ಆದಿತ್ಯವಾರ – ದ.ಕ 404 , ಉಡುಪಿ 126 ಕೊರೊನ ಪಾಸಿಟಿವ್ ಪತ್ತೆ…

ಮಂಗಳೂರು: ಇಂದು (ಆದಿತ್ಯವಾರ ) ದ.ಕ ಜಿಲ್ಲೆಯಲ್ಲಿ 404 , ಉಡುಪಿ 126 ಕೊರೊನ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದೆ.

ದ.ಕ ಜಿಲ್ಲೆಯಲ್ಲಿ ಇಂದು 404 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 17363 ಕ್ಕೆ ಏರಿಕೆಯಾಗಿದೆ. ಇಂದು 3 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ಜಿಲ್ಲೆಯಲ್ಲಿ ಕೊರೋನಾ ಸೋಂಕಿಗೆ ಒಟ್ಟು 442 ಮಂದಿ ಬಲಿಯಾಗಿದ್ದಾರೆ.ಇಂದು 174 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. 3934 ಸಕ್ರಿಯ ಪ್ರಕರಣಗಳಿವೆ. 404 ಪ್ರಕರಣಗಳ ಪೈಕಿ 212 ಪ್ರಕರಣಗಳು ಮಂಗಳೂರಿನಿಂದ, 60 ಪ್ರಕರಣಗಳು ಬಂಟ್ವಾಳದಿಂದ, 46 ಪ್ರಕರಣಗಳು ಪುತ್ತೂರಿನಿಂದ, 27 ಪ್ರಕರಣಗಳು ಸುಳ್ಯದಿಂದ , 39 ಪ್ರಕರಣಗಳು ಬೆಳ್ತಂಗಡಿಯಿಂದ ಹಾಗೂ 20 ಪ್ರಕರಣಗಳು ಬೇರೆ ಜಿಲ್ಲೆಯವರದ್ದಾಗಿದೆ.

ಉಡುಪಿ ಜಿಲ್ಲೆಯಲ್ಲಿ ಇಂದು 126 ಮಂದಿಯಲ್ಲಿ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಒಟ್ಟು ಸೋಂಕಿತರ ಸಂಖ್ಯೆ 14038ಕ್ಕೆ ಏರಿಕೆಯಾಗಿದೆ. ಜಿಲ್ಲೆಯಲ್ಲಿ 1732 ಸಕ್ರಿಯ ಪ್ರಕರಣಗಳಿವೆ.

Sponsors

Related Articles

Leave a Reply

Your email address will not be published. Required fields are marked *

Back to top button