ಮಕ್ಕಳಲ್ಲಿರುವ ಸುಪ್ತ ಪ್ರತಿಭೆಗಳನ್ನು ಅರಳಿಸುವುದಕ್ಕೆ ಚಿಣ್ಣರ ಬೇಸಿಗೆ ಶಿಬಿರ ಸಹಕಾರಿ- ಮುಂಡಾಜೆಗುತ್ತು ನವೀನ್‍ಚಂದ್ರ ಶೆಟ್ಟಿ…
ಬಂಟ್ವಾಳ: ಮಕ್ಕಳಲ್ಲಿರುವ ಸುಪ್ತ ಪ್ರತಿಭೆಗಳನ್ನು ಅರಳಿಸುವುದಕ್ಕೆ ಚಿಣ್ಣರ ಬೇಸಿಗೆ ಶಿಬಿರ ಸಹಕಾರಿಯಾಗಿದೆ. ಸಮಯದ ಸದುಪಯೋಗವಾಗುವುದರೊಂದಿಗೆ ಜ್ಞಾನ ಹೆಚ್ಚಿಸಿಕೊಳ್ಳಲು ಅನುಕೂಲವಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ ಮುಂಡಾಜೆಗುತ್ತು ನವೀನ್‍ಚಂದ್ರ ಶೆಟ್ಟಿ ಹೇಳಿದರು.
ಅವರು ಕಳ್ಳಿಗೆಯಲ್ಲಿ ಏರ್ಪಡಿಸಲಾದ ಚಿಣ್ಣರ ಬೇಸಿಗೆ ಶಿಬಿರದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಹಿರಿಯ ಜೇಸಿಗಳಾದ ಜ್ಯೋತೀಂದ್ರ ಶೆಟ್ಟಿ ಮುಂಡಾಜೆ ಗುತ್ತು, ಸುಧೀರ್ ಶೆಟ್ಟಿ ಬಿ.ಸಿ.ರೋಡು, ಶಶಿಪ್ರಭ ಗುತ್ತಹಿತ್ತಿಲು , ಪಿ.ಎ.ರಹೀಂ ಬಿ.ಸಿ.ರೋಡು, ಹರಿಶ್ಚಂದ್ರ ಆಳ್ವ, ಸುಲೈಮಾನ್ ಸೂರಿಕುಮೇರು , ಅಕ್ಬರ್ ಆಲಿ, ಶುಭ ಆನಂದ ಬಂಜನ್ ಅತಿಥಿಗಳಾಗಿದ್ದರು.
ಬಂಟ್ವಾಳ ನೇತ್ರಾವತಿ ಸಂಗಮದ ಅಧ್ಯಕ್ಷ ಜಯಾನಂದ ಪೆರಾಜೆ ಅಧ್ಯಕ್ಷತೆ ವಹಿಸಿದ್ದರು. ಶ್ರೀ ಲಕ್ಷ್ಮೀವಿಷ್ಣು ಸೇವಾ ಸಂಘ ಕಳ್ಳಿಗೆಯ ಪ್ರಶಾಂತ್ ಸ್ವಾಗತಿಸಿ ವಂದಿಸಿದರು. ರಂಗ ಕಲಾವಿದ ಮೌನೇಶ್ ವಿಶ್ವಕರ್ಮ ಮತ್ತು ಡಾ. ವಾರಿಜ ನಿರ್ಬೈಲು ರಂಗಕಲೆಯ ತರಬೇತಿ ನೀಡಿದರು.