ತಿರುವನoತಪುರದಲ್ಲಿ ದ್ವಿ ದಿನಗಳ ತ್ರಿರಾಜ್ಯ ಸಂತ ಸಮ್ಮೇಳನ…

ಸರ್ವ ಧರ್ಮೀಯ ಸೌಹಾರ್ದತೆಗೆ ತ್ರಿರಾಜ್ಯ ಸಂತ ಸಮ್ಮೇಳನ ನಿರ್ಣಯ ಕೈಗೊಳ್ಳಬೇಕು- ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಆಶಯ...

ತಿರುವನಂತಪುರ: ದೇಗುಲಗಳ ನಗರ ಕೇರಳ ರಾಜ್ಯ ರಾಜಧಾನಿ ತಿರುವನoತಪುರದಲ್ಲಿ ಮೇ.14 ರಂದು ದ್ವಿ ದಿನಗಳ ತ್ರಿರಾಜ್ಯ ಸಂತ ಸಮ್ಮೇಳನ ರಾಮದಾಸ ಆಶ್ರಮದ ಸಭಾ ಮಂಟಪ ದಲ್ಲಿ ಆರಂಭ ಗೊಂಡಿತು.
ವಿವಿಧ ಸಂತರು ಭಾಗವಹಿಸಿದ ಕಾರ್ಯಕ್ರಮದಲ್ಲಿ ಉದ್ಘಾಟನೆಯನ್ನು ಅಯೋಧ್ಯಾ ಮಂದಿರ ಟ್ರಸ್ಟ್ ಕಾರ್ಯಾಧ್ಯಕ್ಷ ಕಮಲ ನಯನದಾಸ್ ನೆರವೇರಿಸಿದರು.
ಜಗದ್ಗುರು ಡಾ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಶ್ರೀ ಜೈನ ಮಠ ಮೂಡುಬಿದಿರೆ, ಜೇತೇಂದ್ರ ನಂದ ಸರಸ್ವತಿ ಆಚಾರ್ಯ ಧರ್ಮದೇವ ಹರ್ಯಾಣ, ಅಶೋಕ್ ತಿವಾರಿ ವಿ.ಹಿo.ಪ ರಾಷ್ಟ್ರೀಯ ಕಾರ್ಯದರ್ಶಿ, ಸ್ವಾಮಿ ಶ್ರದ್ದಾನಂದ ಸರಸ್ವತಿ ಒರಿಸ್ಸಾ
ಉಪಸ್ಥಿತರಿದ್ದರು.
ಉದ್ಘಾಟನಾ ಕಾರ್ಯಕ್ರಮ ದಲ್ಲಿ ಆಶೀರ್ವಾದ ಮಾಡಿದ ಮೂಡುಬಿದಿರೆ ಶ್ರೀ ಗಳವರು ಹಿಂದೂ ಜೈನ ಕ್ಷೇತ್ರ ಗಳ ರಕ್ಷಣೆ, ಸಾಧು ಸಂತರ ರಕ್ಷಣೆ,ಜೈನ ತೀರ್ಥ ಗಿರೀನಾರ್, ಸಮ್ಮೇದ ಗಿರಿ ಕ್ಷೇತ್ರ ಗಳ ರಕ್ಷಣೆ, ಹಿಂದೂ -ಜೈನ ಕ್ಷೇತ್ರ ಗಳಲ್ಲಿ ಸರಕಾರ ದ ಹಸ್ತ ಕ್ಷೇಪ ಇರಬಾರದು. ಕೈಲಾಸ ಪರ್ವತ ಭಾರತೀಯರ ಪವಿತ್ರ ಸಿದ್ದ ಕ್ಷೇತ್ರ ಭಾರತೀಯರಿಗೆ ಸಿಗಲು ಅಂತರಾಷ್ಟ್ರೀಯ ಯು ಏನ್ ಓ ದಂತ ವೇದಿಕೆಗಳಲ್ಲಿ ಗಮನ ಸೆಳೆಯುವ ಕಾರ್ಯ ಭಾರತ ಸರಕಾರ ಮಾಡುವಂತೆ ಮನವಿ ಮಾಡಿದರು. ವಿವಿಧ ನಂಬಿಕೆ, ಪೂಜೆ ಸಂಪ್ರದಾಯ ಗಳಲ್ಲಿ ಐಕ್ಯತೆ, ಭಾರತೀಯ ಸಂಸ್ಕೃತಿ ನಂಬಿಕೆ ಉಳ್ಳ ಸರ್ವ ಧರ್ಮೀಯ ಸೌಹಾರ್ದತೆಗೆ ತ್ರಿರಾಜ್ಯ ಸಂತ ಸಮ್ಮೇಳನ ನಿರ್ಣಯ ಕೈಗೊಳ್ಳಬೇಕು ಎಂಬ ಆಶಯ ವ್ಯೆಕ್ತ ಪಡಿಸಿದರು.
ಶ್ರೀ ಶಕ್ತಿ ಸದಾನಂದ ಮಹರ್ಷಿ ರಾಷ್ಟ್ರೀಯ ಕಾರ್ಯದರ್ಶಿ ರಾಮದಾಸ ಆಶ್ರಯ ತಿರುವನಂತಪುರ ಕಾರ್ಯಕ್ರಮ ಆಯೋಜಿಸಿದ್ದರು.ನಂತರ ನಡೆದ ಇಡೀ ದಿನದ ವಿವಿಧ ಬೈಠಕ್ ಗಳಲ್ಲಿ ವಿವಿಧ ವಿಷಯಗಳ ಬಗ್ಗೆ ಚರ್ಚೆ ನಡೆಯಿತು
ಧರ್ಮೋ ರಕ್ಷತಿ ರಕ್ಷಿತಃ ಅದರ ಬಗ್ಗೆ ಇರುವ ತಪ್ಪು ತಿಳಿವಳಿಕೆಯನ್ನು ನಿವಾರಿಸಬೇಕಾದುದು ಅತ್ಯಗತ್ಯ. ‘ಧಾರಣಾದ್ಧರ್ಮ ಇತ್ಯಾಹುಃ’ ಎಂಬ ಮಾತಿನಲ್ಲಿ ಧರ್ಮ ಎಂದರೆ ಬಿದ್ದವರನ್ನು, ಬೀಳುತ್ತಿರುವವರನ್ನು ಎತ್ತಿ ಹಿಡಿಯುವುದು ಅಥವಾ ಅವರನ್ನು ರಕ್ಷಿಸುವುದು ಎಂಬರ್ಥವಿದೆ. ಪರಸ್ಪರ ಪ್ರೀತಿ ವಿಶ್ವಾಸ ಹೊಂದಿರುವುದು, ತ್ಯಾಗ, ಕರುಣೆ, ಅಹಿಂಸೆ, ಸತ್ಯ ಮತ್ತು ಸದಾಚಾರಗಳು ಭಾರತಿ ಯ ಧರ್ಮ ಗಳುಅನುಸರಿಸಲು ಬೋಧಿಸಿವೆ ಭಾರತೀಯ ಪರಂಪರೆಯಲ್ಲಿ ವಿವಿಧ ಧರ್ಮಗಳಲ್ಲಿ ಏಕತೆ ಮತ್ತು ಸಮಗ್ರತೆ ಮೂಡಿಬಂದಿರುವುದನ್ನು ಕಾಣಬಹುದು.
ಧರ್ಮವು ಸಾಮಾಜಿಕ ಅಗತ್ಯಗಳಲ್ಲೊಂದು. ಸಮಾಜವನ್ನು ಸುಸ್ಥಿತಿಯಲ್ಲಿಡುವ ಈ ಧರ್ಮವು ವ್ಯಕ್ತಿ ಮತ್ತು ಸಮಾಜವನ್ನು ಎತ್ತಿ ಹಿಡಿಯುವ ಗುಣವುಳ್ಳದ್ದಾಗಿದೆ. ಧರ್ಮದಿಂದ ಮನುಷ್ಯನಿಗೆ ಸಿರಿ-ಸಂಪತ್ತು, ಸುಖ-ಶಾಂತಿ ಮತ್ತು ಸಕಲ ಇಷ್ಟಾರ್ಥಗಳು ಸಿದ್ಧಿಸುತ್ತವೆ. ಶ್ರೇಷ್ಠ ಧ್ಯೇಯಗಳನ್ನು ಈಡೇರಿಸಿಕೊಳ್ಳಲು ಸಹಕಾರಿಯಾಗಿರುವುದೇ ಧರ್ಮ. ಭಾರತೀಯ ದರ್ಶನಗಳಲ್ಲಿ ಪ್ರತಿಪಾದಿತವಾದ ವ್ಯಕ್ತಿಯ ಅಂತಿಮ ಗುರಿಯಾದ ಮೋಕ್ಷ ಸಾಧನೆಯೂ ಕೂಡ ಧರ್ಮದಿಂದಲೇ ಮೊದಲಾಗಬೇಕು. ಪುರುಷಾರ್ಥ ಚತುಷ್ಟಯಗಳಲ್ಲಿ ಧರ್ಮಕ್ಕೆ ಅಗ್ರಸ್ಥಾನ. ನಂತರದ ಅರ್ಥ, ಕಾಮ ಮತ್ತು ಮೋಕ್ಷಗಳ ಸಂಪಾದನೆ ಧರ್ಮಮಾರ್ಗದಲ್ಲಿಯೇ ಸಾಗಬೇಕೆಂಬುದು ಇದರರ್ಥ.
ಧರ್ಮಶಾಸ್ತ್ರಗಳಲ್ಲಿ ಧರ್ಮವು ಮನುಷ್ಯನ ಸ್ವಭಾವ ವಸ್ತು ಸ್ವಭಾವ ಧರ್ಮ ಎಂದು ಹೇಳಲಾಗಿದೆ. ಧರ್ಮವಿಲ್ಲದೆ ಮನುಷ್ಯ ಬದುಕಲಾರ. ಶ್ವಾಸೋಚ್ಛ್ವಾಸ ಮನುಷ್ಯನ ಸ್ವಾಭಾವಿಕ ಕ್ರಿಯೆಯಾಗಿರುವಂತೆ ಧರ್ಮವೂ ಕೂಡ ಸ್ವಾಭಾವಿಕ ಕ್ರಿಯೆ. ಧರ್ಮವಿಲ್ಲದೆ ಮನುಷ್ಯನು ಮನುಷ್ಯನಂತೆ ವರ್ತಿಸಲಾರ. ಧರ್ಮದ ಅರಿವಿನಿಂದಲೇ ಮನುಷ್ಯನು ಭೂತವನ್ನು ವರ್ತಮಾನದಲ್ಲಿ ಪುನರ್ಜೀವಿತಗೊಳಿಸಿ ಭವಿಷ್ಯವನ್ನು ನಿರ್ಮಿಸಲು ಸಾಧ್ಯ. ಆದ್ದರಿಂದ ಧರ್ಮವು ಸದಾ ಮಾನವ ಬದುಕಿಗೆ ದಾರಿದೀಪವಾಗಿದೆ.
ಧರ್ಮ ಎಂದರೆ ಮೂಢಾಚರಣೆಗಳಲ್ಲ. ಸತ್ಯ, ಅಹಿಂಸೆ, ಕರುಣೆ, ಶೀಲ, ಚಾರಿತ್ರ್ಯಗಳಿಂದ ಕೂಡಿದ ನೈತಿಕ ಆಚರಣೆಗಳು. ಈ ಆಚರಣೆಗಳೇ ಧರ್ಮದ ತಳಹದಿ. ದಯವೇ ಧರ್ಮದ ಮೂಲ ಅಹಿಂಸಾ ಪರಮೋ ಧರ್ಮಃ ಇತ್ಯಾದಿ ವಾಕ್ಯಗಳಿಂದ ಧರ್ಮವನ್ನು ವ್ಯಾಖ್ಯಾನಿಸಲಾಗಿದೆ. ಸಹಬಾಳ್ವೆಯನ್ನು ಬೋಧಿಸುವುದೇ ಧರ್ಮವಾಗಿದೆ. ಇಂತಹ ಮಾನವೀಯ ಮೌಲ್ಯಗಳಿಂದ ಕೂಡಿದ ಧರ್ಮವನ್ನು ಮೀರಿ ಯಾರೂ ನಡೆಯಬಾರದು. ಮೀರಿದರೆ ಹಾನಿ ತಪ್ಪಿದ್ದಲ್ಲ. ಧರ್ಮದ ಆಚರಣೆಗಳನ್ನು ಪಾಲಿಸಿದರೆ ಧರ್ಮವು ನಮ್ಮನ್ನು ನಿಶ್ಚಿತವಾಗಿಯೂ ಸಂರಕ್ಷಿಸುತ್ತದೆ. ಎಂಬ ಅಭಿಪ್ರಾಯ ಗಳನ್ನು ಅನುಮೋದಿಸಿ ವ್ಯಾಪಕ ಪ್ರಚಾರ ನಡೆಸುವ ಧರ್ಮ ಚರ್ಚೆ ತತ್ವ ಅನುಸoದಾನ ಮೂರು ರಾಜ್ಯ ಗಳ 125 ಕ್ಕೂ ಮಿಕ್ಕಿದ ವಿವಿಧ ಭಾರತೀಯ ಸಂಸ್ಕೃತಿ ಅನುಸರಿಸುವ ಹಿಂದೂ, ಜೈನ ಸಾಧು ಸಂತರ ಎರಡು ದಿನಗಳ ಕಾರ್ಯಕ್ರಮ ಸಂಪನ್ನಗೊಂಡಿತು.

Sponsors

Related Articles

Back to top button