ಜ.13ರಂದು ಸುಳ್ಯ ರೋಟರಿ ಸಮುದಾಯ ಭವನದ ಮೇಲ್ಚಾವಣಿ ಉದ್ಘಾಟನೆ…

ಸುಳ್ಯ: ರೋಟರಿ ಕ್ಲಬ್‌ ಸುಳ್ಯ, ರೋಟರಿ ಚಾರಿಟೇಬಲ್‌ ಟ್ರಸ್ಟ್‌ ಸುಳ್ಯ ಇದರ 2023-24 ನೇ ಸಾಲಿನ ಸೇವಾ ಯೋಜನೆಯಡಿಯಲ್ಲಿ ನಿರ್ಮಾಣಗೊಂಡ ರೋಟರಿ ಸಮುದಾಯ ಭವನದ ಮೇಲ್ಚಾವಣಿ ಯ ಉದ್ಭಾಟನೆ ಜ.13ರಂದು ನಡೆಯಲಿದೆ ಎಂದು ಯೋಜನಾ ಸಮಿತಿ ಅಧ್ಯಕ್ಷರಾದ ಸಹಕಾರ ರತ್ನ ರೊ.ಸೀತಾರಾಮ ರೈ ಸವಣೂರು ಹೇಳಿದರು.
ಜ.4ರಂದು ಸುಳ್ಯ ಪ್ರೆಸ್‌ ಕ್ಲಬ್‌ ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, ರೋಟರಿ ಸಮುದಾಯ ಭವನದ ಮೇಲ್ಚಾವಣಿ ಮತ್ತು ಸಭಾಭವನವನ್ನು ರೋಟರಿ ಜಿಲ್ಲಾ ಗವರ್ನರ್‌ ಹೆಚ್‌.ಆರ್‌.ಕೇಶವ ಉದ್ಭಾಟಿಸಲಿದ್ದಾರೆ. ರೋಟರಿ ಜಿಲ್ಲಾ ಯೋಜನೆಯಡಿ ಸುಳ್ಯ ಆಸುಪಾಸಿನ 10 ಅಂಗನವಾಡಿ ಕೇಂದ್ರಗಳಿಗೆ ಚಪ್ಪಲ್‌ ಸ್ಟ್ಯಾಂಡ್‌ ವಿತರಣೆ ನಡೆಯುವುದು. ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಸುಳ್ಯ ಎ.ಒ.ಎಲ್‌.ಇ. ಅಧ್ಯಕ್ಷ ಡಾ.ಕೆ.ವಿ.ಚಿದಾನಂದ, ಶಾಸಕಿ ಭಾಗೀರಥಿ ಮುರುಳ್ಯ, ರೋಟರಿ ಚಾರಿಟೇಬಲ್‌ ಟ್ರಸ್ಟ್‌ ಕಾರ್ಯದರ್ಶಿ ಗಿರಿಜಾಶಂಕರ್‌ ತುದಿಯಡ್ಕ ಭಾಗವಹಿಸಲಿದ್ದಾರೆ. ರೋಟರಿ ಕ್ಲಬ್‌ ಸುಳ್ಯ ಸಿ.ಟಿ. ಹಾಗೂ ಇನ್ನರ್‌ ವ್ಹೀಲ್‌ ಕ್ಲಬ್‌ ನವರು ಸಹಯೋಗದೊಂದಿಗೆ ಕಾರ್ಯಕ್ರಮ ನಡೆಯುವುದು ಎಂದವರು ವಿವರ ನೀಡಿದರು.
ಅದೇ ದಿನ ಸಂಜೆ ಸವಣೂರಿನಲ್ಲಿ ಸ್ನೇಹ ರಶ್ಮಿ ಕಾರ್ಯಕ್ರಮ ನಡೆಯಲಿದೆ ಎಂದೂ ಸೀತಾರಾಮ ರೈಗಳು ತಿಳಿಸಿದರು.
ರೋಟರಿ ಕ್ಲಬ್‌ ಅಧ್ಯಕ್ಷ ಆನಂದ ಖಂಡಿಗ ಅವರು ರೋಟರಿ ಕ್ಲಬ್‌ ಹಮ್ಮಿಕೊಂಡ ಕಾರ್ಯಕ್ರಮಗಳ ವಿವರ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ರೋಟರಿ ವಿದ್ಯಾಸಂಸ್ಥೆಗಳ ಸಂಚಾಲಕ ಗಿರಿಜಾಶಂಕರ್‌ ತುದಿಯಡ್ಕ, ಕಾರ್ಯದರ್ಶಿ ಕಸ್ತೂರಿಶಂಕರ್‌, ಯೋಜನಾ ಸಮಿತಿ ಕಾರ್ಯದರ್ಶಿ ಹರಿರಾಯ ಕಾಮತ್‌, ಜತೆ ಕಾರ್ಯದರ್ಶಿ ಸನತ್‌ ಪಿ.ಆರ್‌., ಖಜಾಂಜಿ ಪ್ರಭಾಕರನ್‌ ನಾಯರ್‌, ರೋಟರಿ ಸಮುದಾಯ ಸೇವೆ ನಿರ್ದೇಶಕರಾದ ಬಾಲಕೃಷ್ಣ ಎಸ್‌.ಬಿ. ಲ್ಯಾಬ್‌, ಹಿರಿಯರಾದ ಬಾಪೂ ಸಾಹೇಬ್‌, ರೋಟರಿ ಕ್ಲಬ್ ಸುಳ್ಯ ಇದರ ನಿಯೋಜಿತ ಅಧ್ಯಕ್ಷೆ ಯೋಗಿತಾ ಗೋಪಿನಾಥ್‌, ಡಾ.ಪುರುಷೋತ್ತಮ ಕೆ.ಜಿ. ಜೆ.ಕೆ.ರೈ ಉಪಸ್ಥಿತರಿದ್ದರು.

whatsapp image 2024 01 04 at 1.36.44 pm

Sponsors

Related Articles

Back to top button