ಸುದ್ದಿ

ಭಾನುವಾರ- ದ.ಕ 97 ,ಉಡುಪಿ 40 ಹಾಗೂ ರಾಜ್ಯದಲ್ಲಿ 1267 ಕೊರೊನ ಪಾಸಿಟಿವ್ ಪತ್ತೆ…

ಮಂಗಳೂರು: ಇಂದು(ಭಾನುವಾರ) ದ.ಕ ಜಿಲ್ಲೆಯಲ್ಲಿ 97 ,ಉಡುಪಿ ಜಿಲ್ಲೆಯಲ್ಲಿ 40 ಹಾಗೂ ರಾಜ್ಯದಲ್ಲಿ 1267 ಕೊರೊನ ಪಾಸಿಟಿವ್ ಪತ್ತೆಯಾಗಿದೆ.
ದ.ಕ ಜಿಲ್ಲೆಯಲ್ಲಿ ಭಾನುವಾರ ಮೂವರು ಕೊರೊನಾ ಸೋಂಕಿನಿಂದಾಗಿ ಮೃತಪಟ್ಟಿದ್ದಾರೆ. ಆ ಮೂಲಕ ಜಿಲ್ಲೆಯಲ್ಲಿ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 13ಕ್ಕೆ ಏರಿಕೆಯಾಗಿದೆ.
ಉಡುಪಿ ಜಿಲ್ಲೆಯಲ್ಲಿ 18 ಮಂದಿ ಪುರುಷರಲ್ಲಿ, 15 ಮಂದಿ ಮಹಿಳೆಯರು ಹಾಗೂ 6 ಮಂದಿ ಮಕ್ಕಳಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ.15 ಮಂದಿ ಮಹಾರಾಷ್ಟ್ರದಿಂದ, ಇಬ್ಬರು ಬೆಂಗಳೂರಿನಿಂದ ಆಗಮಿಸಿದವರಲ್ಲಿ ಸೋಂಕು ದೃಢಪಟ್ಟಿದೆ. ಇನ್ನುಳಿದಂತೆ ವೈದ್ಯರು ಸೇರಿ 6 ಮಂದಿ ಕೊರೊನಾ ವಾರಿಯರ್ಸ್‌ಗೆ ಸೋಂಕು ದೃಢಪಟ್ಟಿದೆ.
ಇನ್ನು ರಾಜ್ಯದಲ್ಲಿ ಇಂದು 1267 ಪ್ರಕರಣಗಳು ವರದಿಯಾಗಿದ್ದು, 16 ಮಂದಿ ಮೃತಪಟ್ಟಿದ್ದಾರೆ. ಬೆಂಗಳೂರು ನಗರದಲ್ಲಿ 783, ದಕ್ಷಿಣ ಕನ್ನಡದಲ್ಲಿ 97, ಬಳ್ಳಾರಿಯಲ್ಲಿ 71, ಉಡುಪಿಯಲ್ಲಿ 40, ಕಲಬುರಗಿಯಲ್ಲಿ 34, ಹಾಸನದಲ್ಲಿ 31, ಗದಗದಲ್ಲಿ 30, ಬೆಂಗಳೂರು ಗ್ರಾಮಾಂತರದಲ್ಲಿ 27, ಧಾರವಾಡದಲ್ಲಿ 18, ಮೈಸೂರಿನಲ್ಲಿ 18, ಬಾಗಲಕೋಟೆಯಲ್ಲಿ 17, ಉತ್ತರ ಕನ್ನಡದಲ್ಲಿ 14, ಹಾವೇರಿಯಲ್ಲಿ 12, ಕೋಲಾರದಲ್ಲಿ 11, ಬೆಳಗಾವಿಯಲ್ಲಿ 8, ಬೀದರ್ ಮತ್ತು ಚಿತ್ರದುರ್ಗದಲ್ಲಿ ತಲಾ 7, ರಾಯಚೂರು, ಮಂಡ್ಯ, ದಾವಣಗೆರೆಯಲ್ಲಿ ತಲಾ 6, ವಿಜಯಪುರದಲ್ಲಿ ತಲಾ 5, ಶಿವಮೊಗ್ಗದಲ್ಲಿ 4, ಚಿಕ್ಕಬಳ್ಳಾಪುರ, ಕೊಪ್ಪಳ, ಚಿಕ್ಕಮಗಳೂರು, ಕೊಡಗಿನಲ್ಲಿ ತಲಾ 2, ತುಮಕೂರಿನಲ್ಲಿ 2, ಯಾದಗಿರಿಯಲ್ಲಿ 1 ಪ್ರಕರಣ ವರದಿಯಾಗಿವೆ.

Related Articles

Leave a Reply

Your email address will not be published.

Back to top button