ಸುದ್ದಿ

ಸಾಹಿತಿ ಗುಣಾಜೆ ರಾಮಚಂದ್ರ ಭಟ್ಟರಿಗೆ ರಾಜ್ಯ ಪ್ರಶಸ್ತಿ…

ಮಂಗಳೂರು: ಕರ್ನಾಟಕ ರಾಜ್ಯ ಬರಹಗಾರರ ಸಂಘ ಹೂವಿನ ಹಡಗಲಿ ವತಿಯಿಂದ 2021 ರ ವರ್ಷದ ಬರಹಗಾರ ರಾಜ್ಯ ಪ್ರಶಸ್ತಿಯನ್ನು ವಿಶ್ರಾಂತ ಶಿಕ್ಷಕ, ಕವಿ ,ಸಾಹಿತಿ ಗುಣಾಜೆ ರಾಮಚಂದ್ರ ಭಟ್ಟರಿಗೆ ನೀಡಲಾಯಿತು.
ಮಂಗಳೂರು ಸಂದೇಶ ಪ್ರತಿಷ್ಠಾನದಲ್ಲಿ ಪಿಂಗಾರ ಸಾಹಿತ್ಯ ಬಳಗ ಏರ್ಪಡಿಸಿದ್ದ ಸಾಹಿತ್ಯ ಸಂಭ್ರಮ ಕಾರ್ಯಕ್ರಮದಲ್ಲಿ ಪುರಸ್ಕಾರ ನೀಡಿ, ಸನ್ಮಾನಿಸಿ ಗೌರವಿಸಲಾಯಿತು. ಪಿಂಗಾರ ಬಳಗದ ಅಧ್ಯಕ್ಷ ರೇಮಂಡ್ ಡಿಕುನ್ಹಾ , ಡಾ.ಸುರೇಶ ನೆಗಳಗುಳಿ, ಕಾದಂಬರಿಕಾರ ಪ್ರದೀಪ್ ಕುಮಾರ್, ಸಂಘಟಕ ಗಂಗಾಧರ ಗಾಂಧಿ, ರಾಣಿ ಪುಷ್ಪಲತಾದೇವಿ , ಕವಯಿತ್ರಿ ಸುಶೀಲಾ ನೆಗಳಗುಳಿ,ಬರಹಗಾರರ ಬಳಗದ ಜಿಲ್ಲಾಧ್ಯಕ್ಷ ಜಯಾನಂದ ಪೆರಾಜೆ ಉಪಸ್ಥಿತರಿದ್ದರು.

Related Articles

Back to top button