ಸುಳ್ಯದಲ್ಲಿ ಶತಕ ದಾಟಿದ ಇಂಧನ ಬೆಲೆ – ಬೋರ್ಡ್ ನಲ್ಲಿ ದರ ಪ್ರಕಟಿಸಲು ಅವಕಾಶವಿಲ್ಲ…
ಸುಳ್ಯ: ಸುಳ್ಯದಲ್ಲೂ ಪೆಟ್ರೋಲ್ ಬೆಲೆ ರೂ.100 ಕ್ಕಿಂತಲೂ ಏರಿಕೆಯಾಗಿ ಕೇಂದ್ರ ಸರಕಾರ ನಮ್ಮೂರಲ್ಲೂ ಶತಕ ಬಾರಿಸಿದೆ. ಇದರ ಜೊತೆಗೆ ಒಂದು ವಿಶೇಷತೆ ಕೂಡಾ ನಡೆದು ಬಿಟ್ಟಿದೆ. ಪೆಟ್ರೋಲ್ ಬಂಕ್ ಎದುರು ಪೆಟ್ರೊಲ್ ಕಂಪೆನಿಗಳ ಬೃಹದಾಕಾರದ ಬೋರ್ಡ್ ಇರುತ್ತದೆ .ಅದರಲ್ಲಿ ಪ್ರತಿನಿತ್ಯ ತೈಲ ಬೆಲೆಯನ್ನು ಪ್ರಕಟಿಸುತ್ತಾರೆ. ಆದರೆ ಪೆಟ್ರೊಲ್ ದರ ರೂ.100 ದಾಟಿದ ಮೇಲೆ ಬೋರ್ಡ್ ಮೇಲೆ ದರವನ್ನು ಸುಳ್ಯದ ಯಾವ ಪೆಟ್ರೊಲ್ ಬಂಕ್ ಗಳಲ್ಲಿ ಹಾಕಲು ಸಾಧ್ಯವಾಗುತ್ತಿಲ್ಲ.ಬೋರ್ಡ್ ನಲ್ಲಿ 99 .99 ತನಕದ ಸಂಖೆಯನ್ನು ಮಾತ್ರ ದಾಖಲಿಸಲು ಅವಕಾಶ ಇದೆ ಹೊರತು ಅದಕ್ಕಿಂತ ಹೆಚ್ಚಿನ ಅಂದರೆ ಮೂರು ಅಂಕೆಯ ಸಂಖ್ಯೆಯನ್ನು ದಾಖಲಿಸಲು ಸಾಧ್ಯವಾಗುವುದಿಲ್ಲ. ಇದಕ್ಕೆಲ್ಲ ಕೇಂದ್ರ ಸರಕಾರದ ಬೆಲೆ ಏರಿಕೆಯೇ ಕಾರಣ ಎಂದು ಕೆಪಿಸಿಸಿ ಮಾಜಿ ಕಾರ್ಯದರ್ಶಿ ಎಂ. ವೆಂಕಪ್ಪ ಗೌಡ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.