ರಾಜ್ಯದ ಕೋವಿಡ್ -19 ಟಾಸ್ಕ್ ಫೋರ್ಸ್ ಸಮಿತಿ ಬದಲಾವಣೆಗೆ ಟಿ.ಎಂ.ಶಾಹೀದ್ ಆಗ್ರಹ…

ಬೆಂಗಳೂರು: ರಾಜ್ಯದ ಕೋವಿಡ್ -19 ಟಾಸ್ಕ್ ಫೋರ್ಸ್ ಸಮಿತಿಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ, ಡಿ.ಕೆ.ಶಿವಕುಮಾರ್, ಸಲೀಮ್ ಅಹಮ್ಮದ್ ಹಾಗೂ ಹೆಚ್.ಡಿ.ಕುಮಾರಸ್ವಾಮಿ ಸಹಿತ ಇನ್ನಿತರ ಗಣ್ಯರನ್ನು ಸೇರಿಸಲು ಟಿ.ಎಂ.ಶಾಹೀದ್ ತೆಕ್ಕಿಲ್ ಸರಕಾರಕ್ಕೆ ಮನವಿ ಮಾಡಿದ್ದಾರೆ.
ರಾಜ್ಯದಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗ ವ್ಯಾಪಕವಾಗಿ ಹಬ್ಬುತ್ತಿದ್ದು,ರಾಜ್ಯ ಸರಕಾರ ರಚಿಸಿದ ಟಾಸ್ಕ್ ಫೋರ್ಸ್ ರಾಜ್ಯ ಸರಕಾರದ ವೈಫಲ್ಯವನ್ನು ಎತ್ತಿ ತೋರಿಸುತ್ತಿದೆ. ಮುಖ್ಯಮಂತ್ರಿಯವರು ಈ ಇಳಿ ವಯಸ್ಸಿನಲ್ಲೂ ಕೂಡ ಸತತವಾಗಿ ಸಭೆಗಳನ್ನು ಮಾಡಿ ಹತೋಟಿಗೆ ತರಲು ಪ್ರಯತ್ನಿಸುತಿದ್ದಾರೆ. ಆದರೆ ಇತರ ಸಚಿವರುಗಳು ಸಭೆ, ಪ್ರಚಾರ,ಕಮಿಷನ್ ಮತ್ತು ಮಾಧ್ಯಮಗಳಲ್ಲಿ ವಿವಿಧ ರೀತಿಯ ಹೇಳಿಕೆಗಳನ್ನು ನೀಡಿ ಸಮಯ ಕಳೆಯುತ್ತಿದ್ದು, ಇದರಿಂದಾಗಿ ರಾಜ್ಯದ ಜನ ಕಂಗೆಟ್ಟಿದ್ದಾರೆ. ರಾಜ್ಯದಲ್ಲಿ,ದೇಶದಲ್ಲಿ ಮತ್ತು ಪ್ರಪಂಚದಾದ್ಯಂತ ಆರೋಗ್ಯ ತುರ್ತು ಪರಿಸ್ಥಿತಿ ಇರುವಂತಹ ಈ ಸಂದರ್ಭದಲ್ಲಿ ಸರಕಾರ ಅಧಿಕಾರಿಗಳ ಮತ್ತು ಜನರ ವಿಶ್ವಾಸವನ್ನು ಗಳಿಸುವಲ್ಲಿ ವಿಫಲವಾಗಿದೆ. ಹಲವು ಪ್ರಯೋಗಾಲಯಗಳಲ್ಲಿ ವರದಿಗಳು ಕೂಡ ವಿಭಿನ್ನವಾಗಿ ಅಂದರೆ ಪಾಸಿಟಿವ್ ಇರುವಲ್ಲಿ ನೆಗೆಟಿವ್, ನೆಗೆಟಿವ್ ಇರುವಲ್ಲಿ ಪಾಸಿಟಿವ್ ವರದಿಗಳನ್ನು ನೀಡುವುದು ಅಲ್ಲದೇ ಪ್ರಯೋಗಾಲಯದ ವರದಿಗಳು ತಡವಾಗುವುದರಿಂದ ಜನರಿಗೆ ಆತಂಕವಾಗಿದೆ ಮತ್ತು ರೋಗ ಹರಡಲು ಕಾರಣವಾಗಿದೆ.
ಜನರಿಗೆ ಅವಶ್ಯಕವಾದ ಮಾಸ್ಕ್, ಸ್ಯಾನಿಟೈಸರ್, ಬೆಡ್ ಗಳು,ಮಾತ್ರೆ ಮತ್ತು ವೆಂಟಿಲೇಟರ್ ಗಳ ಖರೀದಿಯಲ್ಲಿ ವ್ಯಾಪಕವಾದ ಅವ್ಯವಹಾರಗಳು ನಡೆದಿದೆ. ಅದಕ್ಕಾಗಿ ಸನ್ಮಾನ್ಯ ಮುಖ್ಯಮಂತ್ರಿ ಶ್ರೀ ಯಡಿಯೂರಪ್ಪನವರ ನೇತೃತ್ವದಲ್ಲಿ ರಾಜ್ಯಮಟ್ಟದಲ್ಲಿ ರಾಜ್ಯದ ಕೋವಿಡ್ -19 ಟಾಸ್ಕ್ ಫೋರ್ಸ್ ಸಮಿತಿಯಲ್ಲಿ ಮಾಜಿಮುಖ್ಯಮಂತ್ರಿ ಶ್ರೀಯುತ ಸಿದ್ಧರಾಮಯ್ಯ, ಡಿ.ಕೆ.ಶಿವಕುಮಾರ್, ಸಲೀಮ್ ಅಹಮ್ಮದ್, ಹೆಚ್.ಡಿ.ಕುಮಾರಸ್ವಾಮಿ , ಈಶ್ವರ ಖಂಡ್ರೆ ,ಸತೀಶ್ ಜಾರಕಿಹೊಳಿ, ಎಸ್.ಆರ್.ಪಾಟೀಲ್, ಬಿ.ಜೆ.ಪಿ.ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಜೆ.ಡಿ.ಎಸ್.ಅಧ್ಯಕ್ಷ ಹೆಚ್.ಕೆ.ಕುಮಾರಸ್ವಾಮಿ , ರಾಜ್ಯದ ಪ್ರಚಾರಪ್ರಿಯರಲ್ಲದ, ವಾಣಿಜ್ಯ ಉದ್ದೇಶ ಇಲ್ಲದ, ತಜ್ಙ ವೈದ್ಯರ ನೇತೃತ್ವದಲ್ಲಿ ಮತ್ತು ಸಾಮಾಜಿಕ ಬಧ್ದತೆ ಇರುವ ವೈದ್ಯಕೀಯ ಕಾಲೇಜುಗಳ ಹಾಗೂ ಆಸ್ಪತ್ರೆಗಳ ಮುಖ್ಯಸ್ಥರನ್ನು ಒಳಗೊಂಡ ಟಾಸ್ಕ್ ಫೋರ್ಸ್ ಸಮಿತಿಯನ್ನು ರಚಿಸಲು ಮತ್ತು ಈಗ ಸಮಿತಿಯಲ್ಲಿರುವ ಎಲ್ಲಾ ಸಚಿವರುಗಳನ್ನು ಬಿಡುಗಡೆ ಗೊಳಿಸಬೇಕೆಂದು ಸರಕಾರಕ್ಕೆ ಟಿ.ಎಂ.ಶಾಹೀದ್ ವಿನಂತಿಸಿದ್ದಾರೆ. ಮುಂದೆ ಕೋವಿಡ್-19 ರ ವಿಚಾರದಲ್ಲಿ ನಡೆಯುವ ಎಲ್ಲಾ ಔಷಧ ಖರೀದಿ ,ವೆಂಟಿಲೇಡರ್ ಖರೀದಿ,ಮತಿತ್ತರ ವಿಷಯಗಳಿಗೆ ಸಂಪೂರ್ಣ ಜವಬ್ದಾರಿಗಳನ್ನು ಟಾಸ್ಕ್ ಫೋರ್ಸ್ ಸಮಿತಿಗೆ ವಹಿಸಬೇಕಾಗಿ ಮಾಜಿ ಕೆ.ಪಿ.ಸಿ.ಸಿ ಕಾರ್ಯದರ್ಶಿ ಹಾಗೂ ವಿರಾಜ ಪೇಟೆ ಉಸ್ತುವಾರಿ ಟಿ.ಎಂ.ಶಾಹೀದ್ ತೆಕ್ಕಿಲ್ ಸರಕಾರಕ್ಕೆ ಆಗ್ರಹಿಸಿದ್ದಾರೆ.

Sponsors

Related Articles

Leave a Reply

Your email address will not be published. Required fields are marked *

Back to top button