ಸುದ್ದಿ

ಸುಳ್ಯ – ಫುಟ್ಬಾಲ್ ಆಟಗಾರರು ಹಾಗೂ ಫುಟ್ಬಾಲ್ ಅಭಿಮಾನಿ ಗಳಿಂದ ಫುಟ್ಬಾಲ್ ಪೋಸ್ಟ್ ಹಸ್ತಾಂತರ…

ಸುಳ್ಯ: ಕರ್ನಾಟಕ ಪಬ್ಲಿಕ್ ಸ್ಕೂಲ್ ಗಾಂಧಿನಗರ ಇಲ್ಲಿಯ ಆಟದ ಮೈದಾನಕ್ಕೆ ಫುಟ್ಬಾಲ್ ಆಟಗಾರರು ಹಾಗೂ ಕ್ರೀಡಾಭಿಮಾನಿಗಳಿಂದ ರೂ.25 ಸಾವಿರವನ್ನು ಸಂಗ್ರಹಿಸಿ ಫುಟ್ಬಾಲ್ ಪೋಸ್ಟ್ ನ್ನು ನಿರ್ಮಿಸಿ ಹಸ್ತಾಂತರಿಸಲಾಯಿತು.
ಈ ಹಸ್ತಾಂತರ ಕಾರ್ಯಕ್ರಮ ಕರ್ನಾಟಕ ಪಬ್ಲಿಕ್ ಸ್ಕೂಲ್ ಗಾಂಧಿನಗರ ಇಲ್ಲಿಯ ಪ್ರಾಂಶುಪಾಲರಾದ ಸಮದ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಕರ್ನಾಟಕ ಪಬ್ಲಿಕ್ ಸ್ಕೂಲ್ ಸುಳ್ಯ ದೈಹಿಕ ಶಿಕ್ಷಕರಾದ ಶ್ರೀಮತಿ ಭವಾನಿಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿದರು. ನ. ಪಂ. ಸದಸ್ಯ ಶರೀಫ್ ಕಂಠಿ ಅವರು ಕಾರ್ಯಕ್ರಮದ ಕುರಿತು ಪ್ರಾಸ್ತವಿಕ ಮಾತಗಳನ್ನಾಡಿದರು. ಮುನಾಫರ್ ಸುಳ್ಯ ಸ್ವಾಗತಿಸಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಪಬ್ಲಿಕ್ ಸ್ಕೂಲ್ ಗಾಂಧಿನಗರ ಉಪ ಪ್ರಾಂಶುಪಾಲರಾದ ಅರುಣ್, ಫರೀದ್ ಶಿಲ್ಪ, ಉರ್ಷಾನ್ ಸುಳ್ಯ, ಶಾಫಿ ನಾವೂರ್, ರಿಝವಾನ್ ನಾವೂರ್, ಉಬೈಸ್ ಸಾಬು, ನಿಝರ್ ಕಲ್ಲುಮುಟ್ಲು, ಶಮಾಲ್ ವೆಲ್ಕಮ್, ಬಷೀರ್ ಗೋರಿ, ಹಾಗೂ ಹಲವಾರು ಊರಿನ ಪ್ರಮುಖರು ಹಾಗೂ ಕರ್ನಾಟಕ ಪಬ್ಲಿಕ್ ಸ್ಕೂಲ್ ಗಾಂಧಿನಗರ ಇಲ್ಲಿಯ ಹಲವಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

Related Articles

Back to top button