ಆದಿತ್ಯವಾರ – ದ.ಕ 229 , ಉಡುಪಿ 237 ಕೊರೊನ ಪಾಸಿಟಿವ್ ಪತ್ತೆ…

ಮಂಗಳೂರು: ಆದಿತ್ಯವಾರದ.ಕ ಜಿಲ್ಲೆಯಲ್ಲಿ 229 , ಉಡುಪಿ 237 ಕೊರೊನ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದೆ.

ದ.ಕ ಜಿಲ್ಲೆಯಲ್ಲಿ ಆದಿತ್ಯವಾರ 229 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 8878 ಕ್ಕೆ ಏರಿಕೆಯಾಗಿದೆ.ಇಂದು 7 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ಈ ಮೂಲಕ ಸಾವಿನ ಸಂಖ್ಯೆ 269 ಕ್ಕೆ ಏರಿಕೆಯಾಗಿದೆ. ಇಂದು 128 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. 2164 ಸಕ್ರಿಯ ಪ್ರಕರಣಗಳಿವೆ. 229 ಪ್ರಕರಣಗಳಲ್ಲಿ 122 ಪ್ರಕರಣ ಮಂಗಳೂರು, 36 ಪ್ರಕರಣ ಬಂಟ್ವಾಳ, 31 ಪುತ್ತೂರು, 8 ಬೆಳ್ತಂಗಡಿ , 17 ಪ್ರಕರಣಗಳು ಹಾಗೂ 1 ಪ್ರಕರಣ ಸುಳ್ಯ ದ್ದಾಗಿದೆ. ಇತರೆ ಜಿಲ್ಲೆಯ 31 ಮಂದಿಗೆ ಪಾಸಿಟಿವ್‌ ಆಗಿದೆ.

ಉಡುಪಿ ಜಿಲ್ಲೆಯಲ್ಲಿ ಆದಿತ್ಯವಾರ 237 ಮಂದಿಯಲ್ಲಿ ಕೊರೋನಾ ಪಾಸಿಟಿವ್ ದೃಢವಾಗಿದೆ. ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 7968 ಕ್ಕೆ ಏರಿಕೆಯಾಗಿದೆ. 107 ಮಂದಿಗೆ ಪ್ರಾಥಮಿಕ ಸಂಪರ್ಕದಿಂದ ಸೋಂಕು ತಗುಲಿದ್ದರೆ, 45 ಐಎಲ್‌ಐ, 1 ಸಾರಿ ಪ್ರಕರಣವಾಗಿದೆ. ಇನ್ನೂ 84 ಮಂದಿಯ ಸೋಂಕಿನ ಮೂಲ ಪತ್ತೆಯಾಗಬೇಕಿದೆ. ಇಂದು ತಾಲ್ಲೂಕಿನಲ್ಲಿ 122, ಕುಂದಾಪುರದಲ್ಲಿ 100, ಕಾರ್ಕಳ ತಾಲ್ಲೂಕಿನಲ್ಲಿ 14 ಪ್ರಕರಣ ಪತ್ತೆಯಾಗಿದೆ. ಇಂದು ಯಾವುದೇ ಕೊರೊನಾ ಸಾವು ಪ್ರಕರಣಗಳು ದಾಖಲಾಗಿಲ್ಲ.
ಕಾಸರಗೋಡು ಜಿಲ್ಲೆಯಲ್ಲಿ ಇಂದು 48 ಮಂದಿಯಲ್ಲಿ ಕೊರೋನಾ ಪಾಸಿಟಿವ್ ಪತ್ತೆಯಾಗಿದೆ.

Sponsors

Related Articles

Leave a Reply

Your email address will not be published. Required fields are marked *

Back to top button