ಸುದ್ದಿ

ಸುಳ್ಯ- ರಂಗಮನೆಯಲ್ಲಿ ಹಿಮ್ಮೇಳ ತರಗತಿ ಆರಂಭ…

ಸುಳ್ಯ: ಹಳೆಗೇಟಿನಲ್ಲಿರುವ ರಂಗಮನೆ ಸಾಂಸ್ಕೃತಿಕ ಕಲಾ ಕೇಂದ್ರದಲ್ಲಿ ಸುಜನಾ ಯಕ್ಷಗಾನ ಅಧ್ಯಯನ ಕೇಂದ್ರದ ಆಶ್ರಯದಲ್ಲಿ ನಡೆಯುವ ಯಕ್ಷಗಾನ ಹಿಮ್ಮೇಳ ತರಗತಿಯನ್ನು ಹಿರಿಯ ಕಲಾವಿದರಾದ ಸುಜನಾ ಸುಳ್ಯರವರು ಉದ್ಘಾಟಿಸಿದರು.
ಗುರುಗಳಾದ ವಳಕುಂಜ ಸುಬ್ರಹ್ಮಣ್ಯ ಮತ್ತು ಕೇಂದ್ರದ ಸಂಚಾಲಕರಾದ ಡಾ. ಸುಂದರ ಕೇನಾಜೆ ಉಪಸ್ಥಿತರಿದ್ದರು.
ತರಗತಿಯು ಪ್ರತಿ ಭಾನುವಾರ ಪೂರ್ವಾಹ್ನ 9.00 ರಿಂದ ಅಪರಾಹ್ನ 1.00 ರ ವರೆಗೆ ನಡೆಯಲಿದ್ದು, ಆಸಕ್ತರು ಗುರು ಕುಮಾರ ಸುಬ್ರಹ್ಮಣ್ಯ ( 9845505543 ) ಇವರನ್ನು ನೇರ ಸಂಪರ್ಕಿಸಬಹುದು. ರಂಗಮನೆ ಹಿಮ್ಮೇಳ ತರಗತಿಗಾಗಿ 9449915777 ಈ ನಂಬರ್ ಗೆ ಸಂಪರ್ಕಿಸಬಹುದು ಎಂದು ರಂಗಮನೆ ಅಧ್ಯಕ್ಷ ಜೀವನ್ ರಾಂ ಸುಳ್ಯ ತಿಳಿಸಿದ್ದಾರೆ.

Related Articles

Back to top button