ಸುದ್ದಿ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಸಹಾಯಧನ ವಿತರಣೆ…

ಬಂಟ್ವಾಳ: ತಾಲೂಕಿನ ಸರಪಾಡಿ ಗ್ರಾಮದ ರಾಜಶ್ರೀ ಸಂಘದ ಸಧಸ್ಯರಾದ ವಸಂತಿಯವರು, ವಾಸ ಆಗಿರುವ ಮನೆಗೆ ಬೆಂಕಿ ಬಿದ್ದು, ಮನೆಯಲ್ಲಿ ಇದ್ದ ಎಲ್ಲಾ ದಾಖಲೆ ಪತ್ರ, ಬಟ್ಟೆ, ಬಂಗಾರ ಎಲ್ಲವೂ ಸಂಪೂರ್ಣವಾಗಿ ಸುಟ್ಟು ಕರಕಲಾಗಿದ್ದು, ಅಪಾರ ಹಾನಿ ಆಗಿರುತ್ತದೆ.
ಇವರಿಗೆ ರೂ 10,000 ಸಹಾಯಧನವನ್ನು ಪ್ರಾದೇಶಿಕ ನಿರ್ದೇಶಕರಾದ ವಸಂತ್ ಸಾಲ್ಯಾನ್ ರವರು ಹಸ್ತಾಂತರಿಸಿದರು. ದಕ್ಷಿಣ ಕನ್ನಡ ಜಿಲ್ಲಾ ನಿರ್ದೇಶಕರಾದ ಸತೀಶ್ ಶೆಟ್ಟಿ ಮತ್ತು ತಾಲೂಕು ಯೋಜನಾ ಅಧಿಕಾರಿ ಜಯಾನಂದ ಪಿ ಉಪಸ್ಥಿತರಿದ್ದರು.

Related Articles

Leave a Reply

Your email address will not be published.

Back to top button