ಸುದ್ದಿ

ಮಾಜಿ ಸಚಿವ ರಮಾನಾಥ ರೈ ಭೇಟಿ ಮಾಡಿದ ಸುಳ್ಯದ ಕಾಂಗ್ರೆಸ್ ನಾಯಕರು…

ಸುಳ್ಯ: ಮಾಜಿ ಸಚಿವ ಬಿ.ರಮಾನಾಥ ರೈ ರವರನ್ನು ಸುಳ್ಯ ಕಾಂಗ್ರೆಸ್ ಪಕ್ಷದ ಮುಖಂಡರು ಆಗಸ್ಟ್ 1ರಂದು ಸಂಜೆ ಸುಳ್ಯದಲ್ಲಿ ಹೋಟೆಲ್ ನಲ್ಲಿ ಭೇಟಿಯಾದರು.
ಮಾಜಿ ಸಚಿವ ರಮಾನಾಥ ರೈ ಪಕ್ಷದ ಕಾರ್ಯಕ್ರಮದ ಅಂಗವಾಗಿ ಮಡಿಕೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿ ಸುಳ್ಯ ಮಾರ್ಗವಾಗಿ ಬಂಟ್ವಾಳ ಕ್ಕೆ ಹಿಂತಿರುಗುವ ವೇಳೆ ಈ ಭೇಟಿ ನಡೆಯಿತು. ಮುಂದಿನ ದಿನಗಳಲ್ಲಿ ಪಕ್ಷದ ಸಂಘಟನೆ- ಬೆಳವಣಿಗೆಗೆ ಪೂರಕವಾದ ಕಾರ್ಯ ಚಟುವಟಿಕೆಗಳ ಬಗ್ಗೆ ಸಮಾಲೋಚನೆ ನಡೆಸಲಾಗಿದೆ ಎಂದು ತಿಳಿದುಬಂದಿದೆ.
ಈ ಸಂದರ್ಭದಲ್ಲಿ ಪುತ್ತೂರು ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಹೇಮನಾಥ ಶೆಟ್ಟಿ ಕಾವು, ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಯಪ್ರಕಾಶ್ ರೈ, ಕೆಪಿಸಿಸಿ ಮಾಜಿ ಕಾರ್ಯದರ್ಶಿ ಎಂ.ವೆಂಕಪ್ಪಗೌಡ, ಸುಳ್ಯ ನಗರ ಕಾಂಗ್ರೆಸ್ ಅಧ್ಯಕ್ಷ ಶಶಿಧರ ಎಂ ಜೆ,
ಪಕ್ಷದ ಮುಖಂಡರುಗಳಾದ ಎಸ್. ಸಂಸುದ್ದೀನ್, ನಂದರಾಜ್ ಸಂಕೇಶ, ಭವಾನಿ ಶಂಕರ್ ಕಲ್ಮಡ್ಕ, ಶಾಫಿ ಕುತ್ತಮಟ್ಟೆ, ರಫೀಕ್ ಪಡು, ಬಶೀರ್, ಮಧುಸೂದನ ಬೂಡು ಮೊದಲಾದವರು ಉಪಸ್ಥಿತರಿದ್ದರು.

 

Related Articles

Leave a Reply

Your email address will not be published.

Back to top button