ಸುಳ್ಯ ಅಲ್ಪಸಂಖ್ಯಾತರ ವಿವಿಧೋದ್ಧೇಶ ಸಹಕಾರಿ ಸಂಘ – 2021 -22 ನೇ ಸಾಲಿನ ವಿಶಿಷ್ಟ ಸಾಧನ ಪ್ರಶಸ್ತಿ…

ಸುಳ್ಯ: ಸುಳ್ಯ ಅಲ್ಪಸಂಖ್ಯಾತರ ವಿವಿಧೋದ್ಧೇಶ ಸಹಕಾರಿ ಸಂಘ ಸಂಸ್ಥೆಗೆ 2021-22 ನೇ ಸಾಲಿನ ವಿಶಿಷ್ಟ ಸಾಧನ ಪ್ರಶಸ್ತಿ ದೊರೆತಿದೆ.

ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಈ ಪ್ರಶಸ್ತಿ ನೀಡುತ್ತಿದ್ದು, ಸುಳ್ಯ ಅಲ್ಪಸಂಖ್ಯಾತರ ವಿವಿಧೋದ್ಧೇಶ ಸಹಕಾರಿ ಸಂಘ ತನ್ನ ಕಾರ್ಯವ್ಯಾಪ್ತಿಯಲ್ಲಿ ಸಾಧಿಸಿರುವ ವಿಶಿಷ್ಟ ಸಾಧನೆಗೆ ಈ ಪ್ರಶಸ್ತಿ ಲಭಿಸಿದೆ. ಆ. 5 ರಂದು ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನ ಪ್ರಧಾನ ಕಚೇರಿಯಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ. ಸುಳ್ಯ ಅಲ್ಪಸಂಖ್ಯಾತರ ವಿವಿಧೋದ್ಧೇಶ ಸಹಕಾರಿ ಸಂಘದ ಅಧ್ಯಕ್ಷ ಇಕ್ಬಾಲ್ ಎಲಿಮಲೆ ಈ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ.

Sponsors

Related Articles

Back to top button