ಸುದ್ದಿ

ಅರಂತೋಡು ಅಂಗನವಾಡಿಯಲ್ಲಿ ಟಿ.ಎಂ.ಶಹೀದ್ ತೆಕ್ಕಿಲ್ ರವರ 51ನೇ ಹುಟ್ಟುಹಬ್ಬ ಆಚರಣೆ…

ಸುಳ್ಯ: ಟಿ.ಎಂ.ಶಹೀದ್ ತೆಕ್ಕಿಲ್ ರವರ 51 ನೇ ಹುಟ್ಟುಹಬ್ಬವನ್ನು ಜ. 21 ರಂದು ರಂದು ಕೋವಿಡ್-19 ರ 3ನೇಅಲೆ ವ್ಯಾಪಕವಾಗಿ ಇರುವುದರಿಂದ ಟಿ.ಎಂ.ಶಹೀದ್ ತೆಕ್ಕಿಲ್ ಸುವರ್ಣ ಸಂಭ್ರಮ ಅಭಿನಂದನಾ ಸಮಿತಿ ವತಿಯಿಂದ ಅರಂತೋಡು ಅಂಗನವಾಡಿಯಲ್ಲಿ ಮಕ್ಕಳಿಗೆ ಸಿಹಿತಿಂಡಿಯನ್ನು ಹಂಚುವ ಮೂಲಕ ಸರಳವಾಗಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಅಭಿನಂದನಾ ಸಮಿತಿಯ ಸಂಚಾಲಕ ಅಶ್ರಫ್ ಗುಂಡಿ, ಕೋಶಾಧಿಕಾರಿ ಎಸ್.ಎಮ್. ಅಬ್ದುಲ್ ಮಜೀದ್, ಗುತ್ತಿಗೆದಾರ ಹನೀಫ್, ಮಾಜಿ ಗ್ರಾಮ ಪಂಚಾಯತ್ ಸದಸ್ಯ ಇದ್ದೀನ್ ಕುಂಞ, ಸಾಲಿ ಅರಂತೋಡು, ಮಹಮ್ಮದ್ ಅರಂತೋಡು, ಅಂಗನವಾಡಿ ಸಿಬ್ಬಂಧಿಗಳು ಉಪಸ್ಥಿತರಿದ್ದರು.

Related Articles

Back to top button