ಸುದ್ದಿ

ಸುಳ್ಯ – ಮೋರ್ ಸೂಪರ್ ಮಾರ್ಕೆಟ್ ಶುಭಾರಂಭ…

ಸುಳ್ಯ: ಗಾಂಧಿನಗರದಲ್ಲಿರುವ ಗೋಪಿನಾಥ್‌ ಎಂ. ಪಿ. ಮಾಲಕತ್ವದ ಗೋಪಿಕಾ ಕಾಂಪ್ಲೆಕ್ಸ್‌ ನಲ್ಲಿ ಅಂತರಾಷ್ಟ್ರೀಯ ಮಾನ್ಯತೆ ಹೊಂದಿರುವ ಮೋರ್‌ ಸೂಪರ್‌ ಮಾರ್ಕೆಟ್‌ ಜು. 14 ರಂದು ಶುಭಾರಂಭಗೊಂಡಿತು.
ಕಾಂಪ್ಲೆಕ್ಸ್‌ ಮಾಲಕರ ಪತ್ನಿ ಶ್ರೀಮತಿ ಯೋಗಿತಾ ಗೋಪಿನಾಥ್‌ರವರು ದೀಪ ಬೆಳಗಿಸಿ ಶುಭ ಹಾರೈಸಿದರು. ಈ ಸಂದರ್ಭ
ಯುವ ಉದ್ಯಮಿ ಪ್ರಣವ್‌ ಎಂ.ಜಿ, ಸೂಪರ್‌ ಮಾರ್ಕೆಟ್‌ ನ ಕ್ಲಸ್ಟರ್‌ ಮ್ಯಾನೇಜರ್‌ ಸಂಜು ಚಿಂಗಪ್ಪ, ಸ್ಟೋರ್‌ ಮ್ಯಾನೇಜರ್‌
ಲೋಕೇಶ್‌ ಆರ್‌, ಎನ್‌.ಎಸ್‌. ಒ. ವಿಜಯ್‌, ಕ್ಲಸ್ಟರ್‌ ಮೇನೇಜರ್‌ ವಿಶ್ವನಾಥ, ಹೆಚ್‌.ಆರ್‌. ಪ್ರಗತ್‌ ರಾಜ್‌
ಉಪಸ್ಥಿತರಿದ್ದರು.
ನ.ಪಂ.ಸದಸ್ಯರಾದ ಶರೀಫ್‌ ಕಂಠಿ, ಉಮ್ಮರ್‌, ನ್ಯಾಯವಾದಿ ಎಂ.ವೆಂಕಪ್ಪ ಗೌಡ, ಉಮೇಶ್‌ ಪಿ.ಕೆ, ಲಯನ್ಸ್‌ ಅಧ್ಯಕ್ಷ ಆನಂದ ಪೂಜಾರಿ, ರೋಟರಿ ಕ್ಲಬ್‌ ಅಸಿಸ್ಟೆಂಟ್‌ ಗವರ್ನರ್‌ ಜಿತೇಂದ್ರ ಎನ್‌ ಎ, ಡಾ.ಹರ್ಷಿತಾ ಪುರುಷೋತ್ತಮ, ಶೈಮಾ ಜಿತೇಂದ್ರ ಎನ್‌. ಎ, ಪತ್ರಕರ್ತ ಗಂಗಾಧರ ಮಟ್ಟಿ, ಅಬ್ದುಲ್‌ ಖಾದರ್‌ ಬೊಳುಬೈಲು ಮತ್ತಿತರರು ಆಗಮಿಸಿ ಶುಭಹಾರೈಸಿದರು.
ಸೂಪರ್‌ ಮಾರ್ಕೆಟ್‌ ನಲ್ಲಿ ಉತ್ತಮ ಗುಣಮಟ್ಟದ ದಿನಬಳಕೆಯ ಗೃಹೋಪಯೋಗಿ ವಸ್ತುಗಳು ಮತ್ತು ಆಹಾರ ಪದಾರ್ಥಗಳು ಮಿತ ದರದಲ್ಲಿ ಲಭ್ಯವಿದೆ. ಶುಭಾರಂಭದ ಪ್ರಯುಕ್ತ ಖರೀದಿಯ ಮೇಲೆ ವಿಶೇಷ ಆಫರ್‌ ನೀಡಲಾಗುವುದು.ಪ್ರತಿದಿನ ಬೆಳಗ್ಗೆ ಗಂಟೆ 7.00 ರಿಂದ ರಾತ್ರಿ 9.00 ರ ತನಕ ಗ್ರಾಹಕರಿಗೆ ಖರೀದಿಗೆ ಅವಕಾಶವಿರುವುದಾಗಿ ಮೇನೇಜರ್‌ ತಿಳಿಸಿದ್ದಾರೆ.

Related Articles

Back to top button