ಗುರುವಾರ – ದ.ಕ 167 ,ಉಡುಪಿ 22 ಹಾಗೂ ರಾಜ್ಯದಲ್ಲಿ 2282 ಕೊರೊನ ಸೋಂಕು ಪತ್ತೆ…

ಮಂಗಳೂರು: ಇಂದು(ಗುರುವಾರ) ದ.ಕ ಜಿಲ್ಲೆಯಲ್ಲಿ 167 ,ಉಡುಪಿ ಜಿಲ್ಲೆಯಲ್ಲಿ 22 ಹಾಗೂ ರಾಜ್ಯದಲ್ಲಿ 2282 ಕೊರೊನ ಸೋಂಕು ಪತ್ತೆಯಾಗಿದೆ.
ದ.ಕ ಜಿಲ್ಲೆಯಲ್ಲಿ ಪ್ರಾಥಮಿಕ ಸಂಪರ್ಕದಿಂದ 64 ಮಂದಿಯಲ್ಲಿ ಸೋಂಕು ಕಂಡುಬಂದಿದೆ. 42 ಮಂದಿಯಲ್ಲಿ ILI , 6 ಮಂದಿಯಲ್ಲಿ SARI ಪ್ರಕರಣ ಪತ್ತೆಯಾಗಿದೆ. ಕತಾರ್, ದುಬೈಯಿಂದ ಮರಳಿದ ಮೂವರಲ್ಲಿ , ಬೆಂಗಳೂರಿನಿಂದ ಮರಳಿದ ಒಬ್ಬರಲ್ಲಿ ಸೋಂಕು ಪತ್ತೆಯಾಗಿದೆ. ಪ್ರೀಸರ್ಜರಿ ಸ್ಯಾಂಪಲ್ ಪಾಸಿಟಿವ್ 13 ಮಂದಿಯಲ್ಲಿ ದೃಢಪಟ್ಟಿದೆ. 38 ಸೋಂಕಿತರ ಮೂಲ ಇನ್ನು ಪತ್ತೆ ಹಚ್ಚಬೇಕಾಗಿದೆ.
ಉಡುಪಿ ಜಿಲ್ಲೆಯಲ್ಲಿ ಇಂದು 22 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. 28 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.
ಇನ್ನು ಇಂದು ಬೆಂಗಳೂರು ನಗರದಲ್ಲಿ ಅತಿ ಹೆಚ್ಚು ಅಂದರೆ 1373 ಪ್ರಕರಣಗಳು ಸೇರಿದಂತೆ ರಾಜ್ಯದಲ್ಲಿ ಒಟ್ಟು 2282 ಮಂದಿಗೆ ಪಾಸಿಟಿವ್ ದೃಢಪಟ್ಟಿದೆ. ಇದರೊಂದಿಗೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 31, 159ಕ್ಕೆ ಏರಿಕೆಯಾಗಿದೆ. ಇಂದು ಒಂದೇ ದಿನ 957 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.ಕೊರೋನಾ ವೈರಸ್ ನಿಂದಾಗಿ ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ ಒಟ್ಟು 17 ಮಂದಿ ಸಾವನ್ನಪ್ಪಿದ್ದಾರೆ.

Sponsors

Related Articles

Leave a Reply

Your email address will not be published. Required fields are marked *

Back to top button