ಟಿ.ಎಂ. ಶಹೀದ್ ತೆಕ್ಕಿಲ್ ಹುಟ್ಟು ಹಬ್ಬದ ಪ್ರಯುಕ್ತ ಬಡಮಹಿಳೆಯರ ವಿವಾಹಕ್ಕೆ ಧನ ಸಹಾಯ ವಿತರಣೆ…

ಸುಳ್ಯ : ಅರಂತೋಡು ತೆಕ್ಕಿಲ್ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನ (ರಿ) ಇದರ ಸ್ಥಾಪಕಾಧ್ಯಕ್ಷರಾದ ಟಿ. ಎಂ. ಶಹೀದ್ ತೆಕ್ಕಿಲ್ ರವರ 50 ನೇ ಹುಟ್ಟುಹಬ್ಬದ ಸುವರ್ಣ ಸಂಭ್ರಮದ ವರ್ಷಾಚಾರಣೆಯ ಪ್ರಯುಕ್ತ ಗೂನಡ್ಕದ ಮರಿಯಮ್ಮ ದರ್ಖಾಸ್ತು ಇವರ ಮೊಮ್ಮಗಳ ವಿವಾಹ ಕಾರ್ಯಕ್ರಮಕ್ಕೆ ರೂ.5,೦೦೦ , ಉಮ್ಮರ್ ಗುಂಡಿಮನೆ ಕಟ್ಟತ್ತಾರು ಇವರ ಮಗಳ ಮದುವೆಗೆ ರೂ. 5,000 ಹಾಗೂ ಹಸೈನಾರ್ ಜಯನಗರ ಸುಳ್ಯ ಇವರ ಮಗಳ ವಿವಾಹಕ್ಕೆ 5,000 ರೂಪಾಯಿಯ ಸಹಾಯಧನವನ್ನು ತೆಕ್ಕಿಲ್ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನ (ರಿ) ಅರಂತೋಡು ವತಿಯಿಂದ ಅ.22 ರಂದು ಸಂಸ್ಥೆಯ ಕಛೇರಿಯಲ್ಲಿ ಪ್ರತಿಷ್ಠಾನದ ಕಾರ್ಯದರ್ಶಿ ಅಶ್ರಫ್ ಗುಂಡಿ ವಿತರಿಸಿದರು.

Sponsors

Related Articles

Back to top button