ SSF ಸುಳ್ಯ ಡಿವಿಷನ್ ಕೋಶಾಧಿಕಾರಿಯಾದ ಅಬ್ದುಲ್ ರಹ್ಮಾನ್ ಸಖಾಫಿ ರವರು SSF ಪ್ರಾಮುಖ್ಯತೆ, ಸಂಘಟನಾ ಶಕ್ತಿ ಕುರಿತಾಗಿ ಪ್ರಾಸ್ತವಿಕವಾಗಿ ಉದ್ಬೋಧನೆ ನಡೆಸಿದರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ SSF ಸುಳ್ಯ ಡಿವಿಶನ್ ಅಧ್ಯಕ್ಷರಾದ ಫೈಝಲ್ ಝುಹುರಿ ಹಾಗೂ SYS ಈಸ್ಟ್ ಜಿಲ್ಲಾ ಸದಸ್ಯರಾದ ಸಿದ್ದೀಕ್ ಕಟ್ಟೆಕ್ಕಾರ್ ರವರು ಉಪಸ್ಥಿತರಿದ್ದರು. ವೀಕ್ಷಕರಾಗಿ ಕಬೀರ್ ಜಟ್ಟಿಪಳ್ಳ ಹಾಗೂ ಕ್ಯಾಂಪಸ್ ಕಾರ್ಯದರ್ಶಿ ಸ್ವಾದಿಕ್ ಮಾಸ್ಟರ್ ರವರು ಕಾರ್ಯಕ್ರಮವನ್ನು ಮುನ್ನಡಿಸಿದರು.
ಈ ಸಂದರ್ಭದಲ್ಲಿ ಡಿವಿಷನ್ ಸಮಿತಿಯ ಶಮೀರ್ ಮೊಗರ್ಪಣೆ, ಸಿದ್ದೀಕ್ ಎಲಿಮಲೆ,ರಪೀಕ್ ಅಮ್ಜದಿ ಉಪಸ್ಥಿತರಿದ್ದರು. ಸೆಕ್ಟರ್ ಕಾರ್ಯದರ್ಶಿಯಾದ ಇಜಾಝ್ ಗೂನಡ್ಕ ರವರು ಕಾರ್ಯಕ್ರಮಕ್ಕೆ ಆಗಮಿಸಿದಂತಹ ಸರ್ವರಿಗೂ ಧನ್ಯವಾದ ಸಲ್ಲಿಸಿದರು.
ಈ ಕಾರ್ಯಕ್ರಮದಲ್ಲಿ ಸೆಕ್ಟರ್ ಅಧೀನದ ಯುನಿಟ್ ಗಳ ಹಲವಾರು ಕಾರ್ಯಕರ್ತರು ಭಾಗವಹಿಸಿದ್ದರು.

Sponsors

Related Articles

Back to top button