ಫೆಬ್ರವರಿ 15 ,16 – ವನಸುಮ ವೇದಿಕೆ ನಾಟಕೋತ್ಸವ….

ಉಡುಪಿ : ಫೆಬ್ರವರಿ 15 ಮತ್ತು 16ರಂದು ಕಟಪಾಡಿಯ ಎಸ್‍ವಿಎಸ್ ಶಾಲಾ ಸಭಾಂಗಣದಲ್ಲಿ ಸಂಜೆ ೭ ಗಂಟೆಗೆ ವನಸುಮ ವೇದಿಕೆ ನಾಟಕೋತ್ಸವ-2019-20 ನಡೆಯಲಿದೆ ಎಂದು ಸಂಸ್ಥೆಯ ಅಧ್ಯಕ್ಷ ಬಾಸುಮ ಕೊಡಗು ಹೇಳಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಪಾದುವ ರಂಗ ಅಧ್ಯಯನ ಕೇಂದ್ರದ ಕನ್ನಡ ನಾಟಕ ‘ಕೆಂಡೋನಿಯನ್ಸ್’ ಹಾಗೂ ವನಸುಮ ವೇದಿಕೆಯ ತುಳು ನಾಟಕ ‘ಇಲ್ಲ್ ಇಲ್ಲ್‍ದ ಕಥೆ’ ನಾಟಕ ಪ್ರದರ್ಶನ ಗೊಳ್ಳಲಿದೆ. ಈ ಬಾರಿಯ ನಾಟಕೋತ್ಸವದಲ್ಲಿ ಹೊಸ ಪ್ರಶಸ್ತಿಗಳನ್ನು ಆರಂಭಿಸಿದ್ದು ‘ವನಸುಮ ರಂಗ ಸಮ್ಮಾನ್’ ಪ್ರಶಸ್ತಿಗೆ ಹಿರಿಯ ರಂಗಕರ್ಮಿ ಉದ್ಯಾವರ ಮಾಧವ ಆಚಾರ್ಯರವರು ಆಯ್ಕೆಯಾಗಿರುತ್ತಾರೆ. ಇವರು ಸಮೂಹ ಉಡುಪಿ ಸಂಸ್ಥೆಯ ಮೂಲಕ ಹಲವಾರು ವರ್ಷಗಳಿಂದ ವಿಶಿಷ್ಠ ಶಿಸ್ತಿನ ರಂಗಕೈಂಕರ್ಯವನ್ನು ನಡೆಸುತ್ತಾ ಬರುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಅಮೋಘ ಟ್ರಸ್ಟ್ ಮೂಲಕ ನಿರಂತರ ರಂಗಭೂಮಿ ಹಾಗೂ ಸಾಹಿತ್ಯ ಸೇವೆ ಮಾಡುತ್ತಿರುವ ಪೂರ್ಣಿಮಾ ಸುರೇಶ್ ಇವರಿಗೆ ‘ವನಸುಮ ಪುರಸ್ಕಾರ’ ವನ್ನು ನೀಡಲಾಗುವುದು. ಎರಡೂ ಪ್ರಶಸ್ತಿಗಳು ನಗದು ಹಾಗೂ ಪ್ರಶಸ್ತಿಫಲಕವನ್ನು ಒಳಗೊಂಡಿರುತ್ತದೆ. ಫೆಬ್ರವರಿ 15 ಮತ್ತು 16ರಂದು ನಡೆಯಲಿರುವ ನಾಟಕೋತ್ಸವದಲ್ಲಿ ಈ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುವುದು. ಸಾಂಸ್ಕೃತಿಕ ಸೇವೆಗಾಗಿ ಸ್ವಸ್ತಿಕ್ ಕಲಾ ಸಂಘದ ಕಟಪಾಡಿ ರಮೇಶ್ ಕೋಟ್ಯಾನ್ ಹಾಗೂ ವೃತ್ತಿ ರಂಗ ಹಾಗೂ ಸಿನಿಮಾ ನಟ ರಘು ಪಾಂಡೇಶ್ವರ ಇವರನ್ನು ಸಮ್ಮಾನಿಸಲಾಗುವುದು ಎಂದರು.

ಉದ್ಘಾಟನಾ ಸಮಾರಂಭದಲ್ಲಿ ಕಾಪು ಶಾಸಕರಾದ ಲಾಲಾಜಿ ಮೆಂಡನ್, ಕರ್ನಾಟಕ ನಾಟಕ ಅಕಾಡೆಮಿಯ ಮಾಜಿ ಅಧ್ಯಕ್ಷ ಜೆ. ಲೋಕೇಶ್, ಹಿರಿಯ ರಂಗಕರ್ಮಿ ಪೆರ್ಡೂರು ರತ್ನಾಕರ ಕಲ್ಯಾಣಿ, ತುಳು ಸಾಹಿತ್ಯ ಅಕಾಡೆಮಿಯ ಸದಸ್ಯೆ ತಾರಾ ಆಚಾರ್ಯ ಭಾಗವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಬಿ.ಜಿ. ಮೋಹನ್‍ದಾಸ್, ಟಿ. ರವೀಂದ್ರ ಪೂಜಾರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ್ ಬೆಕ್ಕೇರಿ, ಪ್ರಗತಿಪರ ಕೃಷಿಕ ಎನ್.ವಿ. ಕೃಷ್ಣಪ್ಪ ಬಾಗವಹಿಸಲಿದ್ದಾರೆ ಎಂದೂ ಬಾಸುಮ ಕೊಡಗು ಹೇಳಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ಕೋಶಾಧಿಕಾರಿ ಕಾವ್ಯವಾಣಿ ಕೊಡಗು ಮತ್ತು ಸದಸ್ಯ ಭಾಸ್ಕರ್ ಯುಕೆ ಉಪಸ್ಥಿತರಿದ್ದರು.

Sponsors

Related Articles

Leave a Reply

Your email address will not be published. Required fields are marked *

Back to top button