ಆದಿತ್ಯವಾರ – ದ.ಕ 334 , ಉಡುಪಿ 254 ಹಾಗೂ ರಾಜ್ಯದಲ್ಲಿ 8852 ಕೊರೊನ ಪಾಸಿಟಿವ್ ಪತ್ತೆ…

ಮಂಗಳೂರು: ಇಂದು (ಆದಿತ್ಯವಾರ) ದ.ಕ ಜಿಲ್ಲೆಯಲ್ಲಿ 334 , ಉಡುಪಿ 254 ಕೊರೊನ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದೆ.

ದ.ಕ ಜಿಲ್ಲೆಯಲ್ಲಿ ಇಂದು 334 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 12443 ಕ್ಕೆ ಏರಿಕೆಯಾಗಿದೆ.ಇಂದು 6 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ಈ ಮೂಲಕ ಸಾವಿನ ಸಂಖ್ಯೆ 356 ಕ್ಕೆ ಏರಿಕೆಯಾಗಿದೆ. ಇಂದು 213 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. 2665 ಸಕ್ರಿಯ ಪ್ರಕರಣಗಳಿವೆ. 334 ಪ್ರಕರಣಗಳ ಪೈಕಿ 191 ಪ್ರಕರಣಗಳು ಮಂಗಳೂರಿನಿಂದ, 78 ಪ್ರಕರಣಗಳು ಬಂಟ್ವಾಳದಿಂದ, 20 ಪ್ರಕರಣಗಳು ಪುತ್ತೂರಿನಿಂದ, 6 ಪ್ರಕರಣಗಳು ಸುಳ್ಯದಿಂದ , 20 ಪ್ರಕರಣಗಳು ಬೆಳ್ತಂಗಡಿಯಿಂದ ಹಾಗೂ 19 ಪ್ರಕರಣಗಳು ಬೇರೆ ಜಿಲ್ಲೆಯವರದ್ದಾಗಿದೆ.

ಉಡುಪಿ ಜಿಲ್ಲೆಯಲ್ಲಿ ಇಂದು 254 ಮಂದಿಯಲ್ಲಿ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಒಟ್ಟು ಸೋಂಕಿತರ ಸಂಖ್ಯೆ 11513ಕ್ಕೆ ಏರಿಕೆಯಾಗಿದೆ. ಜಿಲ್ಲೆಯಲ್ಲಿ 2620 ಸಕ್ರಿಯ ಪ್ರಕರಣಗಳಿವೆ.

ರಾಜ್ಯದಲ್ಲಿ ಇಂದು 8852 ಕೊರೋನಾ ಪ್ರಕರಣಗಳು ಪತ್ತೆಯಾಗಿದ್ದು, ಇದರಿಂದ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 3,35,928ಕ್ಕೇರಿಕೆಯಾಗಿದೆ.ಇಂದು 106 ಮಂದಿ ಮಹಾಮಾರಿಗೆ ಬಲಿಯಾಗಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 5,589ಕ್ಕೆ ಏರಿಕೆಯಾಗಿದೆ.ರಾಜ್ಯದಲ್ಲಿ ಇಂದು 7,101 ಮಂದಿ ಗುಣಮುಖರಾಗಿದ್ದಾರೆ. ಒಟ್ಟು 2,42,229 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಿದ್ಧಾರೆ. 88,091 ಮಂದಿ ನಿಗದಿತ ಕೊವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Sponsors

Related Articles

Leave a Reply

Your email address will not be published. Required fields are marked *

Back to top button